ಗದಗ: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ದೇಗುಲ ಅರ್ಚಕರು ಶುದ್ಧವಾಗಿ ಕೈತೊಳೆಯಲ್ಲ. ಹಾಗಾಗಿ ದೇವಸ್ಥಾನಗಳಲ್ಲಿ ನೀಡುವ ತೀರ್ಥ ಕುಡಿಯಬಾರದು. ಅವೆಲ್ಲ ಅವೈಜ್ಞಾನಿಕ ಎಂದಿದ್ದಾರೆ.
ಇನ್ನು ಮಾತು ಮುಂದುವರೆಸಿದ ಮಾಜಿ ಸಚಿವೆ, “ನಮ್ಮ ಮನೆಯಲ್ಲಿ ನೀರು ಇಲ್ವಾ? ಕೃಷ್ಣಯ್ಯ ಶೆಟ್ಟಿ ಗಂಗಾಜಲ ತಂದು ಕೊಟ್ಟರು, ಅಲ್ಲಿ ಹೆಣ ತೇಲುತ್ತೆ. ಅಲ್ಲಿ ಹೆಣ ಸುಟ್ಟು ಗಂಗಾ ನದಿಗೆ ಎಸೆಯುತ್ತಾರೆ. ಇನ್ನು ಕೆಲವರು ಹೇಳ್ತಾರೆ, ಮಂಗಳ ಮುಖಿಯರು ದೇವರು ಅಂತಾ. ಅದು ತಪ್ಪು. ಯಾರಾದರೂ ಒಂಟಿಯಾಗಿ ಸಿಕ್ಕರೆ ಅವ್ರು ಎತ್ತಿಹಾಕಿಕೊಂಡು ಹೋಗಿ ಕೊಂದೇ ಬಿಡ್ತಾರೆ. ಅಷ್ಟೊಂದು ಹಿಂಸೆ ನೀಡುತ್ತಾರೆ. ಸಾಕಷ್ಟು ಉದಾಹರಣೆ ಇವೆ. ಇನ್ನು ಗಂಡಸರು ಕೂಡಾ ಆ ವೇಷವನ್ನ ಹಾಕಿಕೊಂಡು ಮಂಗಳಮುಖಿ ಅಂತಾರೆ. ಅವ್ರನ್ನ ದುಡಿಸಿಕೊಳ್ಳುವ ಕೆಲಸವಾಗಬೇಕು ಎಂದರು.
ಇನ್ನು ಇದೇ ವೇಳೆ ರಾಜ್ಯ ಸರ್ಕಾರ ದೈವ ನರ್ತಕರಿಗೆ ಮಾಸಾಶನ ನೀಡುವ ಆದೇಶವನ್ನ ವಿರೋಧಿಸಿದರು. ಅವ್ರಿಗೆ 2 ಸಾವಿರ ರೂ. ಮಾಸಾಶನ ನೀಡುವ ಬದಲು ಉದ್ಯೋಗ ನೀಡಿ, ಮಾನವ ಶ್ರಮವನ್ನ ಸರ್ಕಾರ ಬಳಸಿಕೊಳ್ಳಬೇಕು. ಅದನ್ನ ಬಿಟ್ಟು ನಾನು ದೇವರು ಅಂತಾ ಕುಣಿದಾಗ, ಅದಕ್ಕೆ ಎರಡು ಸಾವಿರ ಕೊಡಬಾರದು ಎಂದರು.
ತ್ರಿಪುರಾದಲ್ಲಿ ಘೋರ ದುರಂತ : ತಾಯಿ, ಸಹೋದರಿ ಸೇರಿ ನಾಲ್ವರನ್ನು ಕೊಲೆಗೈದ ಅಪ್ರಾಪ್ತ ಬಾಲಕ !
BREAKING NEWS : ಮಂಗಳೂರಿನಲ್ಲಿ ಭೀಕರ ಅಪಘಾತ ; ಬೈಕ್ಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ದಂಪತಿ ಸಾವು