ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಕೇವಲ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಅಷ್ಟೇ ಇಲ್ಲ ರೇಪ್ ಮಾಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಆರೋಪ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಂತ್ರಸ್ತ ಹೆಣ್ಣುಮಗಳು ರೇಪ್ ಆಗಿದೆ ಎಂದು ಸುಳ್ಳು ಹೇಳ್ತಾಳಾ? ಅವಳ ಜೀವನ ಹಾಳಾಗಲ್ವಾ? ಮದುವೆಯಾದ ಹೆಣ್ಮಗಳು ಬಹಿರಂಗವಾಗಿ ರೇಪ್ ಮಾಡಿದಾರೆ ಎಂದು ಹೇಳಬೇಕಾದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಂತ್ರಸ್ತ ಹೆಣ್ಮಕ್ಕಳು ಸುಳ್ಳು ಹೇಳಲು ಸಾಧ್ಯವಿಲ್ಲ ಎಂದರು.
ಪ್ರಜ್ವಲ್ ವಿಷಯ ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಮೊದಲೇ ಗೊತ್ತಿತ್ತು. ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಇವೆ ಎಂಬುದೂ ಗೊತ್ತಿತ್ತು. ಆದರೂ, ಬಿಜೆಪಿಯವರು ಪ್ರಜ್ವಲ್‌ಗೆ ಸೀಟು ಬಿಟ್ಟುಕೊಟ್ಟರು. ಬಿಜೆಪಿಯವರು ತಪ್ಪು ಮಾಡಿದ್ದಾರೆ. ಪ್ರಜ್ವಲ್ ವಿಡಿಯೋ ಬಗ್ಗೆ ಗೊತ್ತಿದ್ದರೂ ಯಾಕೆ ಮೈತ್ರಿ ಮಾಡಿಕೊಂಡರು? ಪ್ರಕರಣದ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.
ಚುನಾವಣೆ ಪ್ರಚಾರದಲ್ಲಿ ರೇವಣ್ಣ ಮಗ ಬೇರೆಯಲ್ಲ, ನನ್ನ ಮಗ ಬೇರೆ ಅಲ್ಲ ಅಂತಿದ್ದ ಕುಮಾರಸ್ವಾಮಿ ಈಗ ನಾವು ಬೇರೆ ಬೇರೆ ಆಗಿಬಿಟ್ಟಿದ್ದೀವಿ, ರೇವಣ್ಣ ಕುಟುಂಬ ಬೇರೆ ನಾವು ಬೇರೆ ಅಂತಿದ್ದಾರೆ. ಹಾಗಿದ್ದರೆ ದೇವೇಗೌಡರು ಹಾಗೂ ಕುಮಾರಸ್ವಾಮಿ ವಕೀಲರ ಜೊತೆ ಯಾಕೆ ಚರ್ಚೆ ಮಾಡಿದ್ದಾರೆ? ಅವರು ಅಪ್ಪನೂ ಅವನು ಲಾಯರ್‌ಗಳನ್ನ ಯಾಕೆ ಕರಿಸ್ತಿದ್ದಾರೆ. ರಾಜಕೀಯ ಮಾಡೋದು ಒಟ್ಟಿಗೆ, ಕುಕೃತ್ಯ ಮಾಡೋದು ಒಟ್ಟಿಗೆ, ತಪ್ಪು ಮಾಡೋದೋ ಒಟ್ಟಿಗೆ ಎಂದು ಹರಿಹಾಯ್ದರು.