ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿರಬಹುದು. ಆದರೇ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲೇ ಅವರು ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಇಂತಹ ಪವರ್ ಸ್ಟಾರ್ ಫ್ಯಾನ್ ಡಮ್ ಆಪ್ ಬಿಡುಗಡೆ ಮಾಡಲಾಗಿದ್ದು, ಇನ್ಮುಂದೆ ಅಭಿಮಾನಿಗಳಿಗೆ ಅಪ್ಪು ಇನ್ನಷ್ಟು ಹತ್ತಿರವಾಗಿಯೇ ಇರಲಿದ್ದಾರೆ.
ಇಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಡಾ.ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಹೊರಬಂದಂತ ವಿಶ್ವದ ಮೊಟ್ಟ ಮೊದಲ ಫ್ಯಾನ್ ಡಮ್ ಆಪ್ ಅನ್ನು ಬಿಡುಗಡೆ ಮಾಡಿದರು. ಇದೊಂದು ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಜೀವನಾಧಾರಿತ ಎಐ ತಂತ್ರಜ್ಞಾನ ಆಧಾರಿತ ಮೊಬೈಲ್ ಆಪ್ ಆಗಿದೆ. ಇದನ್ನು ಕನ್ನಡದ ಅಪ್ಪು ಎಂಬುದಾಗಿಯೂ ಕರೆಯಲಾಗುತ್ತದೆ.
ಏನಿದು ಡಾ.ಪುನೀತ್ ರಾಜ್ ಕುಮಾರ್ ಅವರ ಫ್ಯಾನ್ ಡಮ್ ಆಪ್?
ಇದೊಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತ ಆಪ್ ಆಗಿದೆ. ಇದೊಂದು ವಿಶ್ವದ ಮೊಟ್ಟಮೊದಲ ಫ್ಯಾನ್ ಡಮ್ ಆಪ್ ಆಗಿದೆ. ಏಕೆಂದರೇ ಇಲ್ಲಿಯವರೆಗೂ ಒಬ್ಬ ನಟನ ಬಗ್ಗೆ ಯಾವುದೇ ಆಪ್ ಬಂದಿಲ್ಲ. ಆದರೇ ಈಗ ಅಪ್ಪು ಬಗ್ಗೆ ಮಾಹಿತಿ ನೀಡುವಂತ ಆಪ್ ಲಾಂಚ್ ಮಾಡಲಾಗಿದೆ.
ಇಲ್ಲಿ ನಾ ಕಂಡ ಅಪ್ಪು ಅನ್ನುವಂತ ಒಂದು ಪಾಡ್ ಕಾಸ್ಟ್ ಕೂಡ ಇಲ್ಲಿದೆ. ಇಲ್ಲಿ ಪುನೀತ್ ರಾಜ್ ಕುಮಾರ್ ಬಗ್ಗೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿದ್ದಾರೆ. ಇದನ್ನು ಆಂಕರ್ ಅನುಶ್ರೀ ಅವರು ಸಂದರ್ಶನ ಮಾಡಿದ್ದಾರೆ. ಒಟ್ಟಾರೆಯಾಗಿ ಪುನೀತ್ ರಾಜ್ ಕುಮಾರ್ ಬಗ್ಗೆ ಸಂಪೂರ್ಣ ಮಾಹಿತಿಯೊಂದು ಈ ಆಪ್ ನಲ್ಲಿ ಲಭ್ಯವಾಗಲಿದ್ದು, ಅಪ್ಪು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದಂತೆ ಆಗಿದೆ.
ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ‘ಹೆಚ್ಚುವರಿ ವೇತನ ಬಡ್ತಿ’ ಗೊಂದಲದ ಕುರಿತು ಸರ್ಕಾರದಿಂದ ಮಹತ್ವದ ಮಾಹಿತಿ
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ರಾಜ್ಯದ ‘ಗ್ರಾಮ ಪಂಚಾಯ್ತಿ’ಗಳಲ್ಲಿ ಈ ಎಲ್ಲಾ ‘ಸೇವೆ’ಗಳು ಲಭ್ಯ
ವಾಟ್ಸಾಪ್ ಹೊಸ ವೈಶಿಷ್ಟ್ಯ ; ರಿಪ್ಲೈ ಮಾಡದ ಬಳಕೆದಾರರಿಗೆ ಸಂದೇಶ ಕಳುಹಿಸುವ ಮಿತಿ ಪರಿಚಯ








