ಬೆಂಗಳೂರು : ಮತದಾರರ ಪಟ್ಟಿ ಪರಿಷ್ಕರಣೆ ಆಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ನಿರ್ದೇಶಕ ರವಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ, ತನಿಖೆ ಮುಂದುವರೆದಿದ್ದು, ರವಿಕುಮಾರ್ ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹಲಸೂರು ಗೇಟ್ ಪೊಲೀಸರಿಂದ ವಿಚಾರಣೆ ನಡೆಯುತ್ತಿದ್ದು, ಕಿಂಗ್ ಪಿನ್ ರವಿ ಕುಮಾರ್ ಮಾತ್ರ ಪ್ರಕರಣದ ಪ್ರಮುಖ ಆರೋಪಿಯ ಸುಳಿವು ಬಿಟ್ಟಕೊಡುತ್ತಿಲ್ಲ. ಸದ್ಯ, ಚಿಲುಮೆ ಸಂಸ್ಥೆಯ ಆ್ಯಪ್ ಓಪನ್ ಆಗಿದ್ದು, ಪೊಲೀಸರು ಆ್ಯಪ್ ನಿಂದ ಮಹತ್ವದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ನೆಲಮಂಗಲ ಹೊರವಲಯದಲ್ಲಿ ಹಲಸೂರು ಗೇಟ್ ಪೊಲೀಸರು ಚಿಲುಮೆ ಸಂಸ್ಥೆಯ ನಿರ್ದೇಶಕ ರವಿಕುಮಾರ್ ಎಂಬಾತನನ್ನು ಬಂಧಿಸಿದ್ದರು. ಈಗಾಗಲೇ ಪ್ರಸಾದ್, ಧರ್ಮೇಶ್, ಸಂಸ್ಥೆಯ ನಿರ್ದೇಶಕ ಕೆಂಪೇಗೌಡ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವಿಶೇಷ ತಂಡ ರಚಿಸಲಾಗಿದ್ದು, ಹೊರ ರಾಜ್ಯಗಳಿಗೆ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ. ಕಾಡುಗೋಡಿ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದ ಆರೋಪಿ ಲೋಕೇಶ್ ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
BIGG NEWS: ಬಳ್ಳಾರಿ ನಗರದ ಕ್ಷೇತ್ರದ ಟಿಕೆಟ್ ಗಾಗಿ ಬಿಗ್ ಫೈಟ್; ಬರೋಬ್ಬರಿ 20 ಆಕಾಂಕ್ಷಿ ಅರ್ಜಿ ಸಲ್ಲಿಕೆ