ನವದೆಹಲಿ: ಗುರುವಾರ ನಿಧನರಾದ ರಾಣಿ ಎಲಿಜಬೆತ್-2 ( Queen Elizabeth II ) ಅವರ ಗೌರವಾರ್ಥವಾಗಿ ಪ್ರೀಮಿಯರ್ ಲೀಗ್ ( Premier League ) ಈ ವಾರಾಂತ್ಯದಲ್ಲಿ (ಸೋಮವಾರ ಸಂಜೆಯ ಪಂದ್ಯ ಸೇರಿದಂತೆ) ತನ್ನ ಎಲ್ಲಾ ಪಂದ್ಯಗಳನ್ನು ಮುಂದೂಡಿದೆ.
ಈ ಕುರಿತಂತೆ ಐಪಿಎಲ್ ಪಂದ್ಯಾವಳಿ ಆಯೋಜಕರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಣಿ ಎಲಿಜಬೆತ್ 2 ಅವರಿಗೆ ಗೌರವ ಸೂಚಕವಾಗಿ, ಈ ವಾರಾಂತ್ಯದ ಪ್ರೀಮಿಯರ್ ಲೀಗ್ ಪಂದ್ಯವನ್ನು ಮುಂದೂಡಲಾಗುವುದು ಎಂದು ತಿಳಿಸಿದೆ.
ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ, ಪ್ರೀಮಿಯರ್ ಲೀಗ್ ಕ್ಲಬ್ ಗಳು ರಾಣಿ ಎರಡನೇ ಎಲಿಜಬೆತ್ ಗೆ ಗೌರವ ಸಲ್ಲಿಸಿದವು. ಅವರ ಅಸಾಧಾರಣ ಜೀವನ ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಲು ಮತ್ತು ಗೌರವ ಸೂಚಕವಾಗಿ, ಈ ವಾರಾಂತ್ಯದ ಪ್ರೀಮಿಯರ್ ಲೀಗ್ ಪಂದ್ಯದ ಸುತ್ತನ್ನು ಸೋಮವಾರ ಸಂಜೆಯ ಪಂದ್ಯ ಸೇರಿದಂತೆ ಮುಂದೂಡಲಾಗುವುದು ಎಂದು ಹೇಳಿದೆ.
As a mark of respect to Her Majesty Queen Elizabeth II, this weekend’s Premier League match round will be postponed.
— Premier League (@premierleague) September 9, 2022