ಬಾಗ್ದಾದ್ (ಇರಾಕ್): ಪ್ರತಿಸ್ಪರ್ಧಿ ಇರಾನ್ ಬೆಂಬಲಿತ ಪಕ್ಷಗಳಿಂದ ಪ್ರಧಾನಿ ಹುದ್ದೆಗೆ ನಾಮನಿರ್ದೇಶನಗೊಂಡಿರುವುದನ್ನು ವಿರೋಧಿಸಿ ನೂರಾರು ಇರಾಕಿ ಪ್ರತಿಭಟನಾಕಾರರು ಬುಧವಾರ ಬಾಗ್ದಾದ್ನಲ್ಲಿ ಸಂಸತ್ತಿನ ಕಟ್ಟಡಕ್ಕೆ ಮುತ್ತಿಗೆ ಹಾಕಿದರು. ಇವರುಗಳ ಪೈಕಿ ಶಿಯಾ ನಾಯಕ ಮುಕ್ತಾದ ಅಲ್-ಸದರ್ ಅವರ ಬೆಂಬಲಿಗರಾಗಿದ್ದಾರೆ.
ಪ್ರತಿಭಟನಾಕಾರರು ಮೊಹಮ್ಮದ್ ಶಿಯಾ ಅಲ್-ಸುಡಾನಿ ಪ್ರಧಾನಿ ಹುದ್ದೆಗೆ ಉಮೇದುವಾರಿಕೆಯನ್ನು ವಿರೋಧಿಸಿದ್ದಾರೆ. ಅಲ್-ಸುಡಾನಿ ಮಾಜಿ ಮಂತ್ರಿ ಮತ್ತು ಮಾಜಿ ಪ್ರಾಂತೀಯ ಗವರ್ನರ್ ಆಗಿದ್ದಾರೆ. ಇವರು ಸಮನ್ವಯ ಚೌಕಟ್ಟಿನ ಪರವಾಗಿ ಪ್ರಧಾನ ಮಂತ್ರಿ ಹುದ್ದೆಗೆ ನಾಮನಿರ್ದೇಶನಗೊಂಡಿದ್ದಾರೆ.
ಪ್ರತಿಭಟನಾಕಾರರು ಸಂಸತ್ನಲ್ಲಿ ಹಾಡುವುದು ಮತ್ತು ನೃತ್ಯ ಮಾಡುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಒಬ್ಬ ವ್ಯಕ್ತಿ ಇರಾಕಿ ಸಂಸತ್ತಿನ ಸ್ಪೀಕರ್ನ ಮೇಜಿನ ಮೇಲೆ ಮಲಗಿರುವುದು ಕಂಡುಬಂದಿದೆ.
ಈ ವೇಳೆ ಇಲ್ಲಿ ಯಾವುದೇ ಶಾಸಕರು ಹಾಜರಿರಲಿಲ್ಲ. ಪ್ರತಿಭಟನಾಕಾರರು ಒಳಗೆ ನುಗ್ಗಿದ್ದರಿಂದ ಭದ್ರತಾ ಪಡೆಗಳು ಮಾತ್ರ ಕಟ್ಟಡದೊಳಗೆ ಇದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
Rain In Karnataka : ರಾಜ್ಯದ ಹಲವಡೆ ರಾತ್ರಿಯಿಡೀ ಭಾರಿ ಮಳೆ : ಮನೆಗಳಿಗೆ ನೀರು ನುಗ್ಗಿ ಅವಾಂತರ!