ಮೈಸೂರು: ನಾಡಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥನೆ ಮಾಡಿಕೊಂಡಿರುವೆ ಅಂತ ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಅವರು ಇಂದು ನಾಡ ದೇವತೆ ಉತ್ಸಮ ಮೂರ್ತಿ ಚಾಮುಂಡೇಶ್ವರಿಗೆ ನಮನ ಸಲ್ಲಿಸಿದ ಬಳಿಕ ಅವರು ಈ ಹೇಳಿಕೆ ನೀಡಿದರು. ಇದೇ ವೇಳೆ ಅವರು ಮಾತನಾಡುತ್ತ ನಾಡಿನ ಜನತೆಗೆ ಶುಭಕೋರಿದರು. ಸಾವಿರಾರು ಮಂದಿ ಈ ಬಾರಿ ಈ ಸಂಭ್ರಬದಲ್ಲಿ ಭಾಗವಹಿಸಿದ್ದಾರೆ ಅಂತ ಸಂತಸ ವ್ಯಕ್ತಪಡಿಸಿದರು.
ಇಂದು ಮಹಿಶಾರುನ್ನು ವಧೆ ಮಾಡಿರುವಂತಹ ದಿನವಾಗಿದ್ದು, ಜನರಿಗೆ ಒಳಿತನ್ನು ದೇವತೆ ಮಾಡಲಿ ಅಂತ ತಿಳಿಸಿದರು.
BIGG NEWS: ಮೈಸೂರಿನಲ್ಲಿ ಜಂಬೂ ಸವಾರಿಗೆ ಕ್ಷಣಗಣನೆ ; ಅರಮನೆಯಲ್ಲಿ 10ನೇ ದಿನದ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ| Mysore dasara
ಮೈಸೂರು: ನಾಡಿನೆಲ್ಲೆಡೆ ಇಂದು ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎರಡು ವರ್ಷಗಳ ನಂತರ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಅದರಲ್ಲೂ ಮೈಸೂರಿನಲ್ಲಿ ಜಂಬುಸವಾರಿಗೆ ಕ್ಷಣಗಣನೆ ಶುರುವಾಗಿದೆ.
ಶರನ್ನವರಾತ್ರಿಯ 10ನೇ ದಿನವಾದ ಇಂದು ಅರಮನೆಯಲ್ಲಿ ಸಾಂಪ್ರದಾಯಿಕ ವಿಜಯದಶಮಿ ಆಚರಣೆ ನೆರವೇರಲಿದ್ದು, ಇದಕ್ಕಾಗಿ ಸಾಂಸ್ಕೃತಿಕ ನಗರ ಸಜ್ಜಾಗಿದೆ. ಬೆಳಗ್ಗೆ 9.45 ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು ಆನೆ ಅರಮನೆ ಬಾಗಿಲಿಗೆ ಬರುತ್ತದೆ. ಅಲ್ಲಿ ಅವುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ 10.15 ಕ್ಕೆ ಕಲ್ಯಾಣ ಮಂಟಪದಲ್ಲಿ ಪೂಜೆ ಹಾಗೂ ವಜ್ರಮುಷ್ಠಿ ಕಾಳಗ ನಡೆಯಲಿದ್ದು, ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯ ಯಾತ್ರೆಯನ್ನು ಮಾಡಿ ನಂತರ ಭುವನೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಬನ್ನಿ ಮರಕ್ಕೆ ಶಮಿ ಪೂಜೆ ಸಲ್ಲಿಸುತ್ತಾರೆ. ವಿಜಯಯಾತ್ರೆ ಮುಗಿದ ನಂತರ ಅರಮನೆಗೆ ವಾಪಸ್ ಆಗಿ ಚಾಮುಂಡೇಶ್ವರಿ ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ವಿಜಯದಶಮಿಗೆ ಸಾಂಪ್ರದಾಯಿಕವಾಗಿ ಕೊನೆಗೊಳ್ಳುತ್ತದೆ.
ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36-2.50ರವರೆಗೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆ ನೆರವೇರಲಿದೆ. ಸಂಜೆ 5.07-ದ 5.18ರವರೆಗೆ ಶುಭ ಮೀನ ಲಗ್ನದಲ್ಲಿ ಅಂಬಾವಿಲಾಸ ಅರಮನೆಯಲ್ಲಿ ವಿಜಯದಶಮಿ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ಕೊಡಲಿದ್ದಾರೆ.ಪಂಜಿನ ಕವಾಯತು: ಸಂಜೆ 7.30ಕ್ಕೆ ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು ಜರುಗಲಿದೆ. ಇದರೊಂದಿಗೆ ಸಂಭ್ರಮದ ನಾಡಹಬ್ಬಕ್ಕೆ ತೆರೆ ಬೀಳಲಿದೆ.