ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಅವರ ಕುಟುಂಬದಲ್ಲಿಇಂದು ನೀರವ ಮೌನವೇ ಆವರಿಸಿಕೊಂಡಿದೆ ಈ ಸಂದರ್ಭದಲ್ಲಿ ಪ್ರವೀಣ್ ಪತ್ನಿ ನೂತನ ಮಾತನಾಡಿ ತನ್ನ ದುಃಖವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
Rain In Karnataka : ವಾಯುಭಾರ ಕುಸಿತ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ
ಮತ್ತೆ ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು.ʻ ತನ್ನ ಗಂಡನ ಕೊಲೆಗೈದವರನ್ನು ಕೂಡಲೇ ಗಲ್ಲಿಗೇರಿಸಿ ʼ ಕಣ್ಣೀರಿಡುತ್ತಾ ದುಃಖ ಹಂಚಿಕೊಂಡಿದ್ದಾರೆ. ಬೆಳ್ಳಾರೆಯಲ್ಲಿ ಈಗ ಒಬ್ಬೊಬ್ಬರೆ ಓಡಾಡೋದಕ್ಕೆ ಭಯ ಶುರುವಾಗಿದೆ.
Rain In Karnataka : ವಾಯುಭಾರ ಕುಸಿತ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ
ರಾಜ್ಯದಲ್ಲೂ, ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ. ಆರೋಪಿಗಳಿಗೆ ಯಾವುದೇ ಜಾಮೀನು ನೀಡಬಾರದು . ಅವರು ಮತ್ತೆ ಮತ್ತೆ ಈ ರೀತಿಯ ಕೃತ್ಯವೆಸಗುತ್ತಾರೆ. ಪ್ರವೀಣ್ ಮನೆಗೆ ಮಾಡೋದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ ಹೆಚ್ಚು ದುಡಿದಿದ್ದಾರೆ. ತನಿಖೆಯನ್ನು ಎನ್ಐಎಗೆ ಒಪ್ಪಿಸಬೇಕು. ಕೊಲೆ ಯಾರೇ ಮಾಡಿದ್ದರೂ ಅವರಿಗೆ ಕೂಡಲೇ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ