ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣ ( PSI Recruitment Scam ) ಸಂಬಂಧ ಇಂದು 37ನೇ ಆರೋಪಿಯೊಬ್ಬರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಹೀಗೆ ಶರಣಾದಂತ ಆರೋಪಿಯನ್ನು 10 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ, ಕೋರ್ಟ್ ಆದೇಶಿಸಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಈಗಾಗಲೇ ಹಲವರನ್ನು ತನಿಖೆ ನಡೆಸುತ್ತಿರುವಂತ ಸಿಐಡಿ ಬಂಧಿಸಿದೆ. ತಲೆ ಮರೆಸಿಕೊಂಡಿದ್ದಂತ 37ನೇ ಆರೋಪಿ ಬೋರೇಗೌಡ ಪತ್ತೆಗಾಗಿ ಹುಡುಕಾಟ ನಡೆಸಿತ್ತು. ಇದಲ್ಲದೇ ಅವರ ಆಸ್ತಿ ಜಪ್ತಿಗೂ ಸಿಐಡಿ ಮುಂದಾಗಿತ್ತು.
ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಗೆ ಆರೋಪಿ ಬೋರೇಗೌಡ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ. ಕೋರ್ಟ್ ಮುಂದೆ ಶರಣಾದಂತ ಅವರನ್ನು 10 ದಿನಗಳ ಕಾಲ ಕೋರ್ಟ್ ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ.
ಅಂದಹಾಗೇ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಬಳಿಕ, ರಾಜ್ಯ ಸರ್ಕಾರದಿಂದ ಪರೀಕ್ಷೆಯನ್ನೇ ರದ್ದುಗೊಳಿಸಲಾಗಿತ್ತು. ಈ ಬಳಿಕ ಶೀಘ್ರವೇ ನೇಮಕಾತಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸೋದಾಗಿಯೂ ತಿಳಿಸಿತ್ತು.
BIGG NEWS: ಕಾರಂಜಾ ಮುಳುಗಡೆ; ರೈತರಿಗೆ ಹೆಚ್ಚುವರಿ ಪರಿಹಾರ ನೀಡುವುದಕ್ಕೆ ಆಗೋಲ್ಲ- ಗೋವಿಂದ್ ಕಾರಜೋಳ