ಬೆಂಗಳೂರು: ಆ ವ್ಯಕ್ತಿ ಆಫೀಸ್ ಒಂದಕ್ಕೆ ಕೆಲಸದ ನಿಮಿತ್ತ ತೆರೆಳಿದ್ದರು. ಆ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತ ಆ ಕಚೇರಿಯಲ್ಲಿಯೇ ಮೊಬೈಲ್ ಬಿಟ್ಟು ಬಂದಿದ್ದರು. ಅಲ್ಲಿಂದ ಹೊರ ಬಂದು, ಬೇರೆ ಕೆಲಸಕ್ಕೆ ತೆರಳಿದ್ದಂತ ಅವರು, ತಮ್ಮ ಮೊಬೈಲ್ ( Mobile ) ಮಿಸ್ ಆಗಿರೋದು ನೆನಪಾಗಿತ್ತು. ತಾವು ಆ ಕಚೇರಿಯಲ್ಲೇ ಬಿಟ್ಟು ಬಂದಿರೋದಾಗಿ ನೆನಪು ಮಾಡಿಕೊಂಡು ಹೋಗಿ ನೋಡಿದ್ರೇ ಸಿಕ್ಕಿರಲಿಲ್ಲ. ಆಗ ನಮ್ಮ 112ಗೆ ಕೆರೆ ಮಾಡಿ, ತಮ್ಮ ಮೊಬೈಲ್ ಕಳೆದಿರೋ ಬಗ್ಗೆ ದೂರು ನೀಡುತ್ತಾರೆ. ಆ ದೂರು ಬಂದೊಡನೇ ಕಾರ್ಯೋನ್ಮುಕರಾದ ಆ ಪೊಲೀಸ್, ದುಬಾರಿ ಮೊಬೈಲ್ ಪತ್ತೆ ಹಚ್ಚಿ ಕೊಟ್ಟಿದ್ದು ಮಾತ್ರ ಸಿನಿಮೀಯವಾಗಿದೆ. ಅದೆಲ್ಲಿ.? ಹಾಗೆ ಹುಡುಕಿ ಕೊಟ್ಟ ಪೊಲೀಸ್ ಯಾರು ಎನ್ನುವ ಬಗ್ಗೆ ಮುಂದೆ ಓದಿ..
BIG NEWS: ‘ಹುತಾತ್ಮ ಅರಣ್ಯ ಸಿಬ್ಬಂದಿ’ಗಳ ಪರಿಹಾರದ ಮೊತ್ತ 30 ರಿಂದ 50 ಲಕ್ಷಕ್ಕೆ ಹೆಚ್ಚಳ – ಸಿಎಂ ಬೊಮ್ಮಾಯಿ ಘೋಷಣೆ
ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆ ( Vijayanagara Police Station ) ವ್ಯಾಪ್ತಿಯ ಹೊಯ್ಸಳ ಸರ್ಕಲ್ ಬಳಿಯಲ್ಲಿರುವಂತ ಬಿಬಿಎಂಪಿ ಕಚೇರಿಗೆ ( BBMP Office ) ಕೆಲಸ ನಿಮಿತ್ತ ಶೇಖರ್ ಎಂಬುವರು, ಕಳೆದ ಸೆ.6, 2022ರಂದು ತೆರಳಿದ್ದರು. ತಮ್ಮ ಕೆಲಸ ಮುಗಿಸಿ ಹೊರ ಬಂದ ಸಂದರ್ಭದಲ್ಲಿ ಕಚೇರಿಯಲ್ಲಿಯೇ 20 ಸಾವಿರ ಮೌಲ್ಯದ ಸ್ಯಾಮ್ ಸಂಗ್ ಮೊಬೈಲ್ ಮಿಸ್ ಆಗಿತ್ತು. ಎಲ್ಲಾ ಸಿಬ್ಬಂದಿಗಳನ್ನು ವಿಚಾರಿಸಿದ್ರು ಮೊಬೈಲ್ ಪತ್ತೆಯಾಗಿರಲಿಲ್ಲ. ಜೊತೆಗೆ ಮೊಬೈಲ್ ಸೈಲೆಟ್ ಮೂಡ್ ನಲ್ಲಿ ಇದ್ದ ಕಾರಣ, ಕರೆ ಮಾಡಿದ್ರು ರಿಂಗ್ ಆಗುತ್ತಿರೋದು ಕೇಳಿಸಿರಲಿಲ್ಲ.
ಕಾಂಗ್ರೆಸ್ ತಾಕತ್ತು ದಮ್ಮು ಹಾನಗಲ್ ಉಪ ಚುನಾವಣೆಯಲ್ಲಿ ಜನರೇ ಬೊಮ್ಮಾಯಿಗೆ ತೋರಿಸಿದ್ದಾರೆ – ರಮೇಶ್ ಬಾಬು
ಕೊನೆಗೆ ಶೇಖರ್ ತಮ್ಮ ಪೋನ್ ಕಳೆದಿರೋ ಬಗ್ಗೆ. ಸೈಲೆಂಟ್ ಮೂಡ್ ನಲ್ಲಿ ಇದ್ದು ರಿಂಗ್ ಆಗುತ್ತಿದ್ದರೂ ಕೇಳಿಸದೇ ಇರೋ ಬಗ್ಗೆ ನಮ್ಮ 112ಗೆ ( Namma 112 ) ಕರೆ ಮಾಡಿ, ಮೊಬೈಲ್ ಹುಡುಕಿಸಿಕೊಡುವಂತೆ ಮನವಿ ಮಾಡಿದ್ದರು. ಈ ದೂರು ಸ್ವೀಕರಿಸಿದಂತ ಕಂಟ್ರೋಲ್ ರೂಂ ಸಿಬ್ಬಂದಿಗಳು, ವಿಜಯನಗರ ಠಾಣೆ ವ್ಯಾಪ್ತಿಯಲ್ಲಿನ ಘಟನೆ ಕಾರಣ, ಠಾಣೆಯ ಎಎಸ್ಐ ಜಗದೀಶ್ ಗೆ ಪ್ರಕರಣ ವರ್ಗಾಹಿಸಿದ್ದರು.
ಹೀಗೊಂದು ಘಟನೆ ನಡೆದಿರೋ ಬಗ್ಗೆ ಕಂಟ್ರೋಲ್ ನಿಂದ ಮಾಹಿತಿ ಬಂದೊಡೆ ವಿಜಯನಗರ ಠಾಣೆಯ ಹೊಯ್ಸಳ 87ನ ಎಎಸ್ಐ ಜಗದೀಶ್ ( ASI Jagadeesh ) ಹಾಗೂ ಪಿಸಿ ಮಂಜಪ್ಪ ಅವರು ಕಾರ್ಯಪ್ರವೃತ್ತರಾದರು. ಮೊಬೈಲ್ ಕಳೆದುಕೊಂಡಿದ್ದಂತ ಘಟನಾ ಸ್ಥಳಕ್ಕೆ ತೆರಳಿ ಶೇಖರ್ ಬೇಟಿಯಾಗಿ, ಮಾಹಿತಿ ಪಡೆದಂತ ಅವರು, ರಿಂಗ್ ಆಗುತ್ತಿದ್ದರೂ ಕೇಳಿಸದೇ ಇದ್ದಕಾರಣ, ಮತ್ತೆ ಬಿಬಿಎಂಪಿ ಕಚೇರಿಯಲ್ಲಿ ಹುಡುಕಾಡಿದರು, ಪತ್ತೆಗಾಲಿಲ್ಲ.
BIGG NEWS : ರಾಮಜನ್ಮ ಭೂಮಿ ಪುರಾವೆ ಉತ್ಖನನ ಮಾಡಿದ್ದ ‘ಪ್ರೊ. ಬೀಬಿ ಲಾಲ್’ ನಿಧನ ; ಪ್ರಧಾನಿ ಮೋದಿ ಸಂತಾಪ
ಕೊನೆಗೆ ತಮ್ಮ ಸಿಬ್ಬಂದಿ ಕಾರ್ತಿಕ್ ಎಂಬುವರಿಗೆ ಕರೆ ಮಾಡಿ, ಸ್ಯಾಮ್ ಸಾಂಗ್ ಮೊಬೈಲ್ ಸಂಖ್ಯೆ, ಅದರಲ್ಲಿ ಲಾಗಿನ್ ಆಗಿದ್ದಂತ ಇ-ಮೇಲ್ ಐಡಿ, ಪಾಸ್ವರ್ಡ್ ನೀಡಿ, ಲೊಕೇಷನ್ ಟ್ರ್ಯಾಕ್ ಗೆ ಹಾಕೋದಕ್ಕೆ ತಿಳಿಸುತ್ತಾರೆ. ಅದರಂತೆ ಮೊಬೈಲ್ ಟ್ರ್ಯಾಕ್ ಮಾಡಿ ನೋಡಿದಾಗ ಅದು ಹೊಯ್ಸಳ ಸರ್ಕಲ್ ನಲ್ಲಿರುವಂತ ಬಿಬಿಎಂಪಿ ಕಚೇರಿಯಲ್ಲಿಯೇ ಇರೋದು ತಿಳಿದು ಬರುತ್ತದೆ. ಆಗ ಸೈಟೆಂಟ್ ಮೂಡ್ ನಲ್ಲಿದ್ದಂತ ಮೊಬೈಲ್ ಗೆ ರಿಂಗ್ ಆಗುವಂತೆ ಮಾಡಿ, ಅರ್ಧಗಂಟೆ ರಿಂಗಿಂಗ್ ಟ್ರ್ಯಾಕ್ ನಲ್ಲಿ ಇಡಲಾಗುತ್ತದೆ.
ಹೀಗೆ ಪೊಲೀಸ್ ಟ್ರ್ಯಾಕಿಂಗ್ ಸಿಸ್ಟಂನಿಂದ ರಿಂಗ್ ಕರೆ ಕೊಡುತ್ತಿದ್ದಂತೆ, ಬಿಬಿಎಂಪಿ ಕಚೇರಿಯ ಮುಂಬಾಗಿಲಿನಲ್ಲಿಯೇ ಇದ್ದ ಬಿಬಿಎಂಪಿ ಬೋರ್ಡ್ ಹಿಂದೆ ಮೊಬೈಲ್ ರಿಂಗ್ ಆಗೋ ಸುದ್ದಿ ಕೇಳುತ್ತದೆ. ಕೊನೆಗೆ ದುಬಾರಿ ಬೆಲೆಯ ಮೊಬೈಲ್ ಪತ್ತೆ ಹಚ್ಚಿ, ಅದನ್ನು ಕಳೆದುಕೊಂಡಿದ್ದಂತ ಶೇಖರ್ ಅವರಿಗೆ ಮರಳಿ ನೀಡಿದ್ದಾರೆ. ಈ ಮೂಲಕ ಮೊಬೈಲ್ ಕಳೆದು ಹೋಗಿದ್ದಂತ ಕೆಲವೇ ಗಂಟೆಯಲ್ಲಿ ಮರಳಿ ನೀಡಿ, ಕರ್ತವ್ಯ ನಿಷ್ಠೆಯನ್ನು ಎಎಸ್ಐ ಜಗದೀಶ್ ಹಾಗೂ ಪಿಸಿ ಮಂಜಪ್ಪ ಮರೆದಿದ್ದಾರೆ. ಅಲ್ಲದೇ ಪೊಲೀಸರು ( Karnataka Police ) ಹೀಗೂ ಕೆಲಸ ಮಾಡುತ್ತಾರೆ ಎಂಬುದನ್ನು ಸಾರ್ವಜನಿಕರಿಗೆ ತೋರಿಸಿದ್ದಾರೆ. ಅವರ ಈ ಕಾರ್ಯಕ್ಕೆ ನಮ್ಮದೊಂದು ಹ್ಯಾಟ್ಸ್ ಆಫ್.
ಎಎಸ್ಐ ಜಗದೀಶ್ ಹಾಗೂ ಪಿಸಿ ಮಂಜಪ್ಪ ಅವರ ಕಾರ್ಯಕ್ಕೆ ನೀವು ಮೆಚ್ಚುಗೆ ಸೂಚಿಸೋದಾದ್ರೇ.. ಅವರ ಮೊಬೈಲ್ ಸಂಖ್ಯೆ – 73386 64002 ಕರೆ ಮಾಡಿ ತಿಳಿಸಿ.
ವರದಿ: ವಸಂತ ಬಿ ಈಶ್ವರಗೆರೆ