ಚಿತ್ರದುರ್ಗ: ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರ ವಿರುದ್ಧ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಪೋಕ್ಸೋ ಕೇಸ್ ( POSCO Case ) ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈಗ ಐದನೇ ಆರೋಪಿಯಾಗಿದ್ದಂತ ಗಂಗಾಧರಯ್ಯ ಕೂಡ ಇಂದು ಪೊಲೀಸರ ಮುಂದೆ ಶರಣಾಗಿದ್ದಾರೆ.
ಪ್ರವಾಹ ಪರಿಶೀಲನೆ ಸಭೆಯಲ್ಲಿ ‘ಸಚಿವ ಆರ್ ಅಶೋಕ್’ ಪುಲ್ ನಿದ್ದೆ: ‘ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ’ ಎಂದ ಕಾಂಗ್ರೆಸ್
ಮುರುಘಾ ಶ್ರೀಗಳ ( Murugha Sri ) ವಿರುದ್ಧ ದಾಖಲಾಗಿರುವಂತ ಪೋಕ್ಸೋ ಕೇಸ್ ನಲ್ಲಿ ಶ್ರೀಗಳನ್ನು ಬಂಧಿಸಲಾಗಿತ್ತು. 2ನೇ ಆರೋಪಿ ರಶ್ಮೀ ಕೂಡ ಬಂಧನವಾಗಿದೆ. ಇಬ್ಬರನ್ನು ಪೊಲೀಸ್ ಕಸ್ಟಡಿಗೆ ನ್ಯಾಯಾಲಯವು ನೀಡಿದೆ. ಈಗಾಗಲೇ ಸ್ವಾಮೀಜಿಯನ್ನು ಕರೆದೊಯ್ದು ಪೊಲೀಸರು ಸ್ಥಳ ಮಹಜರ್ ನಡೆಸಿದ್ದಾರೆ. ಇಂದು ನ್ಯಾಯಾಲಯವು 2ನೇ ಆರೋಪಿ ಲೇಡಿ ವಾರ್ಡನ್ ರಶ್ಮಿಗೆ 7 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
BIG NEWS: ಬೆಂಗಳೂರಿನಲ್ಲಿ ‘ಬೆಸ್ಕಾಂ ನಿರ್ಲಕ್ಷ್ಯ’ದಿಂದ ಯುವತಿ ಮೃತಪಟ್ಟಿಲ್ಲ – BESCOM ಸ್ಪಷ್ಟನೆ
ಈ ಬೆನ್ನಲ್ಲೇ 5ನೇ ಆರೋಪಿಯಾಗಿದ್ದಂತ ಗಂಗಾಧರಯ್ಯ ಅವರು ಚಿತ್ರದುರ್ಗದ ಡಿವೈಎಸ್ಪಿ ಅನಿಲ್ ಕುಮಾರ್ ಮುಂದೆ ಇಂದು ಶರಣಾಗಿದ್ದಾರೆ. ಈ ಮೂಲಕ ಮುರುಘಾ ಶ್ರೀಗಳ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧನವಾದಂತೆ ಆಗಿದೆ. ಅವರನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಈ ಬಳಿಕ ನ್ಯಾಯಾಧೀಶರು ಪೊಲೀಸ್ ವಶಕ್ಕೆ ನೀಡಲಿದ್ದಾರೋ, ನ್ಯಾಯಾಂಗ ಬಂಧನ ವಿಧಿಸಲಿದ್ದಾರೋ ಕಾದು ನೋಡಬೇಕಿದೆ.