ಬೆಂಗಳೂರು: ನಗರದಲ್ಲಿ ಜೆ.ಪಿ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸರಗಳ್ಳತನ ಹಾಗೂ ನಕಲಿ ನೋಟುಗಳ ತಯಾರಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
BIGG NEWS: ಉಮೇಶ್ ಕತ್ತಿ ಅವರ ರಾಜಕೀಯ ಜೀವನ ಪುಸ್ತಕವಾಗಬೇಕು; ನನ್ನ ಆತ್ಮೀಯ ಮಿತ್ರ- ಅರುಣ್ ಸಿಂಗ್
ಕೇರಳ ಮೂಲದ ಪ್ರದೀಪ ಹಾಗೂ ಸನಲ್ ಬಂಧಿತ ಆರೋಪಿಗಳು. ಬಂಧಿತರು ಕೇರಳದಲ್ಲಿ 17 ಮತ್ತು ಬೆಂಗಳೂರಿನಲ್ಲಿ 7 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಇವರು ಬನ್ನೇರುಘಟ್ಟದ ಮನೆಯೊಂದರಲ್ಲಿ ಕಲರ್ ಪ್ರಿಂಟರ್ 2,000, 500, 200 ರೂ ಮುಖ ಬೆಲೆಯ ನಕಲಿ ನೋಟುಗಳನ್ನು ತಯಾರು ಮಾಡುತ್ತಿದ್ದರು.
BIGG NEWS: ಉಮೇಶ್ ಕತ್ತಿ ಅವರ ರಾಜಕೀಯ ಜೀವನ ಪುಸ್ತಕವಾಗಬೇಕು; ನನ್ನ ಆತ್ಮೀಯ ಮಿತ್ರ- ಅರುಣ್ ಸಿಂಗ್
ಆರೋಪಿಗಳು ಬನಶಂಕರಿ, ಜೆಪಿನಗರ, ಕೆ.ಎಸ್. ಲೇಔಟ್ ಸೇರಿದಂತೆ ಹಲವೆಡೆ ಸರಗಳ್ಳತನ ಮಾಡಿದ್ದರು. ಬಂಧಿತರಿಂದ 3.6 ಲಕ್ಷ ರೂ ಮುಖಬೆಲೆಯ ನಕಲಿ ನೋಟುಗಳು ಮತ್ತು 55 ಗ್ರಾಂ ಚಿನ್ನಾಭರಣ, ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ.