ಬೆಂಗಳೂರು: ಬೆಳಗಾವಿಯಲ್ಲಿ ಕನ್ನಡ ಧ್ವಜ ಹಿಡಿದು ಡ್ಯಾನ್ಸ್ ಮಾಡುತ್ತಿದ್ದಂತ ವಿದ್ಯಾರ್ಥಿ ಮೇಲೆ ಮರಾಠಿ ಗೂಂಡಾಗಳು, ಪೊಲೀಸರು ಹಲ್ಲೆ ನಡೆಸಿರುವುದು ಖಂಡನೀಯ. ಮರಾಠಿ ಗುೂಂಡಾಗಳನ್ನು ಬಂಧಿಸಬೇಕು. ಕನ್ನಡಿಗ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದಂತ ಪೊಲೀಸರನ್ನು ಅಮಾನತುಗೊಳಿಸಬೇಕು ಎಂಬುದಾಗಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಿದ್ಯಾರ್ಥಿ ಏನು ಪಾಕ್ ಅಥವಾ ಚೀನಾ ದೇಶದ ಧ್ವಜ ಹಾರಿಸಿಲ್ಲ. ಕನ್ನಡಿಗನಾಗಿ, ಕನ್ನಡ ಧ್ವಜವನ್ನು ಹಿಡಿದು ಹಾರಾಡಿಸಿದ್ದಾನೆ. ಅಂತಹ ವಿದ್ಯಾರ್ಥಿ ಮೇಲೆ ಎಂಇಎಸ್ ಪುಂಡರ ಹಲ್ಲೆ ನಿಜಕ್ಕೂ ಖಂಡನೀಯ ಎಂದರು.
BIGG NEWS : ಬೆಂಗಳೂರಿನಲ್ಲಿ ನೈಟ್ರೈಡ್ ಮಾಡೋರೆ ಹುಷಾರ್ ! ನೈಸ್ರೋಡ್ನಲ್ಲಿ ಚಿರತೆ ಭೀತಿ, ಸಿಸಿಟಿವಿಯಲ್ಲಿ ಸೆರೆ
ನಾಡಿನ ಧ್ವಜ ಹಾರಿಸಿದ ವಿದ್ಯಾರ್ಥಿಯ ಮೇಲೆ ಮರಾಠಿ ಪುಂಡರಲ್ಲದೇ ಕರ್ನಾಟಕ ಪೊಲೀಸರು ಹಲ್ಲೆ ನಡೆಸಿದ್ದು ಸರಿಯಲ್ಲ. ಸರ್ಕಾರ ಮತ್ತು ಪೊಲೀಸರು ಎಂಇಎಸ್ ಪರ ಇದೆಯಾ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಕನ್ನಡಿಗ ವಿದ್ಯಾರ್ಥಿ ಮೇಲೆ ಹಲ್ಲೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶಿಸಬೇಕು. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದಂತ ಎಂಇಎಸ್ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ ಪೊಲೀಸರನ್ನು ಅಮಾನತುಗೊಳಿಸಬೇಕು ಎಂಬುದಾಗಿ ಒತ್ತಾಯಿಸಿದರು.
BIGG NEWS : ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ : 2022-23 ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ