ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿ ಅಂತಿಮ ಯಾತ್ರೆ ಬಳಿಕ ಬಿಗುವಿನ ವಾತವರಣ ನಿರ್ಮಾಣಗೊಂಡಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನನ್ನು ನೋಡಲು ಕನಿಷ್ಟ ಪಕ್ಷ ಆಸ್ಪತ್ರೆಗೆ ಬಂದಿಲ್ಲ. ಪಾರ್ಥಿವ ಶರೀರ ವನ್ನೂ ನೋಡಲು ಬರುವಾಗಲು ಇಂದು ಮಧ್ಯಾಹ್ನವಾಗಿದೆ ಆ ಕಾರಣಕ್ಕಾಗಿ ಕಾರ್ಯಕರ್ತರು ಕಿಚ್ಚು ಹಚ್ಚಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸಚಿವ ನಳೀನ್ ಕುಮಾರ್ ಕಟೀಲ್ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿ ಜಗ್ಗಾಡಿದ್ದಾರೆ. ಪೊಲೀಸ್ ಬಂದೋಬಸ್ತಿನಲ್ಲಿ ಕಟೀಲು ಪಾರಾಗಿದ್ದಾರೆ. ಇನ್ನೂ ಘಟನಾ ಸ್ಥಳದಲ್ಲಿ ಪೊಲೀಸರು ಲಾಠ ಚಾರ್ಜ್ ಮಾಡಿದ್ದಾರೆ ಇದಕ್ಕೂ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.