ನವದೆಹಲಿ : ಉತ್ತರ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣವನ್ನು 48 ಗಂಟೆಗಳಲ್ಲಿ ಭೇದಿಸಲು ಪೊಲೀಸ್ ನಾಯಿ ಜಾನಿ ಸಹಾಯ ಮಾಡಿದ್ದು, ಹಿರೋ ಆಗಿ ಹೊರ ಹೊಮ್ಮಿದೆ. ಆರೋಪಿಯನ್ನು 22 ಕಿಮೀ ದೂರದಲ್ಲಿ ಪತ್ತೆಹಚ್ಚಲು ಸಹಾಯ ಮಾಡಿದೆ.
Viral Video ; ಯುವತಿಗೆ ‘ಡೇಟಿಂಗ್’ ಸಲಹೆ ನೀಡಿದ ಅಮೆರಿಕ ಅಧ್ಯಕ್ಷ ; ‘ವಿಚಿತ್ರ’ ಡಬ್ ಮಾಡಿ ಕಾಲೇಳೆದ ನೆಟ್ಟಿಗರು
ಸುಮಾರು 15 ವರ್ಷದ ಬಾಲಕ ದುರ್ವೇಶ್ ಕುಮಾರ್ ಎಂಬುವನನ್ನು ಹತ್ಯೆಗೈದು ಆತನ ಶವವನ್ನು ಪಶ್ಚಿಮ ಯುಪಿಯ ಕಾಸ್ಗಂಜ್ನ ಜಮೀನಿನಲ್ಲಿ ಹೂತು ಹಾಕಲಾಗಿತ್ತು. ಆತನ ಬಳಿಯಿದ್ದ ಹಣ ಮತ್ತು ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಈ ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಭೇದಿಸಲು ಪೊಲೀಸ್ ನಾಯಿ ಸಹಾಯ ಮಾಡಿದೆ.
ಕೊಲೆ ಪ್ರಕರಣದಲ್ಲಿ ಆಕಾಶ್ ಚೌಹಾಣ್, ಧೀರೇಂದ್ರ ಮತ್ತು ರಾಹುಲ್ ಚೌಹಾಣ್ ಎಂಬ ಮೂವರನ್ನು ಬಂಧಿಸಲಾಗಿದೆ.
ಇನ್ನು ಪ್ರಕರಣವನ್ನು ಭೇದಿಸಲು ಸಹಾಯ ಮಾಡಿದ ನಾಯಿ ಜಾನಿ ಬಗ್ಗೆ ಯುಪಿ ಪೊಲೀಸರು ಸೆಲ್ಯೂಟ್ ಹೊಡೆದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿದ್ದು, ಕಾಸ್ಗಂಜ್ನಲ್ಲಿ ಅಪ್ರಾಪ್ತ ವಯಸ್ಕನ ಕುರುಡು ಕೊಲೆಯ ರಹಸ್ಯವನ್ನು 48 ಗಂಟೆಗಳಲ್ಲಿ ಭೇದಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಮ್ಮ #K9 ಅಧಿಕಾರಿ ಜಾನಿ ಅವರಿಗೆ ವಂದನೆಗಳು.ಹಂತಕರನ್ನು ತಲುಪಿದ್ದಲ್ಲದೆ, 22 ಕಿಮೀ ದೂರದಲ್ಲಿ ನಿಲ್ಲಿಸಲಾಗಿದ್ದ ಲೂಟಿ ಮಾಡಿದ ಟ್ರ್ಯಾಕ್ಟರ್ ಅನ್ನು ಪತ್ತೆಹಚ್ಚಿದೆ ಎಂದು ಬರೆದಿದ್ದಾರೆ.
A ‘dogged’ detection!
Saluting Johny, our #K9 officer who played a ‘claw-some’ role in solving a blind murder mystery of a minor in Kasganj within 48 hours.
Not only did the ace detective reach the killers but tracked a looted tractor parked 22 kms away.#Pawsome#FineK9 pic.twitter.com/nKDCYiGUoQ— UP POLICE (@Uppolice) October 16, 2022
ಇದೇ ವೇಳೆ ಪೊಲೀಸ್ ಶ್ವಾನ, ನಿರ್ವಾಹಕರಾದ ರಾಮಪ್ರಕಾಶ್ ಸಿಂಗ್ ಮತ್ತು ಅನುರಾಗ್ ಅವರನ್ನು ಸನ್ಮಾನಿಸಿ, ಪ್ರಶಂಸನಾ ಪತ್ರ ನೀಡಲಾಯಿತು.
ಜಾನಿ ನಮಗೆ 36-48 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಲು ಸಹಾಯ ಮಾಡಿದರು ಎಂದು ಕಾಸ್ಗಂಜ್ನ ಪೊಲೀಸ್ ಅಧೀಕ್ಷಕ ಬಿಬಿಜಿಟಿಎಸ್ ಮೂರ್ತಿ ಹೇಳಿದರು.