ಗುಜರಾತ್ : ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಎರಡು ದಿನಗಳ ಗುಜರಾತ್ ಮತ್ತು ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದಾರೆ. ದೇಶದ ಮೊದಲ ಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್ ಚೇಂಜ್ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಿ ಇಂದು ಗುಜರಾತಿನಲ್ಲಿ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಭೇಟಿಯ ಮೊದಲ ದಿನದಂದು ಹಿಮ್ಮತ್ನಗರ ಬಳಿ ಸಬರ್ ಡೈರಿಯ ದಿನಕ್ಕೆ ಮೂರು ಲಕ್ಷ ಲೀಟರ್ ಹಾಲು ಸಂಸ್ಕರಣಾ ಘಟಕವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಮತ್ತು 600 ಕೋಟಿ ವೆಚ್ಚದ ಚೀಸ್ ಪ್ಲಾಂಟ್ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಗುಜರಾತ್ ಸಚಿವ ಮತ್ತು ಬಿಜೆಪಿ ವಕ್ತಾರ ಜಿತು ವಘಾನಿ ಹೇಳಿದ್ದಾರೆ.
ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿರುವ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ನಲ್ಲಿರುವ ಭಾರತದ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಕ್ಕೆ (ಐಎಫ್ಎಸ್ಸಿ) ಭೇಟಿ ನೀಡಲಿದ್ದಾರೆ. ಇದು ದೇಶದ ಮೊದಲ ಅಂ ತಾರಾಷ್ಟ್ರೀಯ ಬುಲಿಯನ್ ಎಕ್ಸ್ಚೇಂಜ್ ಆಗಿದ್ದು, ಭಾರತದಲ್ಲಿ ಚಿನ್ನದ ಹಣಕಾಸುಕರಣವನ್ನು ಉತ್ತೇಜಿಸುತ್ತದೆ ಎಂದು ಐಎಫ್ಎಸ್ಸಿ ಪ್ರಾಧಿಕಾರ ತಿಳಿಸಿದೆ.
ಇದೇ ವೇಳೆ ಪಿಎಂ ಮೋದಿಯವರು ಇಂಟಿಗ್ರೇಟೆಡ್ ರೆಗ್ಯುಲೇಟರಿ ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ ಅಥಾರಿಟಿಯ ಪ್ರಧಾನ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ವ್ಯವಸ್ಥೆಯ ಅಡಿಯಲ್ಲಿ ಸಿಂಗಾಪುರ್ ಎಕ್ಸ್ಚೇಂಜ್ ಲಿಮಿಟೆಡ್ (SGX)ನ ಸದಸ್ಯರು ಇರಿಸಿರುವ ನಿಫ್ಟಿ ಉತ್ಪನ್ನಗಳ ಮೇಲಿನ ಎಲ್ಲಾ ಆರ್ಡರ್ಗಳನ್ನು NSE-IFSC ಆರ್ಡರ್ ಮ್ಯಾಚಿಂಗ್ ಮತ್ತು ಟ್ರೇಡಿಂಗ್ ಪ್ಲಾಟ್ಫಾರ್ಮ್ನಲ್ಲಿ ರೂಟ್ ಮಾಡಲಾಗುತ್ತದೆ ಎನ್ನಲಾಗುತ್ತಿದೆ.