ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಬಳಿಯಲ್ಲಿ, ಇಂದು ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಶರಾವತಿ ನದಿಗೆ ಬಿದ್ದಿದೆ. ಇದನ್ನು ಕಂಡಂತ ಸ್ಥಳೀಯರು ಪ್ರಯಾಣಿಕರನ್ನು ರಕ್ಷಿಸಿ ನೀರಿನಿಂದ ಹೊರಗೆ ಕರೆತಂದ ಕಾರಣ, ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ.
ಸರ್ ರೈತರ ಸಾಲಮನ್ನಾ ಮಾಡುವಿರಾ.? ಏಯ್ ನೆಕ್ಸ್ಟ್ ಪ್ರಶ್ನೆ ಕೇಳಪ್ಪ: ಸಿಎಂ ಬೊಮ್ಮಾಯಿ ಉತ್ತರ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಸಮೀಪದ ಶರವಾತಿ ನದಿಯ ಹೊಳೆಬಾಗಿಲಿನಲ್ಲಿ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಇದರಿಂದಾಗಿ ಬಸ್ಸು ನದಿಯಲ್ಲಿ ಮುಳುಗುವಂತಾಗಿತ್ತು.
ಶರಾವದಿ ಹಿನ್ನೀರಿನಲ್ಲಿ ಬಸ್ ಬಿದ್ದದ್ದು ಗಮನಿಸಿದಂತ ಸ್ಥಳೀಯರು ಸೇರಿದಂತೆ ಜನರು ಬಸ್ಸಿನಲ್ಲಿದ್ದಂತ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ತಕ್ಷಣವೇ ಪ್ರಯಾಣಿಕರು ಬಸ್ಸಿನಿಂದ ಹೊರಗೆ ಇಳಿದು ಬಂದ ಪರಿಣಾಮ, ಪ್ರಾಣಾಪಾಯವು ತಪ್ಪಿದಂತೆ ಆಗಿದೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಸಂವಿಧಾನದ ಪ್ರತಿ ಹಂಚಿಕೆ – ಸಿಎಂ ಬೊಮ್ಮಾಯಿ
ಅಂದಹಾಗೇ ಸಾಗರದಿಂದ ಸಿಗಂಧೂರು ಚೌಡೇಶ್ವರಿ ದರ್ಶನಕ್ಕಾಗಿ ಪ್ರಯಾಣಿಕರನ್ನು ಖಾಸಗಿ ಬಸ್ ಕರೆದೊಯ್ಯುತ್ತಿತ್ತು ಎನ್ನಲಾಗಿದೆ. ನದಿಯಲ್ಲಿ ಬಿದ್ದಿದ್ದಂತ ಬಸ್ಸನ್ನು ಹಿಟಾಚಿ ಮೂಲಕ ಮೇಲೆ ಎತ್ತಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಈ ಘಟನೆ ನಡೆದಿದೆ.