ಆನೇಕಲ್ : ಆನೇಕಲ್ ನ ದಿನ್ನೂರಿನ ನೀಲಗಿರಿ ತೋಪಿನಲ್ಲಿ ಗಾಂಜಾ ಮತ್ತಿನಲ್ಲಿದ್ದ ಗುಂಪೊಂದು ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
BIGG NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಎಲ್ಲಾ ಹಂತದ ‘ವಿದ್ಯಾರ್ಥಿ ವೇತನ’ ಮುಂದುವರಿಕೆ
ಅತ್ತಿಬೆಲೆಯ ದಿನ್ನೂರಿನ ರೌಡಿಶೀಟರ್ ವರುಣ್ ಅಲಿಯಾಸ್ ಕೆಂಚ ಹಾಗೂ ಆತನ ಸಹಚರರಿಂದ ಈ ಕೃತ್ಯ ನಡೆದಿದೆ. ಈ ಗ್ಯಾಂಗ್ ಗಾಂಜಾ ಸೇವಿಸಿ ರಾಘವೆಂದ್ರ ಸರ್ಕಲ್ ನಲ್ಲಿ ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ್ದರು. ಆಗ ಬೈಕ್ ರಸ್ತೆಬದಿ ಹಾಕಿ ಎಂದು ಪೊಲೀಸ್ ಸಿಬ್ಬಂದಿ ರಂಗನಾಥ್ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಅವರು ಪೊಲೀಸ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ನಂತರ ದಿನ್ನೂರು ಕಡೆ ಕಿರಾತಕರು ಪರಾರಿಯಾಗಿದ್ದಾರೆ.
BIGG NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಎಲ್ಲಾ ಹಂತದ ‘ವಿದ್ಯಾರ್ಥಿ ವೇತನ’ ಮುಂದುವರಿಕೆ
ನಿಂದಿಸಿದ ಗೂಂಡಾಗಳನ್ನು ಬೈಕ್ ನಲ್ಲಿ ರಂಗನಾಥ್ ಹಿಂಬಾಲಿಸಿದ್ದರು. ಹೀಗಾಗಿ ನೀಲಗಿರಿ ತೋಪಿನಲ್ಲಿ ಅವರನ್ನು ಸುತ್ತುವರಿದು ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಈ ವೇಳೆ ರಂಗನಾತ್ ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವರುಣ್ ಗ್ಯಾಂಗ್ ಗಾಂಜಾ ಮಾರಾಟ, ದರೋಡೆ ಸೇರಿದಂತೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.