ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಆರೋಪಿಯಾಗಿರುವಂತ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡಲಾಗುತ್ತದೆ ಎಂಬುದಾಗಿ ಜನತಾ ಪಕ್ಷದ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದರು. ಹೀಗೆ ಪೊಸ್ಟರ್ ಅಂಟಿಸಿದ್ದಂತ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರವು ಸಂಸದ ಪ್ರಜ್ವಲ್ ರೇವಣ್ಮನನ್ನು ಹುಡುಕುವಲ್ಲಿ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಆರೋಪಿ ಪ್ರಜ್ವಲ್ ರೇವಣ್ಣನನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡಲಾಗುತ್ತದೆ ಎಂಬುದಾಗಿ ಜನತಾ ಪಕ್ಷದ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದರು.
ಬೆಂಗಳೂರಿನ ಕೆಲವೆಡೆ ಹೀಗೆ ಪೋಸ್ಟರ್ ಅಂಟಿಸಿದಂತ ಕಾರ್ಯಕರ್ತರನ್ನು ಪೊಲೀಸರು ಈಗ ವಶಕ್ಕೆ ಪಡೆದಿದ್ದು, ಹಚ್ಚಿದ್ದಂತ ಪೋಸ್ಟರ್ ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.
‘ತಾಯಿಯಾಗುವುದು’ ಸಹಜ ವಿದ್ಯಮಾನ : ಉದ್ಯೋಗಿಗೆ ಹೆರಿಗೆ ಬಾಕಿ ಪಾವತಿಸಲು ಕೋರ್ಟ್ ಆದೇಶ