ಬೆಂಗಳೂರು: ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬೆಳಿಗ್ಗೆ 8ರಿಂದ 11:30ರ ಅವಧಿಯಲ್ಲಿ ನಗರ ರೈಲು ನಿಲ್ದಾಣಕ್ಕೆ ಬರಬೇಕಿದ್ದ ಹಾಗೂ ನಗರ ರೈಲು ನಿಲ್ದಾಣದಿಂದ ಸಂಚರಿಸಬೇಕಿದ್ದ ಹಲವು ರೈಲುಗಳನ್ನು ಯಶವಂತಪುರ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಳಗ್ಗೆ 8 ರಿಂದ 11 ಗಂಟೆಗೆ ಬೆಂಗಳೂರಿನಿಂದ ಹೊರಡಬೇಕಿದ್ದ ರೈಲುಗಳನ್ನು ಮಧ್ಯಾಹ್ನ 12 ಗಂಟೆ ನಂತರಕ್ಕೆ ಶೆಡ್ಯೂಲ್ ಮಾಡಲಾಗಿದೆ. ಬೆಳಗ್ಗೆ 8 ರಿಂದ 11ರವರೆಗೆ ಕೆಎಸ್ಆರ್ ನಿಲ್ದಾಣ ಪ್ರವೇಶಿಸಬೇಕಾಗಿರುವ ಎಲ್ಲ ರೈಲುಗಳನ್ನು ಯಶವಂತಪುರ ಮತ್ತು ಬೈಯಪ್ಪನಹಳ್ಳಿಗೆ ಡೈವರ್ಟ್ ಮಾಡಲಾಗಿದೆ.
11 ರೈಲುಗಳ ಸಂಚಾರ ವ್ಯತ್ಯಯ
1. ರೈಲು ಸಂಖ್ಯೆ 16512 ಕಣ್ಣೂರು – ಕೆಎಸ್ಆರ್ಬೆಂಗಳೂರು ಎಕ್ಸ್ಪ್ರೆಸ್
2. ರೈಲು ಸಂಖ್ಯೆ 06274 ಅರಸೀಕೆರೆ – ಕೆಎಸ್ಆರ್ಬೆಂಗಳೂರು
3. ರೈಲು ಸಂಖ್ಯೆ 16550 ಕೋಲಾರ – ಕೆಎಸ್ಆರ್ ಬೆಂಗಳೂರು
4. ರೈಲು ಸಂಖ್ಯೆ 06256 ಮೈಸೂರು – ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು
5. ರೈಲು ಸಂಖ್ಯೆ 06266 ಹಿಂದೂಪುರ – ಕೆಎಸ್ಆರ್ಬೆಂಗಳೂರು ಮೆಮು ವಿಶೇಷ ರೈಲು
6. ರೈಲು ಸಂಖ್ಯೆ. 06264 ಮಾರಿಕುಪ್ಪಂ – ಕೆಎಸ್ಆರ್ಬೆಂಗಳೂರು ಮೆಮು ವಿಶೇಷ ರೈಲು
7. ರೈಲು ಸಂಖ್ಯೆ 06571 ಕೆಎಸ್ಆರ್ ಬೆಂಗಳೂರು – ತುಮಕೂರು ಮೆಮು ವಿಶೇಷ ರೈಲು
8. ರೈಲು ಸಂಖ್ಯೆ 06583 ಕೆಎಸ್ಆರ್ ಬೆಂಗಳೂರು – ಹಾಸನ ಡೆಮು ವಿಶೇಷ ರೈಲು
9. ರೈಲು ಸಂಖ್ಯೆ 01765 ಕೆಎಸ್ಆರ್ ಬೆಂಗಳೂರು – ವೈಟ್ಫೀಲ್ಡ… ಮೆಮು ವಿಶೇಷ ರೈಲು
10. ರೈಲು ಸಂಖ್ಯೆ 06257 ಕೆಎಸ್ಆರ್ ಬೆಂಗಳೂರು – ಮೈಸೂರು ಮೆಮು ವಿಶೇಷ ರೈಲು
11. ರೈಲು ಸಂಖ್ಯೆ 06292 ಕುಪ್ಪಂ – ಕೆಎಸ್ಆರ್ಬೆಂಗಳೂರು ಮೆಮು ವಿಶೇಷ ರೈಲು
ರೈಲುಗಳ ವೇಳಾಪಟ್ಟಿ ಮರುನಿಗದಿ
1. ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್-ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್ ರೈಲನ್ನು 11.11.2022 ರಂದು ಶಿವಮೊಗ್ಗ ನಗರದಿಂದ 60 ನಿಮಿಷಗಳ ಕಾಲ ಮರುನಿಗದಿಗೊಳಿಸಲಾಗುವುದು ಮತ್ತು ಮಾರ್ಗದಲ್ಲಿ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
2. ರೈಲು ಸಂಖ್ಯೆ 16215 ಮೈಸೂರು-ಕೆಎಸ್ಆರ್ ಬೆಂಗಳೂರು ಚಾಮುಂಡಿ ಎಕ್ಸ್ಪ್ರೆಸ್ ಅನ್ನು 11.11.2022 ರಂದು ಮೈಸೂರಿನಿಂದ ಪ್ರಾರಂಭಿಸಿ, 60 ನಿಮಿಷಗಳ ಕಾಲ ಮರುನಿಗದಿಗೊಳಿಸಲಾಗುವುದು ಮತ್ತು ಮಾರ್ಗದಲ್ಲಿ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
3) ರೈಲು ಸಂಖ್ಯೆ 12007 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಶತಾಬ್ದಿ ಎಕ್ಸ್ಪ್ರೆಸ್ ಅನ್ನು 11.11.2022 ರಂದು ಎಂಜಿಆರ್ ಚೆನ್ನೈ ಸೆಂಟ್ರಲ್ ನಿಂದ 60 ನಿಮಿಷಗಳ ಕಾಲ ಮರುನಿಗದಿಪಡಿಸಲಾಗುವುದು.
4. 11.11.2022 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16558 ಕೆಎಸ್ಆರ್ ಬೆಂಗಳೂರು-ಮೈಸೂರು ರಾಜ್ಯ ರಾಣಿ ಎಕ್ಸ್ಪ್ರೆಸ್ ಅನ್ನು 90 ನಿಮಿಷಗಳ ಕಾಲ ಮರುನಿಗದಿಪಡಿಸಲಾಗುವುದು.
5. ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲು ದಿನಾಂಕ 11.11.2022 ರಂದು ಮೈಸೂರಿನಿಂದ ಹೊರಟು ಹಾಸನ ಮತ್ತು ಅರಸೀಕೆರೆ ನಿಲ್ದಾಣಗಳ ಮೂಲಕ ಮಾರ್ಗ ಬದಲಿಸಿದ ಮಾರ್ಗದಲ್ಲಿ 100 ನಿಮಿಷಗಳ ಕಾಲ ಮರುನಿಗದಿಪಡಿಸಲಾಗುವುದು.
ರೈಲುಗಳ ನಿಯಂತ್ರಣ
1. ರೈಲು ಸಂಖ್ಯೆ 01766 ವೈಟ್ಫೀಲ್ಡ್-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ, 11.11.2022 ರಂದು ವೈಟ್ ಫೀಲ್ಡ್ ನಿಂದ ಪ್ರಾರಂಭವಾಗಿ, ಮಾರ್ಗದಲ್ಲಿ 50 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
2. ರೈಲು ಸಂಖ್ಯೆ 01776 ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ, 11.11.2022 ರಂದು ಮಾರಿಕುಪ್ಪಂನಿಂದ ಪ್ರಾರಂಭವಾಗಿ, ಮಾರ್ಗದಲ್ಲಿ 75 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
3.] ರೈಲು ಸಂಖ್ಯೆ 16023 ಮೈಸೂರು-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು 11.11.2022 ರಂದು ಮೈಸೂರಿನಿಂದ ಹೊರಡುತ್ತದೆ.
4. ರೈಲು ಸಂಖ್ಯೆ 17029 ಸರ್ ಎಂ ವಿಶ್ವೇಶ್ವರಯ್ಯ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್, 11.11.2022 ರಂದು ಮೈಸೂರಿನಿಂದ ಪ್ರಾರಂಭವಾಗಲಿದ್ದು, ಮಾರ್ಗದಲ್ಲಿ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಇನ್ನೂ, ರೈಲು ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಪೊಲೀಸರು ಹಾಗೂ ರೈಲ್ವೆ ಇಲಾಖೆಯಿಂದ ಭದ್ರತೆ ಕಲ್ಪಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಯಾವುದೇ ರೈಲುಗಳು ನಗರ ನಿಲ್ದಾಣಕ್ಕೆ ಬರುವುದಿಲ್ಲ. ಪ್ಲಾಟ್ಫಾರಂ 7 ಅಥವಾ 8ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ರೈಲು ನಿಲ್ದಾಣ ಸುತ್ತಮುತ್ತಲ ಪ್ರದೇಶದ ಭದ್ರತೆಗಾಗಿ 1200ಕ್ಕೂ ಹೆಚ್ಚು ರೈಲ್ವೆ ಪೊಲೀಸರನ್ನು ನೇಮಿಸಲಾಗಿದೆ.
ಬೆಳಿಗ್ಗೆ 9 ಗಂಟೆಗೆ ಮೋದಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಹೆಲಿಕಾಪ್ಟರ್ನಲ್ಲಿ ಮೇಖ್ರಿ ಸರ್ಕಲ್ ಸಮೀಪದ ಏರ್ಫೋರ್ಸ್ ಕಮಾಂಡ್ಗೆ ಬರಲಿದ್ದಾರೆ. ಅಲ್ಲಿಂದ ಕಾರಿನಲ್ಲಿ ನಗರ ರೈಲು ನಿಲ್ದಾಣಕ್ಕೆ ತೆರಳಲಿದ್ದಾರೆ. ಮಾರ್ಗದಲ್ಲಿ ಭದ್ರತೆಗಾಗಿ 6,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 20 ಕೆಎಸ್ಆರ್ಪಿ ಹಾಗೂ ಸಿಎಆರ್ ತುಕಡಿಗಳು ಕಾರ್ಯನಿರ್ವಹಿಸಲಿವೆ. ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಕಾರು ಅಥವಾ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.