ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರು ತಿಂಗಳೊಳಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗವಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
“ನಾವು ನಮ್ಮ ಶತ್ರುವನ್ನು ಪೂಜಿಸುವುದಿಲ್ಲ. ಯಾರಾದರೂ ನಮ್ಮ ಜನರನ್ನು ಕೊಂದರೆ, ನಾವು ಅವರನ್ನು ಪೂಜಿಸುವುದಿಲ್ಲ. ಆದರೆ ಅವರಿಗೆ ಅರ್ಹವಾದ ಉತ್ತರವನ್ನು ನೀಡುತ್ತೇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಉಳಿಸುವುದು ಪಾಕಿಸ್ತಾನಕ್ಕೆ ಕಷ್ಟಕರವಾಗಿದೆ. ಪಿಎಂ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿ, ಮತ್ತು ಆರು ತಿಂಗಳಲ್ಲಿ ಪಿಒಕೆ ಭಾರತದ ಭಾಗವಾಗಲಿದೆ” ಎಂದು ಆದಿತ್ಯನಾಥ್ ಹೇಳಿದರು.