ಅಫ್ಘಾನಿಸ್ಥಾನ: ಪಶ್ಚಿಮ ಅಫ್ಘಾನಿಸ್ತಾನದ ಜನನಿಬಿಡ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಪ್ರಮುಖ ಧರ್ಮಗುರು, ತಾಲಿಬಾನ್ ಅಧಿಕಾರಿಗಳು ಮತ್ತು ಸ್ಥಳೀಯ ವೈದ್ಯರು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕನಿಷ್ಠ 21 ಜನರು ಗಾಯಗೊಂಡಿದ್ದಾರೆ.
ಪಶ್ಚಿಮ ನಗರ ಹೆರಾತ್ನ ಗುಜರ್ಗಾ ಮಸೀದಿಯಲ್ಲಿ ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಶುಕ್ರವಾರದ ಇಂದು ವಿಶೇಷ ಪ್ರಾರ್ಥನೆಯಲ್ಲಿ ತೊಡಗಿದ್ದಂತ ಸಂದರ್ಭದಲ್ಲಿ ಸ್ಪೋಟ ಸಂಭವಿಸಿದೆ.
ಕಳೆದ ಎರಡು ದಶಕಗಳಿಂದ ದೇಶದ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರಗಳನ್ನು ಟೀಕಿಸಿದ್ದಕ್ಕಾಗಿ ಅಫ್ಘಾನಿಸ್ತಾನದಾದ್ಯಂತ ಹೆಸರುವಾಸಿಯಾಗಿದ್ದ ಪ್ರಮುಖ ಧರ್ಮಗುರು ಮುಜೀಬ್-ಉಲ್ ರೆಹಮಾನ್ ಅನ್ಸಾರಿ ಅವರನ್ನು ಸ್ಫೋಟವು ಕೊಂದುಹಾಕಲಾಗಿದೆ. ವಿದೇಶಿ ಪಡೆಗಳು ಹಿಂದೆ ಸರಿಯುತ್ತಿದ್ದಂತೆ ಒಂದು ವರ್ಷದ ಹಿಂದೆ ದೇಶದ ಮೇಲೆ ನಿಯಂತ್ರಣವನ್ನು ವಶಪಡಿಸಿಕೊಂಡ ತಾಲಿಬಾನ್ಗೆ ಅನ್ಸಾರಿ ಅವರನ್ನು ಹತ್ತಿರದವರೆಂದು ಪರಿಗಣಿಸಲಾಗಿದೆ.
ಅವರ ಸಾವನ್ನು ಮುಖ್ಯ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ದೃಢಪಡಿಸಿದ್ದಾರೆ.
ಸ್ಫೋಟದಿಂದ ಗಾಯಗೊಂಡ 18 ಶವಗಳು ಮತ್ತು 21 ಗಾಯಾಳುಗಳನ್ನು ಆಂಬ್ಯುಲೆನ್ಸ್ಗಳು ಹೆರಾತ್ನ ಆಸ್ಪತ್ರೆಗಳಿಗೆ ಸಾಗಿಸಿವೆ ಎಂದು ಹೆರಾತ್ ಆಂಬ್ಯುಲೆನ್ಸ್ ಕೇಂದ್ರದ ಅಧಿಕಾರಿ ಮೊಹಮ್ಮದ್ ದೌದ್ ಮೊಹಮ್ಮದಿ ತಿಳಿಸಿದ್ದಾರೆ.
ಇಂದು ಮಸೀದಿಯಲ್ಲಿ ನಡೆದಂತ ಸ್ಫೋಟದ ಹೊಣೆಯನ್ನು ತಕ್ಷಣವೇ ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.