Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ದದು: ಸಿಎಂ ಸಿದ್ದರಾಮಯ್ಯ

BREAKING : ರಾಜ್ಯದಲ್ಲಿ `ಎಬೋಲಾ’ ಭೀತಿ ದೂರ: ಶಂಕಿತ ವ್ಯಕ್ತಿಯ ಲ್ಯಾಬ್ ವರದಿ ನೆಗೆಟಿವ್ | Ebola Negative

BREAKING : ‘ಧುರಂಧರ್’ ಸಿನಿಮಾದ ಪ್ರೊಡಕ್ಷನ್ ಡಿಸೈನರ್ `ಸೈನಿ ಎಸ್ ಜೋಹ್ರೇ’ ವಿರುದ್ಧ ಲೈಂಗಿಕ ಕಿರುಕುಳ ಕೇಸ್ : `FIR’ ದಾಖಲು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ: ಸೆ.9ಕ್ಕೆ ಎಜಿ, ಸೆ.12ಕ್ಕೆ ಅಭಿಷೇಕ್ ಮನುಸಿಂಘ್ವಿ ಹೈಕೋರ್ಟ್ ನಲ್ಲಿ ವಾದ
KARNATAKA

ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ: ಸೆ.9ಕ್ಕೆ ಎಜಿ, ಸೆ.12ಕ್ಕೆ ಅಭಿಷೇಕ್ ಮನುಸಿಂಘ್ವಿ ಹೈಕೋರ್ಟ್ ನಲ್ಲಿ ವಾದ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಂತ ವಿಚಾರವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಲಾಗಿದೆ. ಈ ಬೆನ್ನಲ್ಲೇ ಎಜಿ ಅವರು ಸೆ.9ಕ್ಕೆ ವಾದ ಮಂಡಿಸಿದ್ರೇ, ಸೆ.12ರಂದು ಅಭಿಷೇಕ್ ಮನು ಸಿಂಘ್ವಿ ಅವರು ತಮ್ಮ ವಾದವನ್ನು ಮಂಡಿಸಲಿದ್ದಾರೆ.

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಂತ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ನಾಗಪ್ರಸನ್ನ ಅವರನ್ನೊಳಗೊಂಡಂತ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಇಂದು ದೂರುದಾರರ ಪರವಾಗಿ ಹಿರಿಯ ವಕೀಲ ಕೆ.ಜಿ ರಾಘವನ್ ತಮ್ಮ ವಾದವನ್ನು ನ್ಯಾಯಪೀಠದ ಮುಂದಿಟ್ಟರು.

ನಾನು ಕಾನೂನು, ವಾಸ್ತವಾಂಶದ ಪ್ರಶ್ನೆಗಳ ಬಗ್ಗೆ ವಾದಿಸುತ್ತೇನೆ. ವಾಕ್ಚಾತುರ್ಯ ಮತ್ತು ವ್ಯಂಗ್ಯದಿಂದ ವಾದಿಸಲು ಬಯಸುವುದಿಲ್ಲ. ಭ್ರಟಾಚಾರ ತಡೆ ಕಾಯ್ದೆ ಸೆಕ್ಷನ್.17ಎ ಆಧರಿಸಿ ವಾದಿಸುತ್ತೇನೆ ಎಂಬುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.

ಸೆಕ್ಷನ್.7ಸಿ ಓದಲು ಬಯಸುತ್ತೇನೆ. ಅನಗತ್ಯ ಲಾಭ, ಅನುಕೂಲ ಪಡೆಯುವುದು ಕೂಡ ಕಾಯ್ದೆಯ ವ್ಯಾಪ್ತಿಯಲ್ಲಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ ಹಿರಿಯ ವಕೀಲ ಕೆ.ಜಿ ರಾಘವನ್ ವಾದವನ್ನು ಹೈಕೋರ್ಟ್ ನ್ಯಾಯಪೀಠದ ಮುಂದೆ ಮಂಡಿಸಿದರು.

ಈ ಕೇಸಿಗೆ ಸಂಬಂಧಿಸಿದಂತೆ ಈ ಮಾತು ಹೇಳುತ್ತಿಲ್ಲ. ಅನುಚಿತ ಅನುಕೂಲ ಪಡೆಯಲು ಅಧಿಕಾರಿಗಳ ಮೇಲೆ ಪ್ರಭಾವ ಬಳಸಿದರೇ ಅಪರಾಧವಾಗಲಿದೆ. ಪಡೆಯುವ ಅನುಕೂಲ ಕಾನೂನುಬಾರಿರವಾಗಿಲ್ಲದಿದ್ದರೂ ಅಪರಾಧ ಎಂಬುದಾಗಿ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಮುಂದೆ ಸೆಕ್ಷನ್.7ಸಿಯನ್ನು ಓದಿ ವಿವರಿಸಿದರು.

ವಾದ ಮುಂದುವರೆಸಿದಂತ ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ ರಾಘವನ್ ಅವರು ಯಾವುದೇ ಕಾರಣಕ್ಕೂ ರಾಜ್ಯಪಾಲರು ನೀಡಿರುವಂತ ಪ್ರಾಸಿಕ್ಯೂಷನ್ ಗೆ ತಡೆ ನೀಡಬಾರದು. ಈಗಾಗಲೇ ರಾಜ್ಯ ಸರ್ಕಾರವೇ ಹಗರಣ ನಡೆದಿರುವ ಬಗ್ಗೆ ತನಿಖಾ ಸಮಿತಿಯನ್ನು ರಚನೆ ಮಾಡಿದೆ ಎಂಬುದಾಗಿ ಕೋರಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಡಾ ಸೈಟು ಹಂಚಿಕೆಯಲ್ಲಿ ಪ್ರಭಾವ ಬೀರಿದ್ದಾರೆ. 2017ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಒಂದು ಸೈಟ್ ಗೂ ಅರ್ಹತೆ ಇಲ್ಲದವರಿಗೆ 14 ಸೈಟು ನೀಡಲಾಗಿದೆ. ಮುಡಾ ಹಗರಣದಲ್ಲಿ ಸಿದ್ಧರಾಮಯ್ಯ ಭಾಗಿಯಾಗಿದ್ದಾರೆ ಎಂಬುದಾಗಿ ಸುದೀರ್ಘವಾದವನ್ನು ದೂರುದಾರ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಕೆ.ಜಿ ರಾಘವನ್ ಹೈಕೋರ್ಟ್ ನ್ಯಾಯಪೀಠದ ಮುಂದಿಟ್ಟರು.

ದೂರುದಾರ ಸ್ನೇಹಮಯಿ ಕೃಷ್ಣ ಅವರ ಪರ ವಕೀಲರ ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠಕ್ಕೆ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡುವಂತೆ ಎಜಿ ಮನವಿ ಮಾಡಿದರು. ಅಲ್ಲದೇ ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಹೀಗಾಗಿ ಒಂದು ವಾರಗಳ ಕಾಲಾವಕಾಶ ನೀಡುವಂತೆ ಕೋರಿದರು. ಈ ವೇಳೆಯಲ್ಲಿ ಹಬ್ಬಕ್ಕೂ ಮೊದಲೇ ವಾದ ಮಂಡಿಸಿ ಮುಗಿಸಿ ಬಿಡಿ ಎಂಬುದಾಗಿ ನ್ಯಾಯಮೂರ್ತಿಗಳು ಸೂಚಿಸಿದರು.

ಎಜಿ ವಾದಿಸಿದ ಮೇಲೆ ನಾನು ವಾದ ಮಂಡಿಸುವುದಾಗಿ ಮುಖ್ಯಮಂತ್ರಿ ಪರ ಅಭಿಷೇಕ್ ಮನು ಸಿಂಘ್ವಿ ತಿಳಿಸಿದರು. ಸೆಪ್ಟೆಂಬರ್ 9 ಅಥವಾ 12ರಂದು ತಾನು ವಾದಿಸುವುದಾಗಿ ಹೇಳಿದರು. ಈ ವಾದ ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಟವು ಸೆ.9ಕ್ಕೆ ವಿಚಾರಣೆಯನ್ನು ಮುಂದೂಡಿತು.

ಅಂತಿಮವಾಗಿ ಸೆಪ್ಟೆಂಬರ್.9ಕ್ಕೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರು ಸರ್ಕಾರದ ಪರವಾಗಿ ವಾದ ಮಂಡಿಸಲಿದ್ದಾರೆ. ಸೆಪ್ಟೆಂಬರ್.12ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅವರು ತಮ್ಮ ವಾದವನ್ನು ಹೈಕೋರ್ಟ್ ನ್ಯಾಯಪೀಠದ ಮುಂದಿಡಲಿದ್ದಾರೆ. ಹೀಗಾಗಿ ಸೆಪ್ಟೆಂಬರ್.12ರಂದು ಹೈಕೋರ್ಟ್ ನಿಂದ ವಾದ, ಪ್ರತಿವಾದ ಆಲಿಸಿ, ಸಿಎಂ ಸಿದ್ಧರಾಮಯ್ಯ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಕುರಿತು ಪ್ರಶ್ನಿಸಿದ್ದಂತ ಅರ್ಜಿಯ ವಿಚಾರಣೆಯ ತೀರ್ಪನ್ನು ಪ್ರಕಟಿಸಲಿದ್ಯಾ ಅನ್ನೋದನ್ನು ಕಾದು ನೋಡಬೇಕಿದೆ.

ಸೆ.6ರಂದು ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ: ಡಿಸಿಎಂ ಡಿ.ಕೆ ಶಿವಕುಮಾರ್

BREAKING : ‘ಮನಿ ಲಾಂಡರಿಂಗ್’ ಕೇಸ್ : ‘ED’ ಯಿಂದ AAP ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್!

ಏನಿದು ‘ಚುಂಬನ ಕಾಯಿಲೆ’.? ಹೇಗೆ ಹರಡುತ್ತೆ.? ಲಕ್ಷಣಗಳೇನು.? ಚಿಕಿತ್ಸೆ ಹೇಗೆ.? ಇಲ್ಲಿದೆ ಮಾಹಿತಿ.!

Share. Facebook Twitter LinkedIn WhatsApp Email

Related Posts

ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ದದು: ಸಿಎಂ ಸಿದ್ದರಾಮಯ್ಯ

1 Min Read

BREAKING : ರಾಜ್ಯದಲ್ಲಿ `ಎಬೋಲಾ’ ಭೀತಿ ದೂರ: ಶಂಕಿತ ವ್ಯಕ್ತಿಯ ಲ್ಯಾಬ್ ವರದಿ ನೆಗೆಟಿವ್ | Ebola Negative

1 Min Read

ಹಸಿಮೆಣಸಿನಕಾಯಿ Vs ಒಣಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?ತಿಳಿಯಿರಿ

2 Mins Read
Recent News

ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ದದು: ಸಿಎಂ ಸಿದ್ದರಾಮಯ್ಯ

BREAKING : ರಾಜ್ಯದಲ್ಲಿ `ಎಬೋಲಾ’ ಭೀತಿ ದೂರ: ಶಂಕಿತ ವ್ಯಕ್ತಿಯ ಲ್ಯಾಬ್ ವರದಿ ನೆಗೆಟಿವ್ | Ebola Negative

BREAKING : ‘ಧುರಂಧರ್’ ಸಿನಿಮಾದ ಪ್ರೊಡಕ್ಷನ್ ಡಿಸೈನರ್ `ಸೈನಿ ಎಸ್ ಜೋಹ್ರೇ’ ವಿರುದ್ಧ ಲೈಂಗಿಕ ಕಿರುಕುಳ ಕೇಸ್ : `FIR’ ದಾಖಲು

ಹಸಿಮೆಣಸಿನಕಾಯಿ Vs ಒಣಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?ತಿಳಿಯಿರಿ

State News
KARNATAKA

ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ದದು: ಸಿಎಂ ಸಿದ್ದರಾಮಯ್ಯ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ದದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಅವರು ಇಂದು…

BREAKING : ರಾಜ್ಯದಲ್ಲಿ `ಎಬೋಲಾ’ ಭೀತಿ ದೂರ: ಶಂಕಿತ ವ್ಯಕ್ತಿಯ ಲ್ಯಾಬ್ ವರದಿ ನೆಗೆಟಿವ್ | Ebola Negative

ಹಸಿಮೆಣಸಿನಕಾಯಿ Vs ಒಣಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?ತಿಳಿಯಿರಿ

SHOCKING : 50 ಸಾವಿರ ರೂ.ಗೆ ಸ್ನೇಹಿತರಿಗೆ ಪತ್ನಿಯನ್ನೇ ಮಾರಾಟ ಮಾಡಿದ ಪತಿ : 7 ಮಂದಿ ಅರೆಸ್ಟ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.