ಬೆಂಗಳೂರು: ಆ ವೈದ್ಯರು ತಮಗೆ ಗೊತ್ತಿಲ್ಲದಂತೆ ಪರ್ಸ್ ಕಳೆದುಕೊಂಡಿದ್ದರು. ಯಾರಿಗೋ ಸಿಗಬೇಕಾಗಿದ್ದಂತ ಆ ಪರ್ಸ್ ಸಿಕ್ಕಿದ್ದು ಮಾತ್ರ ಪೊಲೀಸರಿಗೆ ( Karnataka Police ). ಪೋನ್ ನಂಬರ್ ಇಲ್ಲದೇ ಇದ್ದಂತ ಪರ್ಸ್ ನಲ್ಲಿ, ವಿಳಾಸವಿದ್ದರೂ ಆಗಾಗ ಬದಲಾಗುವಂತ ಬೆಂಗಳೂರಿನ ಬದುಕಲ್ಲಿ ಕೊನೆಗೂ ಸೇಫ್ ಆಗಿ ಮರಳಿ ವೈದ್ಯರಿಗೆ ತಲುಪಿಸಿದ್ದಾರೆ. ಈ ಮೂಲಕ ಪೊಲೀಸರೆಂದ್ರೇ ( Police ) ಹೀಗೂ ಇರುತ್ತಾರೆ ಎನ್ನುವಂತೆ ಹುಬ್ಬೇರಿಸುವಂತೆ ಮಾಡಿದ್ದಾರೆ. ಹಾಗಾದ್ರೇ ತಲುಪಿಸಿದ್ದು ಹೇಗೆ.? ಆ ಪರ್ಸ್ ನಲ್ಲಿ ಅಷ್ಟು ತಲುಪಿಸಲೇ ಬೇಕಾದಂತ ಇಂಪಾರ್ಡೆಂಟ್ ದಾಖಲೆಗಳು ಇದ್ದದ್ದು ಆದ್ರೂ ಏನೂ ಎನ್ನುವ ಬಗ್ಗೆ ಮುಂದೆ ಓದಿ.
ಅಕ್ಟೋಬರ್ 3, 2022ರಂದು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ( Vijayanagara Police Station ) ಎಎಸ್ಐ ಆಗಿರುವಂತ ಜಗದೀಶ್, ಹೊಯ್ಸಳದಲ್ಲಿ ವಾಹನದಲ್ಲಿ ಗಸ್ತಿನಲ್ಲಿದ್ದರು. ಹೀಗೆ ಕೆಲಸದಲ್ಲಿಯೇ ಹಂಪಿನಗರ ಬಳಿಯ ರೆಮ್ ಕೋ ಲೇಔಟ್ ಗೆ ತೆರಳಿದ್ದರು. ತಮ್ಮ ಹೊಯ್ಸಳ ವಾಹನದಿಂದ ಇಳಿದು ನಿಂತಿದ್ದಾಗಲೇ, ದಾರಿ ಹೋಕರೊಬ್ಬರು ಅವರ ಕಾರಿನ ಸಮೀಪವೇ ಬಿದ್ದಿದ್ದಂತ ಪರ್ಸ್ ಕಂಡು, ಸರ್ ನಿಮ್ಮ ಪರ್ಸ್ ಕೆಳಗೆ ಬಿದ್ದಿದೆ ನೋಡಿ. ತೆಗೆದುಕೊಳ್ಳಿ ಎಂದಿದ್ದಾರೆ.
ಅಚ್ಚರಿಯಿಂದ ಕೆಳಗೆ ನೋಡಿದಂತ ಎಎಸ್ಐ ಜಗದೀಶ್ ( ASI Jagadeesh ) ಅವರಿಗೆ ಅಲ್ಲೊಂದು ಪರ್ಸ್ ಸಿಕ್ಕಿದೆ. ಕೈಗೆತ್ತಿಕೊಂಡ ಅವರು, ಪರಿಶೀಲಿಸಿದಾಗ ಅಮೂಲ್ಯ ದಾಖಲೆಗಳಾದಂತ ಓರಿಜಿನಲ್ ಡ್ರೈವಿಂಗ್ ಲೈಸೆನ್ಸ್, ವೈದ್ಯರ ಐಡಿ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳಿದ್ದದ್ದು ಕಂಡು ಬಂದಿದೆ.
ಹೀಗೆ ಕೈಗೆ ಸಿಕ್ಕಂತ ಪರ್ಸ್ ನಲ್ಲಿನ ದಾಖಲೆಗಳಲ್ಲಿನ ವಿಳಾಸ ಯಲಹಂಕ ಪೊಲೀಸ್ ಠಾಣೆ ( Yelahanka Police Station ) ವ್ಯಾಪ್ತಿಯ ಜುಡೀಸಿಯಲ್ ಲೇಔಟ್ ವ್ಯಾಪ್ತಿಯದ್ದೆಂದು ತಿಳಿದು ಬಂದಿದೆ. ಆ ಕೂಡಲೇ ಯಲಹಂಕ ಪೊಲೀಸ್ ಠಾಣೆಗೆ ಕರೆ ಮಾಡಿದಂತ ಅವರು, ಡ್ರೈವಿಂಗ್ ಲೈಸೆನ್ಸ್ ನಲ್ಲಿದ್ದಂತ ವಿಳಾಸದಲ್ಲಿ ಪರ್ಸ್ ದೊರೆತಂತ ವೈದ್ಯರು ಇರುವರೇ ಎಂಬುದಾಗಿ ವಿಚಾರಿಸುವಂತೆ ಕೋರಿಕೊಂಡಿದ್ದಾರೆ.
BIG NEWS: ಪಾಕ್ ಜೊತೆಗಿನ ಮಾತುಕತೆಯನ್ನು ತಳ್ಳಿಹಾಕಿದ ಗೃಹ ಸಚಿವ ಅಮಿತ್ ಶಾ
ಯಲಹಂಕ ಠಾಣೆಯ ಪೊಲೀಸರು ವಿಳಾಸಕ್ಕೆ ತೆರಳಿದಾಗ, ಅಂದು ಆ ವಿಳಾಸದಲ್ಲಿ ಯಾರು ಇರದೇ ಇರೋದು ತಿಳಿದು ಬಂದಿದೆ. ಅದೇ ಮಾಹಿತಿಯನ್ನು ನೀಡಿದ್ದಾರೆ. ಅಲ್ಲಿಗೇ ಬಿಡದಂತ ಎಎಸ್ಐ ಜಗದೀಶ್, ವೈದ್ಯರ ನೊಂದಣಿ ಐಡಿ ಕಾರ್ಡ್ ಮೂಲಕ ಅವರು ಓದಿದಂತ ಕಾಲೇಜಿಗೆ ಕರೆ ಮಾಡಿ, ವಿಳಾಸ ಪತ್ತೆಗೆ ಪ್ರಯತ್ನಿಸಿದ್ದಾರೆ. ಆದ್ರೇ ಅಲ್ಲಿಯೂ ಯಾವುದೇ ಪೂರಕ ಮಾಹಿತಿ ಸಿಕ್ಕಿಲ್ಲ.
ಕೊನೆಗೆ ಡಿಎಲ್ ನಲ್ಲಿ ಇದ್ದಂತ ವಿಳಾಸದ ಬಗ್ಗೆ, ಅದಕ್ಕೆ ನೀಡಿದಂತ ಸಂಪರ್ಕ ಸಂಖ್ಯೆ ಬಗ್ಗೆ ಆರ್ ಟಿಒ ಕಚೇರಿಯಲ್ಲಿ ಮಾಹಿತಿ ಪಡೆದಾಗ, ದೂರವಾಣಿ ಸಂಖ್ಯೆಯೊಂದು ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿದಾಗ ವೈದ್ಯರ ತಾಯಿ ಸ್ವೀಕರಿಸಿದ್ದಾರೆ. ಅವರಿಗೆ ವಿಷಯ ತಿಳಿಸಿದ ನಂತ್ರ, ಅವರಿಂದ ಡಾ.ಐಶ್ವರ್ಯ ಅವರ ದೂರವಾಣಿ ಸಂಖ್ಯೆ ಪಡೆದು ಕೂಡಲೇ ಕರೆ ಮಾಡಿದ್ದಾರೆ.
ಶಿವಮೊಗ್ಗ: ಅ.8ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ವೈದ್ಯೆಯಾಗಿ ವಿಜಯನಗರ ವ್ಯಾಪ್ತಿಯಲ್ಲಿನ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ನೀಡಿದ ಕಾರಣ, ನೇರವಾಗಿ ಅಲ್ಲಿಗೆ ತೆರಳಿ, ಡಾ.ಐಶ್ವರ್ಯ ( Dr Ishwarya ) ಅವರು ಕಳೆದುಕೊಂಡಿದ್ದಂತ ಪರ್ಸ್ ಹಾಗೂ ಅದರಲ್ಲಿದ್ದಂತ ಎಲ್ಲಾ ಒರಿಜಿನಲ್ ದಾಖಲೆಗಳನ್ನು ( Original Documents ) ಸೇಫ್ ಆಗಿ ಮರಳಿಸಿದ್ದಾರೆ. ಇಷ್ಟೆಲ್ಲಾ ಕೆಲಸ ಮಾಡಿದ್ದು ಅಕ್ಟೋಬರ್ 3, 2022ರಂದು ಒಂದೇ ದಿನದಲ್ಲಿ. ಇದಕ್ಕೆ AHC 474 ಗಂಗರಾಜು ( AHC 474 Gangaraju ) ಕೂಡ ಜೊತೆಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದಂತ ವೈದ್ಯೆ ಡಾ.ಐಶ್ವರ್ಯ, ನನಗೆ ಪರ್ಸ್ ಎಲ್ಲಿ ಕಳೆದುಕೊಂಡಿದ್ದೆ ಎಂಬುದೇ ನೆನಪಿರಲಿಲ್ಲ. ಹಂಪಿನಗರಕ್ಕೆ ನನ್ನ ಸ್ನೇಹಿತೆಯ ಮನೆಗೆ ತೆರಳಿದಾಗ ಪರ್ಸ್ ಕಳೆದುಕೊಂಡಿರಬಹುದು. ಮನೆಯಲ್ಲಿ ಎಲ್ಲೋ ಬಿಟ್ಟಿರಬಹುದು ಅಂದುಕೊಂಡಿದ್ದೆ. ಆದ್ರೇ ಎಎಸ್ಐ ಜಗದೀಶ್ ಅವರು ಕರೆ ಮಾಡಿದಾಗಲೇ ನನ್ನ ಪರ್ಸ್ ಕಳೆದುಕೊಂಡಿರೋದು ಗೊತ್ತಾಗಿದ್ದು. ಅಷ್ಟೇ ಕಾಳಜಿಯಿಂದ ವಿಳಾಸವನ್ನು ಪತ್ತೆ ಹಚ್ಚಿ, ಕಾಲೇಜಿನಲ್ಲಿದ್ದಂತ ನನಗೆ ಅಲ್ಲಿಗೆ ಬಂದು ತಲುಪಿಸಿದ್ರು. ಅದರಲ್ಲಿ ನನ್ನೆಲ್ಲಾ ಅಮೂಲ್ಯ ಓರಿಜಿನಲ್ ದಾಖಲೆಗಳಿದ್ದವು. ಥ್ಯಾಂಕ್ಸ್ ಟು ಬೆಂಗಳೂರು ಸಿಟಿ ಪೊಲೀಸ್ ( Bengaluru City Police ), ಥ್ಯಾಂಕ್ಸ್ ಟು ವಿಜಯನಗರ ಠಾಣೆ ಎಎಸ್ಐ ಜಗದೀಶ್ ಎಂಬುದಾಗಿ ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ