ಬೆಂಗಳೂರು: ನಿನ್ನೆ ಬಿಜೆಪಿಯವರ ಜನಸ್ಪಂದನ ಸಮಾವೇಶ ( BJP Janaspandana Program ) ದೊಡ್ಡಬಳ್ಳಾಪುರದಲ್ಲಿ ನಡೆಯಿತು. ಹಲವು ಬಾರಿ ಮುಂದೂಡಿ ಜನಾಕ್ರೋಶದ ನಡುವೆ ಸಂಭ್ರಮಾಚರಣೆ ಮಾಡಿರುವ ಬಿಜೆಪಿ ಸ್ನೇಹಿತರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಇದು ಸರ್ಕಾರದ ಸಾಧನೆಯ ಉತ್ಸವಕ್ಕಿಂತ, ಕೇವಲ ಮುಖ್ಯಮಂತ್ರಿ ಹಾಗೂ ಮೂರ್ನಾಲ್ಕು ಮಂತ್ರಿಗಳ ಉತ್ಸವವಾಗಿ ಕಂಡಿತು. ಮುಖ್ಯಮಂತ್ರಿಗಳು ಹೇಳಿರುವ ಅಲ್ಪ ಸಾಧನೆ ಪಟ್ಟಿ ಕೂಡ ಸುಳ್ಳಿನ ಕಂತೆ ಎಂಬುದಾಗಿ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ( Priyank Kharge ) ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಬೆಲೆ ಏರಿಕೆಯಿಂದ ಜನಸಾಮಾನ್ಯರ ಬೇಬು ಸುಡುತ್ತಿದೆ. ಜನ ಸಾಮಾನ್ಯರು, ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರು, ಬೆಂಗಳೂರು ಮುಳುಗುತ್ತಿದ್ದರೂ, ನಿರುದ್ಯೋಗ ಯುವಕರು ಆಕ್ರೋಶದಲ್ಲಿದ್ದರೂ ನಾವು ಈ ಉತ್ಸವ ಮಾಡಲೇ ಬೇಕು ಎಂದು ಬಿಜೆಪಿಯವರು ಈ ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ ಹೇಳುವುದಕ್ಕಿಂತ ಕಾಂಗ್ರೆಸ್ ಟೀಕೆ ಮಾಡಿರುವುದೇ ಹೆಚ್ಚಾಗಿ ಕಂಡಿತು ಎಂದರು.
SHOCKING NEWS: ದುಬೈನಿಂದ ಕೊಚ್ಚಿಗೆ ಹೊರಟಿದ್ದ ವಿಮಾನದಲ್ಲಿ ಪ್ರಜ್ಞಾಹೀನಳಾಗಿ ಬಿದ್ದ ಮಹಿಳೆ ಸಾವು
ವಿದ್ಯಾನಿಧಿ ಯೋಜನೆ ಅಡಿಯಲ್ಲಿ 20 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕಳೆದ ತಿಂಗಳು ಘೋಷಣೆಯಾದ ಯೋಜನೆ. ಸರ್ಕಾರದ ಮಾಹಿತಿ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನ ಅರ್ಜಿ ಹಾಕಿಲ್ಲ. ಆದರೆ 20 ಲಕ್ಷ ಫಲಾನುಭವಿಗಳು ಎಂದು ಹೇಳುತ್ತಾರೆ. 150 ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರಿಗೆ ಹಾಸ್ಟೆಲ್ ನಿರ್ಮಾಣ ಎಂದು ಹೇಳಿದ್ದಾರೆ. ಇನ್ನು ಮುಂದೆ ಅವರು ಭಾ,ಣ ಮಾಡುವ ಮುನ್ನ ಬಜೆಟ್ ಪುಸ್ತಕ ನೋಡಿ ಮಾತನಾಡಬೇಕು. ಅವರು ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ಘೋಷಿಸಿರುವುದೇ 259 ಕೋಟಿ. ಇದರಲ್ಲಿ 159 ಹಾಸ್ಟೆಲ್ ನಿರ್ಮಾಣ ಮಾಡಲು ಸಾಧ್ಯವೇ? ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಕಟ್ಟಿದ ಹಾಸ್ಟೆಲ್ ಗಳನ್ನು ಇನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ಎಷ್ಟು ಹೊಸ ಹಾಸ್ಟೆಲ್ ಕಟ್ಟಿಸಿದ್ದಾರೆ ತೋರಿಸಲಿ ಎಂದು ಸವಾಲ್ ಹಾಕಿದರು.
ಬಿಪಿಎಲ್ ಕಾರ್ಡುದಾರರಿಗೆ ಹಾಗೂ ಪರಿಶಿಷ್ಟರಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಹೇಳಿದ್ದೀರಿ. ಇದೇ ಆ.24ರಂದು ಇದನ್ನು ರದ್ದು ಆದೇಶ ಮಾಡಿದಿರಿ. ಕಾಂಗ್ರೆಸ್ ಪ್ರಶ್ನಿಸಿದಾಗ ಆದೇಶಕ್ಕೆ ತಡೆ ನೀಡಿದಿರಿ. ಇದರಲ್ಲಿ ಫಲಾನುಭವಿಗಳೆಷ್ಟು ಎಂದು ಹೇಳಲಿಲ್ಲ. 50 ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂದು ಹೇಳುತ್ತೀರಿ. 2021ರಲ್ಲಿ ಎಷ್ಟು ನಿರುದ್ಯೋಗಿ ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಸಂಖ್ಯೆ ಗೊತ್ತಾ? 30,056 ಆತ್ಮಹತ್ಯೆ ಆಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶ ಹೇಳುತ್ತದೆ ಎಂದರು.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಜೀವ ಬೆದರಿಕೆ ಹಾಕಿದ ಹತ್ಯೆ ಆರೋಪಿಯ ಸಹೋದರ ಅರೆಸ್ಟ್
ನೀವು ಭಾಷಣ ಮಾಡುವ ಮುನ್ನ ನಿಮ್ಮ ಮಂತ್ರಿಗಳು ಸದನದಲ್ಲಿ ನೀಡಿರುವ ಉತ್ತರಗಳನ್ನು ಗಮನಿಸಿ. ನಿಮ್ಮ ಬೃಹತ್ ಕೈಗಾರಿಕ, ಸಣ್ಣ ಕೈಗಾರಿಕಾ ಹಾಗೂ ಕೌಶಲ್ಯ ಅಭಿವೃದ್ಧಿ ಮೂರು ಇಲಾಖೆ ಸಚಿವರು ಸದನದಲ್ಲಿ ನೀಡಿರುವ ಉತ್ತರದ ಪ್ರಕಾರ ಕಳೆದ 2 ವರ್ಷಗಳಲ್ಲಿ ನಾವು ನಮ್ಮ ಇಲಾಖೆಯಿಂದ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ ಎಂದು ಹೇಳಿದ್ದಾರೆ. ಇವರ ಮೂರು ವರ್ಷಗಳ ಆಡಳಿತದಲ್ಲಿ ಉದ್ಯೋಗ ಮೇಳದಿಂದ 1600ಕ್ಕಿಂತ ಹೆಚ್ಚು ಉದ್ಯೋಗ ಕೊಡಿಸಿಲ್ಲ ಎಂದು ಕಿಡಿಕಾರಿದರು.
ಇನ್ನು 1600 ರೈಲ್ವೇ ಮಾರ್ಗ ವಿದ್ಯುತೀಕರಣ ಮಾಡಿದ್ದೇವೆ ಎಂದು ಘಂಠಾಘೋಷವಾಗಿ ಹೇಳಿದ್ದಾರೆ. ಮೋದಿಯವರು ಇವರಿಗೆ ಸಾಧನೆ ಮಾಡುವುದು ಹೇಗೆ ಎಂದು ಹೇಳಿಕೊಡದಿದ್ದರೂ ಸುಳ್ಳು ಹೇಳುವುದನ್ನು ಚೆನ್ನಾಗಿ ಹೇಳಿಕೊಟ್ಟಿದ್ದಾರೆ. ಕರ್ನಾಟಕ ದೇಶದಲ್ಲಿ ರೈಲ್ವೇ ಮಾರ್ಗ ವಿದ್ಯುತೀಕರಣದಲ್ಲಿ 23ನೇ ಸ್ಥಾನದಲ್ಲಿದೆ. ಕೇವಲ ಶೇ.42.49 ಮಾರ್ಗಳು ಮಾತ್ರ ವಿದ್ಯುತೀಕರಣವಾಗಿದೆ. ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬಿಜೆಪಿ ಸಂಸದರನ್ನು ಕೊಟ್ಟಿರುವುದು ಕರ್ನಾಟಕದಲ್ಲಿ. ನಮ್ಮಲ್ಲಿ 25 ಸಂಸದರಿದ್ದಾರೆ. ದಕ್ಷಿಣ ಭಾರತದಲ್ಲಿ ರೈಲ್ವೆ ಮಾರ್ಗದ ವಿದ್ಯುತೀಕರಣದಲ್ಲೂ ನಮ್ಮ ರಾಜ್ಯ ಹಿಂದುಳಿದಿದೆ ಎಂದು ಹೇಳಿದರು.
ಹಿಂದೂ ಕಾರ್ಯಕರ್ತನಿಗೆ ಜೀವ ಬೆದರಿಕೆ ಪ್ರಕರಣ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಯ ಸಹೋದರ ಅರೆಸ್ಟ್
ನಮ್ಮ ಸಿಎಂ ಸಾವಿರಾರು ಜನರ ಮುಂದೆ ಸುಳ್ಳು ಹೇಳಿದರೆ ಹೇಗೆ? ಇದನ್ನು ನೋಡಿ ನನಗೆ ಬೇಸರವಾಗಿದೆ. ಮುಖ್ಯಮಂತ್ರಿಗಳು ನಿನ್ನೆ ಭಾಷಣದಲ್ಲಿ ಅನುರಾಗ್ ತಿವಾರಿ ಅವರ ಸಾವಿಗೆ ಕಾಂಗ್ರೆಸ್ ಕಾರಣ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅವರು ವಾಟ್ಸಪ್ ಬಿಟ್ಟು ಪತ್ರಿಕೆ ಓದಲಿ. ನಿಮ್ಮ ನಿಯಂತ್ರಣದಲ್ಲಿರುವ ಸಿಬಿಐ ಈ ಸಾವು ಆಕ್ಸಿಜನ್ ಕೊರತೆಯಿಂದ ಆಗಿದೆ ಎಂದು ವರದಿ ನೀಡಿದೆ ಎಂದರು.
ಇನ್ನು ನಿನ್ನೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಿಗೆ ಬೆದರಿಕೆ ಹಾಕುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಮರಳು, ದಿಂಬು, ಪ್ರಶ್ನೆಪತ್ರಿಕೆ ಸೋರಿಕೆ, ಸೋಲಾರ್ ಅಕ್ರಮ ತನಿಖೆ ಮಾಡುತ್ತೇವೆ ಎಂದಿದ್ದಾರೆ. ತನಿಖೆ ಮಾಡಿ ಸ್ವಾಮಿ, ಯಾರು ಬೇಡ ಎಂದಿದ್ದಾರೆ? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಅಥವಾ ಪಕ್ಷದಿಂದ ಅಧಿಕೃತವಾಗಿ ಯಾರಾದರೂ ತಡೆದಿದ್ದಾರಾ? ಯಾರಿಗೆ ಈ ಬೇದರಿಕೆ? ಇಡಿ, ಸಿಬಿಐ, ಐಟಿ ಸೇರಿದಂತೆ ಎಲ್ಲಾ ಸಂಸ್ಥೆ ಸಿಮ್ಮ ನಿಯಂತ್ರಣದಲ್ಲಿದೆ. ತನಿಖೆ ಮಾಡಿ ತಪ್ಪಿತಸ್ಥರು ಶಿಕ್ಷೆ ಅನುಭವಿಸಲಿ ಎಂದು ವಾಗ್ದಾಳಿ ನಡೆಸಿದರು.
ಜೆಇಇ ಅಡ್ವಾನ್ಸ್ಡ್ 2022 ಫಲಿತಾಂಶ ಪ್ರಕಟ: ಕರ್ನಾಟಕದ ಹುಡುಗ ಶಿಶಿರ್ಗೆ ಅಗ್ರಸ್ಥಾನ
ಪ್ರತಿ ಹಗರಣ ವಿಚಾರ ಬಂದಾಗ ನಮ್ಮ ಬಳಿ ಸಾಕ್ಷಿ ಕೇಳುತ್ತೀರಾ, ಈಗ ನೀವು ಕೂಡ ಸಾಕ್ಷಿ ಇಟ್ಟು ಮಾತನಾಡಿ. ನಾಳೆಯಿಂದ ಸದನ ಆರಂಭವಾಗುತ್ತಿದ್ದು ಎಲ್ಲವನ್ನೂ ಇಡಿ ಚರ್ಚೆಗೆ ನಾವು ಸಿದ್ಧ. ಪ್ರತಿ ಹಗರಣದ ಚರ್ಚೆ ಆಗಲಿ. ನಿನ್ನೆ ಸಿಎಂ ರೌದ್ರಾವತಾರದಿಂದ ಕಾಂಗ್ರೆಸ್ ಗೆ ಧಮ್ಮು, ತಾಕತ್ತು ಇದ್ದರೆ ಬಿಜೆಪಿ ಸಾಧನೆ, ಪ್ರಗತಿ ತಡೆಯಲಿ ಎಂದಿದ್ದಾರೆ. ಕಾಂಗ್ರೆಸ್ ನಿಮ್ಮನ್ನು ಯಾವಾಗ ತಡೆಹಿಡಿದಿದೆ? ಮೂರು ಬಾರಿ ಜನೋತ್ಸವ ಕಾರ್ಯಕ್ರಮ ಮುಂದೂಡಿ, ಹೆಸರು ಬದಲಿಸಿದ್ದು ಕಾಂಗ್ರೆಸ್ ನವರಾ? ಎಂದು ಪ್ರಶ್ನಿಸಿದರು.
ಸಾಧನಾ ಸಮಾವೇಶ, ಜನೋತ್ಸವ ಹಾಗೂ ಜನಸ್ಪಂದನ ಎಂದು ಹೆಸರು ಬದಲಿಸಿದವರು ಯಾರು? ಜನೋತ್ಸವ ಮುಂದೂಡಿ, ಹೆಸರು ಬದಲಿಸಿ ಎಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ತಡೆದಿದ್ದರೆ? ನಿಮ್ಮಲ್ಲೆ ಸ್ಪಷ್ಟತೆ ಗಟ್ಟಿತನವಿಲ್ಲದಿದ್ದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಯಾಕೆ? ನಿಮ್ಮ ಜನೋತ್ಸವ ಮುಂದೂಡಿದ್ದು, ಜನಾಕ್ರೋಶದಿಂದ. ನಿಮ್ಮ ಕಾರ್ಯವೈಖರಿ ನೋಡಿ ನಿಮ್ಮದೇ ಕಾರ್ಯಕರ್ತರು ಗೃಹಸಚಿವರ ಮನೆಗೆ ನುಗ್ಗಿ ಪ್ರತಿಭಟಿಸಿದ್ದು, ಜನರು ನಳೀನ್ ಕುಮಾರ್ ಕಟೀಲ್ ಅವರ ಕಾರು ಅಲ್ಲಾಡಿಸಿದ್ದಕ್ಕೆ, ಸುನೀಲ್, ಅಂಗಾರ ಸೇರಿದಂತೆ ಸಚಿವರಿಗೆ ಸ್ವಂತ ಕ್ಷೇತ್ರದಲ್ಲೇ ದಿಗ್ಬಂದನ ಹಾಕಿದ್ದನ್ನು ನೋಡಿ ಕಾರ್ಯಕ್ರಮ ಮುಂದೂಡಿದಿರಿ. ಆದರೆ ನೀವು ನಮಗೆ ಯಾಕೆ ಹೆದರಿಸುತ್ತೀರಿ? ಜನೋತ್ಸವ ಜನ ಸ್ಪಂದನ ಆಗಿದ್ದು ಯಾಕೆ? ಎಂಬುದಕ್ಕೆ ಉತ್ತರಿಸಿ ಎಂದರು.
SHOCKING NEWS: ದುಬೈನಿಂದ ಕೊಚ್ಚಿಗೆ ಹೊರಟಿದ್ದ ವಿಮಾನದಲ್ಲಿ ಪ್ರಜ್ಞಾಹೀನಳಾಗಿ ಬಿದ್ದ ಮಹಿಳೆ ಸಾವು
ಈ ಜನಸ್ಪಂದನ ಮಾಡಿ ಬಿಜೆಪಿ ಅವರು ಸ್ವಯಂ ಕಲ್ಯಾಣಕ್ಕೆ ಇದೆಯೇ ಹೊರತು ಜನರ ಕಲ್ಯಾಣಕ್ಕೆ ಅಲ್ಲ. ಅವರಿಗೆ ಜನರ ಹಿತದ ಬಗ್ಗೆ ಆಸಕ್ತಿ ಇಲ್ಲ ಸಾಬೀತುಪಡಿಸಿದ್ದಾರೆ. ಅವರಿಗೆ ಜನರ ತೊಂದರೆ ಬಗ್ಗೆ ಕಾಳಜಿ ಇಲ್ಲದೇ ತಮ್ಮ ಸ್ವಂತ ಹಿತಾಸಕ್ತಿಗೆ ಕಾರ್ಯಕ್ರಮ ಮಾಡಿದ್ದಾರೆ. ಇದನ್ನು ನೋಡಿ ರಾಜಕುಮಾರ್ ಅವರ ಯಾರೇ ಕೂಗಾಡಲಿ ಹಾಡು ನೆನಪಾಗುತ್ತದೆ. ಬಿಜೆಪಿಯವರು ಜನ ಎಷ್ಟೇ ಸಂಕಷ್ಟದಲ್ಲಿದ್ದರೂ ನಾವು ನಮ್ಮ ಸಂಭ್ರಮ ಆಚರಿಸುತ್ತೇವೆ ಎಂದು ದಪ್ಪ ಚರ್ಮ ಪ್ರದರ್ಶಿಸಿದ್ದಾರೆ. ಬೊಮ್ಮಾಯಿ ಅವರು ತಮ್ಮ ಗುರು ಮೋದಿ ಅವರಿಂದ ಚೆನ್ನಾಗಿ ಪಾಠ ಕಲಿತಿದ್ದಾರೆ. ಮೋದಿ ಅವರು ಎಲ್ಲದಕ್ಕೂ ನೆಹರೂ ಕಾರಣ ಎಂದರೆ, ಬೊಮ್ಮಾಯಿ ಅವರು ಹಿಂದಿನ ಸರ್ಕಾರ ಕಾರಣ ಎನ್ನುತ್ತಾರೆ. ಕುಣಿಯಲು ಗೊತ್ತಿಲ್ಲ ಎಂದರೆ ನೆಲ ಡೊಂಕು ಎಂದು ಹೇಳುತ್ತಾರೆ. ಈ ಹಿಂದೆ ಐದು ವರ್ಷ ಈಗ ಮೂರು ವರ್ಷ ಇವರೇ ಆಡಳಿತ ಮಾಡಿದ್ದಾರೆ ಎಂದು ಹೇಳಿದರು.
ನಾನು ವಿನಯಪೂರ್ವಕವಾಗಿ ಬಿಜೆಪಿಯವರಿಗೆ ಕೇಳುವುದು ನಿಮಗೆ ಧಮ್ಮು, ತಾಕತ್ತು, ಧೈರ್ಯ ಇದ್ದರೆ ಪಿಎಸ್ ಐ, ಕೆಪಿಟಿಸಿಎಲ್, ಬೋವಿ ಅಭಿವೃದ್ಧಿ ನಿಗಮ ಹಗರಣ, ಪಿಡಬ್ಲ್ಯೂಡಿ ನೇಮಕಾತಿ, ಗುತ್ತಿಗೆದಾರರ ಸಂಘದ ಆರೋಪ, ಬಿಟ್ ಕಾಯಿನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡುತ್ತೀರಾ? ನಿಮಗೆ ತಾಕತ್ತು ಇದ್ದರೆ ಕನಕಗಿರಿ ಶಾಸಕ ಪಿಎಸ್ಐ ನೇಮಕಾತಿಗೆ ಮಧ್ಯಸ್ಥಿಕೆ ವಹಿಸಿ 15 ಲಕ್ಷ ಹಣ ಪಡೆದಿರುವುದಾಗಿ ಬಹಿರಂಗವಾಗಿ ಹೇಳಿದ್ದಾರೆ, ನಿಮ್ಮ ಸಿಎಂ ಕುರ್ಚಿಗೆ 2500ಕೋಟಿ ಕೊಟ್ಟಿದ್ದೀರಿ ಎಂದು ಯತ್ನಾಳ್ ಹೇಳಿದ್ದಾರೆ. ಸಚಿವ ಮಾಧುಸ್ವಾಮಿ ಇದು ತಳ್ಳುವ ಸರ್ಕಾರ ಎಂದಿದ್ದಾರೆ, ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ನಿಮಗಿದೆಯಾ? ಎಂದು ಸವಾಲ್ ಹಾಕಿದರು.
ಕೇಂದ್ರದ ಮುಂದೆ ನಿಂತು ರಾಜ್ಯದ ಜಿಎಸ್ ಟಿ ಪಾಲು ಕೊಡಿಸುವ ತಾಕತ್ತು ಇದೆಯಾ? ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳ ಜನರ ಮುಂದೆ ಹೋಗಿ, ರೈತರ ಮುಂದೆ ಹೋಗಿ ತಮ್ಮ ಸಾಧನೆ ಹೇಳುವ ತಾಕತ್ತು ಇದೆಯಾ? ಶಾಲಾ ಮಕ್ಕಳ ಮುಂದೆ ಹೋಗಿ ಅವರ ಸಮವಸ್ತ್ರ, ಪಠ್ಯಪುಸ್ತಕ, ಸಾಕ್ಸ್, ಶೂ ಸಿಕ್ಕಿಲ್ಲ ಎಂದು ಹೇಳುವ ತಾಕತ್ತು ಇದೆಯಾ? ಎಂದರು.
ಪಿಎಸ್ಐ, ಕೆಪಿಟಿಸಿಎಲ್ ಸೇರಿದಂತೆ ಕಳೆದ ಮೂರು ವರ್ಷಗಳಿಂದ ಕೆಪಿಎಸ್ ಸಿ ಹಾಗೂ ಕೆಇಎ ಪರೀಕ್ಷೆಗಳಲ್ಲಿ ಸುಮಾರು 20 ಲಕ್ಷ ಯುವಕರು ನೇಮಕಾತಿ ಪರೀಕ್ಷೆ ಬರೆದಿದ್ದಾರೆ, ನಿರುದ್ಯೋಗಿ ಯುವಕರ ಮುಂದೆ ನೇಮಕಾತಿ ಅಕ್ರಮದ ಸಮಜಾಯಿ ನೀಡುವ ತಾಕತ್ತು ಇದೆಯಾ? ಇದನ್ನು ಮಾಡುವುದು ಬಿಟ್ಟು ಕಾಂಗ್ರೆಸ್ ಪ್ರಶ್ನೆ ಮಾಡುತ್ತಿರುವುದು ಯಾಕೆ? ನಿನ್ನೆ ಯಾರೊಬ್ಬರೂ ಸಾಧನೆ ಬಗ್ಗೆ ಮಾತನಾಡಿಲ್ಲ, ಕೇವಲ ದಮ್ಮು, ತಾಕತ್ತು ಬಗ್ಗೆ ಮಾತನಾಡಿದ್ದಾರೆ ಎಂದರು.
ನಿಮಗೆ ತಾಕತ್ತು ಇದ್ದರೆ ಪಂಚಮಸಾಲಿ, ಪರಿಶಿಷ್ಟ ಸಮುದಾಯ, ಕುರುಬ ಸಮುದಾಯದ ಸ್ವಾಮೀಜಿಗಳು ಮೀಸಲಾತಿ ವಿಚಾರವಾಗಿ ಹೋರಾಟ ಮಾಡುತ್ತಿದ್ದು, ಅವರ ಮುಂದೆ ಹೋಗಿ ಮಾತನಾಡಿ. ಈ ಕಾರ್ಯಕ್ರಮದಲ್ಲಿ ಜನಸ್ಪಂದನೆ ಎಲ್ಲಿದೆ? ಇದು ಬಿಜೆಪಿ vs ಬಿಜೆಪಿ ಕಾರ್ಯಕ್ರಮ ಆಗಿದಂತಿದೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮೂಲ ಬಿಜೆಪಿಗರೇ ಕಾಣಿಸಲಿಲ್ಲ. ಯಡಿಯೂರಪ್ಪನವರನ್ನು ಅನಿವಾರ್ಯವಾಗಿ ಇಟ್ಟುಕೊಂಡಿದ್ದಾರೆ. ಅನಿವಾರ್ಯವಾಗಿ ಕೆಲವು ಮೂಲ ಬಿಜೆಪಿಗರು ಮಾತ್ರ ಇದ್ದಾರೆ. ಮಾತೆತ್ತಿದರೆ ಕೇವಲ ಕಾಂಗ್ರೆಸ್ ಬಗ್ಗೆ ಮಾತನಾಡುತ್ತೀರಿ, ನಿಮ್ಮ ಪಕ್ಷದಲ್ಲಿ ಆಗುತ್ತಿರುವುದು ಏನು? ಸೋಮಣ್ಣ, ಈಶ್ವರಪ್ಪ ಸೇರಿದಂತೆ ಹಲವು ಹಿರಿಯ ನಾಯಕರು ಕಾಣಿಸಲಿಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿ ಈಗಾಗಲೇ ಐವರು ಸಿಎಂ ಆಗಿದ್ದು, ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಕೇವಲ ಇಬ್ಬರು ಮಾತ್ರ. ರಾಷ್ಟ್ರೀಯ ಅದ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಲ್ಲರೂ ನಾಪತ್ತೆ. ನಿಮ್ಮ ಸರ್ಕಾರದಲ್ಲಿ ಸಾಧನೆ ಆಗಿಲ್ಲ ಎಂದು ನಿಮ್ಮ ಹೈಕಮಾಂಡ್ ಒಪ್ಪಿದೆಯೇ? ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ತೇಲಾಡುತ್ತಿದ್ದರು. ಇವರು 4B ಅಂದರೆ ಬಿರಿಯಾನಿ, ಬಸ್, ಬಟ್ಟೆ, ಬಿಯರ್ ಕೊಟ್ಟರೂ ಕುರ್ಚಿ ತುಂಬಿಸಲು ಆಗಲಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಜನರೋಧನೆ ಜನವೇದನೆ ಉಂಟಾಗಿರುವಾಗ ಅವರ ಕಷ್ಟಕ್ಕೆ ಸ್ಪಂದಿಸುವ ಬದಲು ಇಂತಹ ಉತ್ಸವ ಮಾಡಿದರೆ ಜನರ ಶಾಪ ತಟ್ಟುವುದರಲ್ಲಿ ಅನುಮಾನವಿಲ್ಲ. ಧರ್ಮ, ಜಾತಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದೀರಿ. ಮಳೆಯಿಂದ ಜನ ಸಾಯುತ್ತಿದ್ದು, ರೈತರು, ನಿರುದ್ಯೋಗಿಗಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿಯಲ್ಲಿ ಕಮಿಷನ್ ದುಡ್ಡಲ್ಲಿ ಸಂಭ್ರಮ ಆಚರಿಸಿ ಅವರ ಕಷ್ಟದ ಮೇಲೆ ಬರೆ ಎಳೆಯಲು ಇಂತಹ ಕಾರ್ಯಕ್ರಮ ಮಾಡಬೇಡಿ. ಇವರು ಜನಸ್ಪಂದನ ಮಾಡಬೇಕಾದರೆ ಅತಿವೃಷ್ಟಿಯಿಂದ ನಲುಗಿರುವ ರೈತರಿಗೆ ಪರಿಹಾರ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿ. ಕೆಪಿಎಸ್ ಸಿ ಫಲಿತಾಂಶ ಪ್ರಕಟಿಸಿ. ಹಗರಣಗಳನ್ನು ನ್ಯಾಯಾಂದ ತನಿಖೆಗೆ ನೀಡಿ ಎಂದರು.
ಇತ್ತೀಚೆಗೆ ವಿಷನ್ ಬೆಂಗಳೂರು ಬೆಟರ್ ಬೆಂಗಳೂರಿನ ನಮ್ಮ ವರದಿಯಲ್ಲಿ 7 ಶಿಫಾರಸ್ಸು ಇದ್ದು ಅವುಗಳನ್ನು ಚರ್ಚೆ ಮಾಡಿ ಜನರಿಗೆ ಸ್ಪಂದಿಸಿ ಎಂದು ತಿಳಿಸಿದರು.
ನಾಳೆಯಿಂದ ಸದನದಲ್ಲಿ ದಾಖಲೆ ಇಟ್ಟು ಮಾತನಾಡಿ ಎಂದು ಆಗ್ರಹಿಸುತ್ತೀರಾ, ‘ ನಾನು ಪಿಎಸ್ಐ, ಬಿಟ್ ಕಾಯಿನ್, ಬೋವಿ ನಿಗಮ ಸೇರಿದಂತೆ ಎಲ್ಲ ಹಗರಣದಲ್ಲಿ ದಾಖಲೆ ಇಟ್ಟು ಮಾತನಾಡಿದ್ದೇವೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ರಾಜಕೀಯ ಅನುಭವದಲ್ಲಿ ಯಾವತ್ತೂ ಹಿಟ್ ಅಂಡ್ ರನ್ ಮಾಡಿಲ್ಲ. ಬಿಜೆಪಿಯವರು ಮಾಡಿರುವ ಆರೋಪದ ದಾಖಲೆಗಳನ್ನೂ ಇಟ್ಟು ಚರ್ಚೆ ಮಾಡಲಿ’ ಎಂದು ಉತ್ತರಿಸಿದರು.
ಸದನದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪಗಳನ್ನು ಸದನದಲ್ಲಿ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, ‘ಸದನದಲ್ಲಿ ಚರ್ಚಿಸಲು ಅನೇಕ ವಿಷಯಗಳಿವೆ. ಶಾಸಕಾಂಗ ಪಕ್ಷದ ನಾಯಕರು 40% ಕಮಿಷನ್ ವಿಚಾರ ಚರ್ಚಿಸಲು ಸ್ಪೀಕರ್ ಗೆ ಪತ್ರ ಬರೆದಿದ್ದರು. ನಾನು ಎರಡು ಬಾರಿ ಪತ್ರ ರವಾನಿಸಿ ಮನವಿ ಮಾಡಿದರು ಸ್ಪೀಕರ್ ಅವರು ಅವಕಾಶ ನೀಡಲಿಲ್ಲ. ಸದನ ನಡೆಸುವ ಜವಾಬ್ದಾರಿ ಕೇವಲ ವಿರೋಧ ಪಕ್ಷಗಳದ್ದು ಮಾತ್ರವೇ? ಸಂಸದೀಯ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಅವರು ಯಾವುದೇ ಮಸೂದೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ನಂತರ ಏಕಾಏಕಿ ತರುತ್ತಾರೆ. ಗೋಹತ್ಯೆ ನಿಷೇಧ ಮಸೂದೆ ಪ್ರತಿ ಸಚಿವರ ಬಳಿಯೇ ಇರಲಿಲ್ಲ. ಇದು ಸದನ ನಡೆಸುವ ರೀತಿಯೇ?’ ಎಂದು ಕೇಳಿದರು.