ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಒಂದು ಕೆಸ್ ನಲ್ಲಿ ನನ್ನ ಹಾಗೂ ಹೆಚ್‍ಡಿ ದೇವೇಗೌಡರನ್ನು ತಾಳೆ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಎಲ್ಲರೂ ಅಸಹ್ಯ ಪಡುವ ಪ್ರಕರಣವಾಗಿದೆ. ಇದು ಇದು ಎಲ್ಲರೂ ತಲೆತಗ್ಗಿಸುವಂತಹ ಪ್ರಕರಣ. ಈ ಕೇಸ್ ನಲ್ಲಿ ನನ್ನ ಹಾಗೂ ದೇವೇಗೌಡರನ್ನು ತಾಳೆ ಹಾಕಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರದಲ್ಲಿ ವರ್ಗಾವಣೆ ದಂಧೆ ಕುರಿತು ಕೇಳಲೇಬೇಡಿ. ಸಿ ಎಸ್ ಆರ್ ಫಂಡ್ ವರ್ಗಾವಣೆಗೆ ಸಿಂಬಲ್ ಆಗಿ ಇಟ್ಕೊಂಡ್ರು.ಈ ಸರ್ಕಾರ ಮಾಡಿದ್ದು ಬರೀ ಈ ರೀತಿಯ ಸಾಧನೆಗಳು.ಕಳೆದ ಬಾರಿಯೂ ನಗರ ಪ್ರದಕ್ಷಿಣೆ ಮಾಡಿದ್ರಿ, ಏನಾಯಿತು? ನಗರ ಪ್ರದಕ್ಷಿಣೆ ಮಾಡಿ ಏನು ಪರಿಹಾರ ನೀಡಿದೆ? ಡಿಸಿಎಂ ಡಿಕೆ ಬೆಂಗಳೂರು ಸಿಟಿ ರೌಂಡ್ಸ್ ಗೆ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ನಾಲ್ಕು ಐದು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ.20-25 ಸೀಟು ಎಂದು ಕನಸು ಕಾಣುತ್ತಾ ಕುಳಿತಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಹೇಗೆ ಕೆಲಸ ಮಾಡಬೇಕಿತ್ತು? ಈ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ರಾಜ್ಯದ ನೀರಾವರಿ ಯೋಜನೆಗಳು ಏನಾಗಿವೆ? ಯಾವ ಜಾಗಕ್ಕೆ ಹೋದರು ಜನರು ಮನೆಗಳಲ್ಲಿ ವಾಸಿಸಲು ಆಗುತ್ತಿಲ್ಲ. ಮನೆಗೆ ಬೇಗ ಹಾಕಿಕೊಂಡು ಜನರು ಬೇರೆ ಕಡೆ ವಾಸಿಸುತ್ತಿದ್ದಾರೆ. ಇದು ಇವರ ಸಾಧನೆ ಎಂದು ಎಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.