ಕೆಎನ್ ಎನ್ ನ್ಯೂಸ್ ಡೆಸ್ಕ್ : ದಾಳಿಂಬೆ ಹಣ್ಣು ಅಂದರೆ ಯಾರಿಗೆ ತಾನೆ ಇಷ್ಟ ಹೇಳಿ. ಕೆಂಪು ಬಣ್ಣದ ದಾಳಿಂಬೆ ಹಣ್ಣು ಅಥವಾ ಜ್ಯೂಸ್ ನೋಡಿದರೆ ಬಾಯಲ್ಲಿ ನೀರೂರದೇ ಇರದು. ಹಾಗೆಯೇ ದಾಳಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದನ್ನೂ ಮಾಡುತ್ತದೆ.
Mustard Oil Benefits: ಚಳಿಗಾಲದಲ್ಲಿ ಸಾಸಿವೆ ಎಣ್ಣೆ ಪ್ರಯೋಜನಕಾರಿ ; ಇದರಲ್ಲಿವೆ ಅನೇಕ ಆರೋಗ್ಯ ಲಾಭಗಳು
ಅದರಂತೆ ದಾಳಿಂಬೆ ಹಣ್ಣಿನ ಸೇವನೆ ಮತ್ತು ಅದರ ಜ್ಯೂಸ್ ಸೇವೆನೆಯಿಂದಾಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯೋಣ.ಸಂಶೋಧನೆಯೊಂದರ ಪ್ರಕಾರ ದಾಳಿಂಬೆ ಹಣ್ಣು ತಿನ್ನುವುದರಿಂದ ಪುರುಷರಿಗೆ ಹಾಗೂ ಮಹಿಳೆಯರಿಗೆ ದೇಹದಲ್ಲಿ ರಕ್ತ ಸಂಚಾರ ಅಧಿಕವಾಗುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಗರ್ಭಕೋಶದ ಭಾಗದಲ್ಲಿನ ಮಾಂಸ ಖಂಡಗಳು ಸದೃಢಗೊಳ್ಳುತ್ತವೆ. ಇದು ಭವಿಷ್ಯದಲ್ಲಿ ಮಕ್ಕಳಾಗುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಎನ್ನುತ್ತದೆ ಸಂಶೋಧನೆ.
Mustard Oil Benefits: ಚಳಿಗಾಲದಲ್ಲಿ ಸಾಸಿವೆ ಎಣ್ಣೆ ಪ್ರಯೋಜನಕಾರಿ ; ಇದರಲ್ಲಿವೆ ಅನೇಕ ಆರೋಗ್ಯ ಲಾಭಗಳು
ಮಹಿಳೆಯರು ದಾಳಿಂಬೆ ಹಣ್ಣನ್ನು ಸೇವನೆ ಮಾಡುವುದರಿಂದ, ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಸಹಾಯವಾಗುತ್ತದೆ. ಆದರೆ ದಾಳಿಂಬೆ ಹಣ್ಣನ್ನು ಮಹಿಳೆಯರು ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂದು ಸಂಶೋಧಕರು ಸಲಹೆ ನೀಡುತ್ತಾರೆ. ಅಧಿಕ ಸೇವೆನೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
Mustard Oil Benefits: ಚಳಿಗಾಲದಲ್ಲಿ ಸಾಸಿವೆ ಎಣ್ಣೆ ಪ್ರಯೋಜನಕಾರಿ ; ಇದರಲ್ಲಿವೆ ಅನೇಕ ಆರೋಗ್ಯ ಲಾಭಗಳು
ದಾಳಿಂಬೆ ಹಣ್ಣಿನಲ್ಲಿ ಪೌಷ್ಠಿಕಾಂಶಗಳು ಹೆಚ್ಚಿರುವುದರಿಂದ, ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಕೆ, ಮತ್ತು ಫೋಲಿಕ್ ಆಮ್ಲ ದೊರೆಯುತ್ತದೆ. ಇದು ಆರೋಗ್ಯಕರ ಮಗುವಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ ಎನ್ನುತ್ತದೆ ಸಂಶೋಧನೆ.
ಮಹಿಳೆಯರು ಪ್ರತಿದಿನ ಒಂದರಿಂದ ಎರಡು ಕಪ್ ದಾಳಿಂಬೆ ಬೀಜಗಳನ್ನು ತಿನ್ನಬಹುದು ಅಥವಾ ಒಂದು ಕಪ್ ರುಚಿಯಾದ ದಾಳಿಂಬೆ ಹಣ್ಣಿನ ಜ್ಯೂಸ್ ಕೂಡ ಸೇವನೆ ಮಾಡಬಹುದು. ಇದೆಲ್ಲಾ ಮಹಿಳೆಯರಿಗೆ ಆಗುವ ಪ್ರಯೋಜನವಾದರೆ, ಪುರುಷರಿಗೂ ದಾಳಿಂಬೆ ಹಣ್ಣು ಅಥವಾ ಜ್ಯೂಸ್ ಸೇವನೆಯಿಂದ ಹಲವು ರೀತಿಯ ಪ್ರಯೋಜನವಾಗುತ್ತದೆ.