Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಏನು ಕೊಡುಗೆ ಕೊಟ್ಟಿಲ್ಲ, ಡಿಕೆ ಶಿವಕುಮಾರನ್ನು ‘CM’ ಮಾಡಿ : ಪ್ರಣವಾನಂದ ಶ್ರೀ ಹೇಳಿಕೆ

26/04/2026 11:25 AM

ಪಕ್ಷದಲ್ಲಿ ಏನು ತೀರ್ಮಾಗಳು ಆಗಿದೆಯೋ ಅವು ಚಾಲ್ತಿಯಲಿ ಬರುತ್ತವೆ : ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ

26/04/2026 11:06 AM

BREAKING : ಹುಬ್ಬಳ್ಳಿಯಲ್ಲಿ ಮತ್ತೆ ‘FLY91’ ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆ : 40 ನಿಮಿಷ ಆಗಸದಲ್ಲಿ ಹಾರಾಟ

26/04/2026 10:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ‘ಹೆಚ್ಚುವರಿ ವೇತನ ಬಡ್ತಿ’ ಗೊಂದಲದ ಕುರಿತು ಸರ್ಕಾರದಿಂದ ಮಹತ್ವದ ಮಾಹಿತಿ
KARNATAKA

ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ‘ಹೆಚ್ಚುವರಿ ವೇತನ ಬಡ್ತಿ’ ಗೊಂದಲದ ಕುರಿತು ಸರ್ಕಾರದಿಂದ ಮಹತ್ವದ ಮಾಹಿತಿ

By kannadanewsnow0926/10/2025 3:55 PM

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರುಗಳಿಗೆ ದಿನಾಂಕ 01-06-2016ರಿಂದ ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ 01-11-2018ಕ್ಕೆ ಮೂಲವೇತನದೊಂದಿಗೆ ವಿಲೀನಗೊಳಿಸುವಾಗ ಉಂಟಾದ ಗೊಂದಲದ ಬಗ್ಗೆ ಮಹತ್ವದ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆ ಹಂಚಿಕೊಂಡಿದೆ.

ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ಉಲ್ಲೇಖ(2)ರ ಅನ್ವಯ ದಿನಾಂಕ: 01-06-2016 ರಿಂದ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ: 01-11-2018 ಲವೇತನದೊಂದಿಗೆ ವಿಲೀನಗೊಳಿಸುವಾಗ ಉಂಟಾದ ಗೊಂದಲಗಳ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಉಲ್ಲೇಖ(1)ರ ಉಡುಪಿ ಜಿಲ್ಲಾ ಉಪನಿರ್ದೇಶಕರು ಕೋರಿರುತ್ತಾರೆ. ಈ ಸಂಬಂಧ ಉಲ್ಲೇಖ(3)ರ ಅನ್ವಯ ಈ ಕಛೇರಿಯಿಂದ ಅಗತ್ಯ ಸ್ಪಷ್ಟಿಕರಣ ನೀಡಲಾಗಿರುತ್ತದೆ. ಉಲ್ಲೇಖ(3)ರ ಸ್ಪಷ್ಟಿಕರಣದ ನಂತರದಲ್ಲಿ ಇತರೆ ಜಿಲ್ಲೆಗಳಿಂದಲೂ ಸಹ ನೀಡಲಾದ ಸ್ಪಷ್ಟಿಕರಣಕ್ಕೆ ವಿರುದ್ಧವಾಗಿ ವೇತನ ನಿಗದಿಗೊಳಿಸಲಾಗಿದ್ದು, ಈ ಹಿನ್ನಲೆಯಲ್ಲಿ ಉಲ್ಲೇಖ(3)ರಂತೆ ಕ್ರಮವಹಿಸುವ ಬಗ್ಗೆ ಸ್ಪಷ್ಠಿಕರಿಸುವಂತೆ ದೂರವಾಣಿ ಕರೆಗಳು ಸ್ವೀಕೃತವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಹ ಅನ್ವಯಿಸುವಂತೆ ಸಮಗ್ರ ಸುತ್ತೋಲೆಯನ್ನು ಹೊರಡಿಸುವುದು ಸೂಕ್ತವೆಂದು ಪರಿಗಣಿಸಿ ಈ ಕೆಳಕಂಡಂತೆ ಸ್ಪಷ್ಟಿಕರಿಸಿದೆ ಎಂದಿದ್ದಾರೆ.

ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ದಿನಾಂಕ:01-06-2016 ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ: 01-11-2018 ಕ್ಕೆ ಮೂಲವೇತನದೊಂದಿಗೆ ವಿಲೀನಗೊಳಿಸುವಾಗ ದಿ:20.10.2018 ರ ಸರ್ಕಾರ ಆದೇಶ ಸಂಖ್ಯೆ: ಆಇ 28 ಎಸ್.ಆರ್.ಪಿ 2018ರ ಆದೇಶದನ್ವಯ ವೇತನವನ್ನು ನಿಗದಿಪಡಿಸಬೇಕಾಗಿರುತ್ತದೆ ಎಂದು ಹೇಳಿದ್ದಾರೆ.

ಈ ರೀತಿ ವೇತನ ನಿಗದಿಪಡಿಸುವಾಗ ದಿ:01.06.2016 ಕ್ಕೆ ಮಂಜೂರು ಮಾಡಿರುವ ಹೆಚ್ಚುವರಿ ವೇತನ ಬಡ್ತಿಯು ನಿಶ್ಚಿತವಾಗಿದ್ದು, ಕಾಲಕಾಲಕ್ಕೆ ಸದರಿ ಮೊತ್ತ ಪರಿಷ್ಕರಣೆಗೆ ಅವಕಾಶವಿರುವುದಿಲ್ಲ. ಈ ಹಿನ್ನಲೆಯಲ್ಲಿ ದಿ:20.10.2018 ರ ಆದೇಶದಂತೆ ವೇತನ ನಿಗದಿಪಡಿಸುವಾಗ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.

1. ದಿನಾಂಕ: 01.11.2018 ರಲ್ಲಿ ಇದ್ದ ಮೂಲವೇತನ : (ದಿ:01.11.2018 ರಲ್ಲಿದ್ದ ಮೂಲವೇತನ) + (2016 ರಲ್ಲಿ ಮಂಜೂರಾದ ಹೆಚ್ಚುವರಿ ವೇತನ ಬಡ್ತಿ ಮೊತ್ತ)
2. ದಿನಾಂಕ: 01.11.2018 ಕ್ಕೆ ವಿಲೀನಗೊಳಿಸಿದ ನಂತರ ಮೂಲವೇತನ: (ಕ್ರಸಂ.(1)ರ ಒಟ್ಟಾರೆ ಮೊತ್ತ
3. ದಿನಾಂಕ: 01.11.2018 ಕ್ಕೆ ಪರಿಷ್ಕೃತ ವೇತನ ಶ್ರೇಣಿಯ ಅನ್ವಯಿಸುವ ವೇತನ ಹಂತದಲ್ಲಿ ವೇತನ ನಿಗದಿ: [ಹುದ್ದೆಯ ವೇತನ ಶ್ರೇಣಿಯಲ್ಲಿನ ವಾರ್ಷಿಕ ವೇತನ ಬಡ್ತಿಯ ಮುಂದಿನ ಹಂತ]
4. ಮುಂದಿನ ವಾರ್ಷಿಕ ಬಡ್ತಿ ದಿನಾಂಕ: [ಯಥಾಸ್ಥಿತಿ]

ಇದನ್ನು ಉದಾಹರಣೆ ರೂಪವಾಗಿ ಈ ಕೆಳಕಂಡಂತೆ ವಿವರಿಸಿದೆ.

1. ದಿನಾಂಕ: 31.10.2018 ಕ್ಕೆ ಲಭ್ಯವಿದ್ದ, ಮೂಲವೇತನ: ರೂ.37900+600(ಹೆ.ವೇ.ಬಡ್ತಿ)/-
2. ದಿನಾಂಕ: 01.11.2018 ಕ್ಕೆ ಹೆಚ್ಚುವರಿ ವೇತನ ಬಡ್ತಿ:.38500/-
ವಿಲೀನಗೊಳಿಸಿದ ನಂತರದ ಮೂಲ ವೇತನ:.38850/-
3. ದಿನಾಂಕ: 01.11.2018 ಕ್ಕೆ 2018ರ ಪರಿಷ್ಕೃತ ವೇತನ ಶ್ರೇಣಿ ಯಲ್ಲಿನ ವಾರ್ಷಿಕ ವೇತನ ಬಡ್ತಿಯ ಮುಂದಿನ ವೇತನ ಹಂತ 4. ಮುಂದಿನ ವಾರ್ಷಿಕ ವೇತನ ಬಡ್ತಿ ದಿನಾಂಕ : ಸಂದರ್ಭಾನುಸಾರ ಮೊದಲನೇ ಜನವರಿ- 2019 ಅಥವಾ ಮೊದಲನೇ ಜುಲೈ-2019

“ದಿ:20.10.2018 ರ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪುನರ್ ನಿಗದಿಗೆ ಅವಕಾಶ ನೀಡಿರುವುದಿಲ್ಲ”.

2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿ:01.07.2017 ರಿಂದ ದಿ:30.06.2018 ರ ಅವಧಿಯಲ್ಲಿ ಮಾತ್ರ ವೇತನ ಪುನರ್ ನಿಗದಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತಾಪಿತ ವೇತನ ನಿಗದಿಯು ದಿ:30.06.2018 ರ ನಂತರದ ಅವಧಿಗೆ ಸಂಬಂಧಿಸಿರುವುದರಿಂದ ಮತ್ತೊಮ್ಮೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪುನ‌ ನಿಗದಿಗೆ ಅವಕಾಶವಿರುವುದಿಲ್ಲ. ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ದಿನಾಂಕ:01-06-2016 ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ: 01-II-2018 ವೇತನದೊಂದಿಗೆ ವಿಲೀನಗೊಳಿಸಿ ವೇತನ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಮೇಲಿನಂತೆ ಸ್ಪಷ್ಠಿಕರಿಸುತ್ತಾ ಅದರಂತೆ ಮುಖ್ಯೋಪಾಧ್ಯಾಯರುಗಳಿಗೆ ಸೂಚಿಸಿದೆ. ಒಂದು ವೇಳೆ ಇದಕ್ಕೆ ವ್ಯತಿರಿಕ್ತವಾಗಿ ವೇತನ ನಿಗದಿಪಡಿಸಿದ್ದಲ್ಲಿ ಅಂತಹ ಪ್ರಕರಣಗಳನ್ನು ಪುನರ್ ಪರಿಶೀಲಿಸಿ ಮರು ವೇತನ ನಿಗದಿಪಡಿಸುವುದು ಹಾಗೂ ಈ ಮುಂಚೆ ನೀಡಲಾದ ಹೆಚ್ಚುವರಿ ವೇತನ/ ಭತ್ಯೆಗಳನ್ನು ಸಂಬಂಧಿಸಿದವರಿಂದ ಕಟಾಯಿಸಿ ಸರ್ಕಾರದ ಲೆಕ್ಕ-ಶೀರ್ಷಿಕೆ ಸಂಖ್ಯೆ “0202-01-102-9-00 -LED-BBB”(K-2_Challan_Ref:-Purpose: Deduct-Refund) ಜಮಾ ಮಾಡಿ ನಿರ್ದೇಶಕರು(ಪ್ರೌಢಶಿಕ್ಷಣ) ರವರಿಗೆ ವರದಿ ಮಾಡುವುದು. ವೇತನವನ್ನು ಮೇಲ್ಕಂಡಂತೆ ನಿಗದಿಪಡಿಸಿದ ನಂತರವೇ ನವೆಂಬರ್-2020 ರ ಮಾಹೆಯ ವೇತನವನ್ನು ಸೆಳೆಯತಕ್ಕದ್ದು.

ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳು ಈ ಬಗ್ಗೆ ವೈಯಕ್ತಿಕ ಗಮನಹರಿಸಿ ತಮ್ಮ ಜಿಲ್ಲೆಗಳಲ್ಲಿನ ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ವೇತನ ನಿಗದಿಯನ್ನು ಪುನರ್ ಪರಿಶೀಲಿಸಿ ಮೇಲಿನಂತೆ ವೇತನ ನಿಗದಿಯಾಗಿರುವುದನ್ನು ಖಚಿತ ಪಡಿಸಿಕೊಳ್ಳುವುದು. ವ್ಯತಿರಿಕ್ತವಾಗಿ ವೇತನ ನಿಗದಿಪಡಿಸಲಾದ ಪ್ರಕರಣಗಳಲ್ಲಿ ಹೆಚ್ಚುವರಿ ವೇತನ ಪಾವತಿಯಾಗಿರುವ ಮೊತ್ತವನ್ನು ಕಟಾವಣೆ ಮಾಡಿ ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮಾ ಆಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರುಗಳ ಜವಾಬ್ದಾರಿಯಾಗಿರುತ್ತದೆ.

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ರಾಜ್ಯದ ‘ಗ್ರಾಮ ಪಂಚಾಯ್ತಿ’ಗಳಲ್ಲಿ ಈ ಎಲ್ಲಾ ‘ಸೇವೆ’ಗಳು ಲಭ್ಯ

Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಏನು ಕೊಡುಗೆ ಕೊಟ್ಟಿಲ್ಲ, ಡಿಕೆ ಶಿವಕುಮಾರನ್ನು ‘CM’ ಮಾಡಿ : ಪ್ರಣವಾನಂದ ಶ್ರೀ ಹೇಳಿಕೆ

26/04/2026 11:25 AM1 Min Read

ಪಕ್ಷದಲ್ಲಿ ಏನು ತೀರ್ಮಾಗಳು ಆಗಿದೆಯೋ ಅವು ಚಾಲ್ತಿಯಲಿ ಬರುತ್ತವೆ : ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ

26/04/2026 11:06 AM1 Min Read

BREAKING : ಹುಬ್ಬಳ್ಳಿಯಲ್ಲಿ ಮತ್ತೆ ‘FLY91’ ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆ : 40 ನಿಮಿಷ ಆಗಸದಲ್ಲಿ ಹಾರಾಟ

26/04/2026 10:29 AM1 Min Read
Recent News

ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಏನು ಕೊಡುಗೆ ಕೊಟ್ಟಿಲ್ಲ, ಡಿಕೆ ಶಿವಕುಮಾರನ್ನು ‘CM’ ಮಾಡಿ : ಪ್ರಣವಾನಂದ ಶ್ರೀ ಹೇಳಿಕೆ

26/04/2026 11:25 AM

ಪಕ್ಷದಲ್ಲಿ ಏನು ತೀರ್ಮಾಗಳು ಆಗಿದೆಯೋ ಅವು ಚಾಲ್ತಿಯಲಿ ಬರುತ್ತವೆ : ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ

26/04/2026 11:06 AM

BREAKING : ಹುಬ್ಬಳ್ಳಿಯಲ್ಲಿ ಮತ್ತೆ ‘FLY91’ ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆ : 40 ನಿಮಿಷ ಆಗಸದಲ್ಲಿ ಹಾರಾಟ

26/04/2026 10:29 AM

BREAKING : ಚಿಕ್ಕಮಗಳೂರಲ್ಲಿ ಸಾಂಬಾರ್ ಮಾಡಿಲ್ಲ ಎಂದು ಬೈದ ತಂದೆ : ಮನನೊಂದು ಪುತ್ರಿ ನೇಣಿಗೆ ಶರಣು!

26/04/2026 10:25 AM
State News
KARNATAKA

ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಏನು ಕೊಡುಗೆ ಕೊಟ್ಟಿಲ್ಲ, ಡಿಕೆ ಶಿವಕುಮಾರನ್ನು ‘CM’ ಮಾಡಿ : ಪ್ರಣವಾನಂದ ಶ್ರೀ ಹೇಳಿಕೆ

By kannadanewsnow0526/04/2026 11:25 AM KARNATAKA 1 Min Read

ಕಲಬುರ್ಗಿ : ಡಿಸಿಎಂ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕಲಬುರ್ಗಿಯಲ್ಲಿ ಪ್ರಣಮಾನಂದ ಸ್ವಾಮೀಜಿ ಹೇಳಿಕೆ ನೀಡಿದರು. ಸಂಕ್ರಾಂತಿ, ಯುಗಾದಿ…

ಪಕ್ಷದಲ್ಲಿ ಏನು ತೀರ್ಮಾಗಳು ಆಗಿದೆಯೋ ಅವು ಚಾಲ್ತಿಯಲಿ ಬರುತ್ತವೆ : ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ

26/04/2026 11:06 AM

BREAKING : ಹುಬ್ಬಳ್ಳಿಯಲ್ಲಿ ಮತ್ತೆ ‘FLY91’ ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆ : 40 ನಿಮಿಷ ಆಗಸದಲ್ಲಿ ಹಾರಾಟ

26/04/2026 10:29 AM

BREAKING : ಚಿಕ್ಕಮಗಳೂರಲ್ಲಿ ಸಾಂಬಾರ್ ಮಾಡಿಲ್ಲ ಎಂದು ಬೈದ ತಂದೆ : ಮನನೊಂದು ಪುತ್ರಿ ನೇಣಿಗೆ ಶರಣು!

26/04/2026 10:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.