ಮಂಗಳೂರು: ಜಿಲ್ಲೆಯ ಉಡುಪಿಯ ಕೊಡವೂರು ಭಾಗಗಳಲ್ಲಿ ಮಳೆಯಿಂದ ರಸ್ತೆಗಳೆಲ್ಲ ಹಾಳಾಗಿ ಹೋಗಿದೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.
ಈ ಮಾರ್ಗಗಳಲ್ಲಿ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಾವಿರಾರು ಪ್ರವಾಸಿಗರು ಸ್ತಳೀಯ ಉದ್ಯೋಗಸ್ಥರು ನಿತ್ಯ ಸಂಚರಿಸಬೇಕಿದೆ. ಆದರೆ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಳೆಗಾಲದಲ್ಲಿ ನೀರು ನಿಂತು ಹೋಗಿದೆ.
ಬೈಕ್ ಸವಾರರಿಗೆ ತೆರುಳುತ್ತಿದ್ದಾಗ ನಿಯಂತ್ರಣ ತಪ್ಪಿ ಬೀಳುವ ಸಾದ್ಯತೆ ಇದೆ. ನಗರಸಭೆ ಆಡಳಿತವು ಕೂಡಲೇ ರಸ್ತೆಯನ್ನು ದುರಸ್ಥಿಪಡಿಸಿ ವ್ಯವಸ್ಥಿತವಾಗಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.