Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಕಪ್ಪಾಗಿದ್ದಾನೆ ಎಂದು 11 ವರ್ಷದ ಮಗನನ್ನೇ ಹತ್ಯೆಗೈದ ಪಾಪಿ ತಂದೆ!

ಸಂಗಾತಿಗಿಂತಲೂ ‘ಅವರ’ ಜೊತೆ ಮಲಗಿದರೇ ಮಹಿಳೆಯರಿಗೆ ನೆಮ್ಮದಿಯಂತೆ! ಸಂಶೋಧನೆಯಲ್ಲಿ ಬಯಲಾದ ಅಚ್ಚರಿಯ ಸತ್ಯ

ಬಂಗಾಳದ ಮಾಜಿ ಚುನಾವಣಾಧಿಕಾರಿ ಈಗ ರಾಜ್ಯದ ‘ಮುಖ್ಯ ಕಾರ್ಯದರ್ಶಿ’: ಇದು ‘ನಾಚಿಕೆಗೇಡು’ ಎಂದ ತೃಣಮೂಲ ಕಾಂಗ್ರೆಸ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೊಟ್ಟ ಮಾತು ಉಳಿಸಿಕೊಳ್ಳಿ ಮದ್ದೂರು ಶಾಸಕ ಉದಯ್ ಗೆ ಪ್ರತಿಭಟನಾಕಾರರ ಆಗ್ರಹ
KARNATAKA

ಕೊಟ್ಟ ಮಾತು ಉಳಿಸಿಕೊಳ್ಳಿ ಮದ್ದೂರು ಶಾಸಕ ಉದಯ್ ಗೆ ಪ್ರತಿಭಟನಾಕಾರರ ಆಗ್ರಹ

By ವಸಂತ ಬಿ ಈಶ್ವರಗೆರೆ

ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ, ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭಾ ವ್ಯಾಪ್ತಿಗೆ ವಿಲೀನಗೊಳಿಸಿರುವ ಶಾಸಕ ಕೆ.ಎಂ.ಉದಯ್ ಕ್ರಮ ವಿರೋಧಿಸಿ ಗ್ರಾಪಂಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ರೈತ ಸಂಘದ ಬೆಂಬಲದೊಂದಿಗೆ ತಾಲೂಕು ಕಛೇರಿ ಎದುರು ಕಪ್ಪು ಬಾವುಟ ಪ್ರದರ್ಶನ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.

ರೈತ ನಾಯಕಿ ಸುನಂದಾ ಜಯರಾಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಗ್ರಾಮಸ್ಥರು ಪುರಸಭೆ ಆವರಣದಲ್ಲಿ ನಡೆಯಲಿದ್ದ ನಗರಸಭಾ ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ವಿಫಲಯತ್ನ ನಡೆಸಿದರು.

ಪುರಸಭೆ ಕಛೇರಿ ಸಮೀಪದ ಅನತಿ ದೂರದಲ್ಲಿ ಪ್ರತಿಭಟನೆಗಿಳಿದ ವಿವಿಧ ಗ್ರಾಮಗಳ ಗ್ರಾಮಸ್ಥರು ಪುರಸಭೆ ಕಛೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೋಲೀಸರು ಪ್ರತಿಭಟನಾಕಾರರು ಪುರಸಭೆ ಕಛೇರಿಗೆ ಬಳಿ ಬರದಂತೆ ತಾಲೂಕು ಕಛೇರಿ ಬಳಿಯೇ ದಿಗ್ಬಂಧನ ವಿಧಿಸಿದರು.

ಈಗಾಗಲೇ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿದರೇ ಹಲವಾರು ಸೌಲಭ್ಯಗಳು ಮತ್ತು ಯೋಜನೆಗಳಿಂದ ವಂಚಿತವಾಗುತ್ತವೆ ಗ್ರಾಮ ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿದರೆ ನರೇಗಾ ಯೋಜನೆ, ಬಡ ಮಕ್ಕಳಿಗೆ ಗ್ರಾಮೀಣ ಕೃಪಾಂಕ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಅನುದಾನ, ತೆರಿಗೆ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಹೀಗಾಗಿ, ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಬಾರದೆಂದು ಒತ್ತಾಯಿಸಿ ಪ್ರತಿಭಟನೆ ಮೂಲಕ ಎಚ್ಚರಿಸಲಾಗಿತ್ತು.

ಆದರೆ, ಶಾಸಕ ಉದಯ್ ಅವರು, ನಮ್ಮ ಎಲ್ಲಾ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಏಕ ಪಕ್ಷಿಯ ನಿರ್ಧಾರ ಕೈಗೊಂಡು ನಗರಸಭಾ ವ್ಯಾಪ್ತಿಗೆ ಸೇರ್ಪಡೆ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಶಾಸಕ ಉದಯ್ ಅವರ ಕ್ರಮ ವಿರೋಧಿಸಿ ನ್ಯಾಯಾಲಯದ ಮೂಲಕ ಕಾನುನಾತ್ಮಕ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಶಾಸಕರು ಎಚ್ಚೆತ್ತುಕೊಂಡು ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಗ್ರಾಮಗಳ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಜೊತೆ ಚರ್ಚಿಸಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಯಿಂದ ಕೈಬಿಡುವಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸುನಂದಾ ಜಯರಾಂ ಎಚ್ಚರಿಸಿದರು.

ಗೆಜ್ಜಲಗೆರೆ ಗ್ರಾಪಂ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ದೀಪಕ್, ಚಾಮನಹಳ್ಳಿ ಗ್ರಾಪಂ ಸದಸ್ಯ ಕೃಷ್ಣಪ್ಪ, ತಾಪಂ ಮಾಜಿ ಸದಸ್ಯ ಸತೀಶ್, ರೈತ ಮುಖಂಡರಾದ ಜಿ.ಎ.ಶಂಕರ್, ಲಿಂಗಪ್ಪಾಜಿ, ವೀರಪ್ಪ ಮುಖಂಡರಾದ ಮೋಹನ್, ಮನು, ಭಗವಾನ್, ಗೊವನಹಳ್ಳಿ ಪ್ರಸನ್ನ ಸೇರಿದಂತೆ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆ ಗಮನಕ್ಕೆ : ಕರ್ನಾಟಕದ ಎಲ್ಲಾ ಜಿಲ್ಲೆಗಳ `SP’ಗಳ ದೂರವಾಣಿ ಸಂಖ್ಯೆ ಇಲ್ಲಿದೆ

1 Min Read

`CET’ ಅಭ್ಯರ್ಥಿಗಳಿಗೆ ಎರಡು ಕೃಪಾಂಕ : ಕೆಇಎ ಘೋಷಣೆ

1 Min Read

ಗೃಹಲಕ್ಷ್ಮಿ ಯೋಜನೆಯ ಹಣ ಉಳಿಸಿ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ ಗೃಹಿಣಿ.!

1 Min Read
Recent News

SHOCKING : ಕಪ್ಪಾಗಿದ್ದಾನೆ ಎಂದು 11 ವರ್ಷದ ಮಗನನ್ನೇ ಹತ್ಯೆಗೈದ ಪಾಪಿ ತಂದೆ!

ಸಂಗಾತಿಗಿಂತಲೂ ‘ಅವರ’ ಜೊತೆ ಮಲಗಿದರೇ ಮಹಿಳೆಯರಿಗೆ ನೆಮ್ಮದಿಯಂತೆ! ಸಂಶೋಧನೆಯಲ್ಲಿ ಬಯಲಾದ ಅಚ್ಚರಿಯ ಸತ್ಯ

ಬಂಗಾಳದ ಮಾಜಿ ಚುನಾವಣಾಧಿಕಾರಿ ಈಗ ರಾಜ್ಯದ ‘ಮುಖ್ಯ ಕಾರ್ಯದರ್ಶಿ’: ಇದು ‘ನಾಚಿಕೆಗೇಡು’ ಎಂದ ತೃಣಮೂಲ ಕಾಂಗ್ರೆಸ್!

ರಾಜ್ಯದ ಜನತೆ ಗಮನಕ್ಕೆ : ಕರ್ನಾಟಕದ ಎಲ್ಲಾ ಜಿಲ್ಲೆಗಳ `SP’ಗಳ ದೂರವಾಣಿ ಸಂಖ್ಯೆ ಇಲ್ಲಿದೆ

State News
KARNATAKA

ರಾಜ್ಯದ ಜನತೆ ಗಮನಕ್ಕೆ : ಕರ್ನಾಟಕದ ಎಲ್ಲಾ ಜಿಲ್ಲೆಗಳ `SP’ಗಳ ದೂರವಾಣಿ ಸಂಖ್ಯೆ ಇಲ್ಲಿದೆ

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಕರ್ನಾಟಕ ಪೊಲೀಸ್ ಇಲಾಖೆಯು ಮಹತ್ವದ…

`CET’ ಅಭ್ಯರ್ಥಿಗಳಿಗೆ ಎರಡು ಕೃಪಾಂಕ : ಕೆಇಎ ಘೋಷಣೆ

ಗೃಹಲಕ್ಷ್ಮಿ ಯೋಜನೆಯ ಹಣ ಉಳಿಸಿ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ ಗೃಹಿಣಿ.!

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.