ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ಬಲಿಯಾಗುತ್ತಿದ್ದು, ವ್ಯಾಪಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೃತರ ಕುಟುಂಬಸ್ಥರು ಬಿಬಿಎಂಪಿ, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಗುಂಡಿ ಮುಚ್ಚಲು ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.ಬೆಂಗಳೂರಿನಲ್ಲಿ ರಸ್ತೆಗುಂಡಿ ಇಲ್ಲವೇ ಹಾಳಾದ ರಸ್ತೆಗಳಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. 2021ರ ಅಕ್ಟೋಬರ್ ನಿಂದ ಇದುವರೆಗೆ 9 ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ.
ಹೊಂಡ ತಪ್ಪಿಸಲು ಹೋಗುವ ಬೈಕ್ ಸವಾರರು ಆಯ ತಪ್ಪಿ ಕೆಳಗೆ ಬಿದ್ದು ಬಸ್ ಅಥವಾ ಇನ್ನಿತರ ದೊಡ್ಡ ವಾಹನದ ಕೆಳಗೆ ಸಿಲುಕಿ ಮೃತಪಡುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವಂತೆ ಜನರು ಪ್ರತಿಭಟನೆ ನಡೆಸಿದರೂ ನಗರದ ಹಲವು ಕಡೆ ಇನ್ನೂ ಕೂಡ ಗುಂಡಿ ಮುಚ್ಚಿಲ್ಲ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಿಂದ ಇದುವರೆಗೆ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ.
ಈ ಹಿಂದೆ ಬಿಬಿಎಂಪಿಯು ನಗರದಲ್ಲಿ ಕೈಗೊಂಡಿರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ, ರಸ್ತೆಗಳ ಸ್ಥಿತಿಗತಿ ಕುರಿತು ಹೈಕೋರ್ಟ್ಗೆ ವರದಿ ಸಲ್ಲಿಸಿತ್ತು. ಒಟ್ಟು ಪಾಲಿಕೆಯು 25,032 ಗುಂಡಿಗಳನ್ನು ಗುರುತಿಸಿದ್ದು, ಅದರಲ್ಲಿ ಈಗಾಗಲೇ 13,843 ಗುಂಡಿ ಮುಚ್ಚಲಾಗಿದೆ ಎಂದು ಹೇಳಿತ್ತು., ಆದರೆ ರಸ್ತೆ ಗುಂಡಿಗೆ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವುದು ಮಾತ್ರ ತಪ್ಪಿಲ್ಲ.
ಕಾಂಗ್ರೆಸ್ ಆರೋಪ ನಿರಾಧಾರ; ಮತ್ತೆ ಸುಳ್ಳು ಹೇಳಿದ ಡಿಕೆಶಿ, ಮಾನನಷ್ಟ ಮೊಕದ್ದಮೆ – ಸಚಿವ ಅಶ್ವತ್ಥನಾರಾಯಣ
BREAKING NEWS : ಅಸ್ಸಾಂನಲ್ಲಿ ಭೀಕರ ರಸ್ತೆ ಅಪಘಾತ : 7 ಮಂದಿ ಸಾವು, ನಾಲ್ವರಿಗೆ ಗಾಯ |Accident in Assam