ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ಇರುವ ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳ ನಂತರ ಪ್ರತ್ಯಕ್ಷವಾಗಿದ್ದಾರೆ ವಿದೇಶದಲ್ಲಿ ಇದ್ದುಕೊಂಡು ವಿಡಿಯೋ ಮುಖಾಂತರ ಹೇಳಿಕೆ ನೀಡಿದ್ದು ಮೇಲ್ 31 ರಂದು 10 ಗಂಟೆಗೆ ಎಸ್ಐಟಿ ವಿಚಾರಣೆಗೆ ಹಾಜರಾಗಲಿದ್ದೇನೆ ಎಂದು ಹೇಳಿದ್ದಾರೆ.
ಇದೀಗ ಈ ಒಂದು ವಿಡಿಯೋ ವಿಚಾರ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಚಿವರುಗಳು ಎಲ್ಲಾ ಪಕ್ಷದ ನಾಯಕರಗಳು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂದು ತಿಳಿಸಿದ್ದಾರೆ.
ತನ್ನ ವಿಡಿಯೋದಲ್ಲಿ ಪಜ್ವಲ್, ನನ್ನ ವಿರುದ್ಧ ಪಿತೂರಿ ನಡೆದಿದೆ, ಷಡ್ಯಂತ್ರವೊಂದಕ್ಕೆ ತಾನು ಬಲಿಯಾಗಿದ್ದೇನೆ ಅಂತ ಹೇಳಿರುವುದಕ್ಕೆ ಪ್ರತಿಕ್ರಯಿಸಿದ ಶಿವಕುಮಾರ್, ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಮಾತಾಡುವವರ ಬಾಯಿಗೆ ಬೀಗ ಹಾಕಲಾಗುತ್ತಾ ಅಂತ ಹೇಳಿದರು. ರಾಹುಲ್ ಗಾಂಧಿಯ ಹೆಸರು ಸಹ ಪ್ರಜ್ವಲ್ ಪ್ರಸ್ತಾಪ ಮಾಡಿದ್ದಾರೆ ಎಂದಾಗ ಶಿವಕುಮಾರ್ ಎಲ್ಲಾದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದರು.