ವಿಜಯನಗರ: ಇಸ್ಪಿಟ್ ಅಡ್ಡೆಯ ಮೇಲೆ ದಾಳಿ ಮಾಡಿದ ನಂತ್ರ, ಕಾನೂನು ಪ್ರಕಾರ ಆ ಬಗ್ಗೆ ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯ ಕೂಡ. ಆದ್ರೇ ಹೀಗೆ ಮಾಡದೇ ಆ ವಿಷಯವನ್ನೇ ಮುಚ್ಚಿಟ್ಟು, ದಾಳಿಯೇ ನಡೆದಿಲ್ಲ ಎಂಬ ನಡೆಯನ್ನು ಪೊಲೀಸರು ತೋರಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಿ ಗ್ರಾಮಸ್ಥರೇ ಶಾಕ್ ನೀಡಿದ್ದಾರೆ. ಅದೇನು ಅಂತ ಮುಂದೆ ಓದಿ.
BIGG NEWS ; ವಿತ್ತ ಸಚಿವೆ ನಿರ್ಮಲಾ ಮಹತ್ವದ ಘೋಷಣೆ ; ಈ ವಿಶೇಷ ‘ಸೌಲಭ್ಯ’ ಲಭ್ಯ, ಶೀಘ್ರ ‘ರೈತರ’ ಆದಾಯ ದ್ವಿಗುಣ
ದೀಪಾವಳಿ ಹಬ್ಬದಂದು ಇಸ್ಪಿಟ್ ಆಡುತ್ತಿದದಂತ ಜೂಜು ಕೋರರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿ.ಲ್ಲಿ ಮೂವರು ಜೂಜುಕೋರರಿಂದ 20 ಸಾವಿರ ಹಣ ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರಾದಂತ ವೆಂಕಟೇಶ್ ಎಂಬುವರು ಠಾಣೆಗೆ ತೆರಳಿ ದೂರು ದಾಖಲಾಗಿದ್ಯಾ.? ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ವಿಚಾರಿಸಿದ್ದಾರೆ.
BIG NEWS: ‘ಟ್ರ್ಯಾಕ್ಟರ್’ನಲ್ಲಿ ಯಾತ್ರೆ, ನವೆಂಬರ್ ಒಳಗೆ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ – ಸಿದ್ಧರಾಮಯ್ಯ
ಹೊಸಪೇಟೆ ಪಟ್ಟಣ ಠಾಣೆಯ ಪೊಲೀಸರು ಮಾತ್ರ ದೂರು ದಾಖಲಾಗಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಹೀಗಾಗಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದರೂ, ಪ್ರಕರಣ ದಾಖಲಿಸದೇ ಇದ್ದಂತ ಪೊಲೀಸರ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸ್ ಪೇದೆಗಳಾದಂತ ಮಹೇಶ್, ಅಭಿಷೇಕ್, ಮಂಜುನಾಥ್ ಹಾಗೂ ಶ್ರೀಕಾಂತ್ ಎಂಬುವರನ್ನು ಎಸ್ಪಿ ಡಾ.ಕೆ ಅರುಣ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
‘ಹೆಡ್ ಬುಷ್ ಚಿತ್ರ’ದಲ್ಲಿ ‘ವೀರಗಾಸೆ ಕುಣಿತ’ಕ್ಕೆ ಅಪಮಾನ ವಿಚಾರ: ‘ಸಚಿವ ಸುನೀಲ್ ಕುಮಾರ್’ ಹೇಳಿದ್ದೇನು ಗೊತ್ತಾ.?