ನವದೆಹಲಿ : ಪ್ರಧಾನ ಮೋದಿಯವು ನಾಳೆ (ಡಿಸೆಂಬರ್ 11) ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಸುಮಾರು 75 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಇದೇ ವೇಳೆ ನಾಗ್ಪುರ ರೈಲು ನಿಲ್ದಾಣದಿಂದ ವಂದೇ ಭಾರತ್ ಎಕ್ಸ್ಪ್ರೆಸ್ ಗೆ ಚಾಲನೆ ನೀಡಲಿದ್ದು, ಫ್ರೀಡಂ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಖಾಪ್ರಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸವಾರಿ ಮಾಡಲಿದ್ದಾರೆ. ನಂತರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (AIIMS) ನಾಗ್ಪುರಕ್ಕೆ ಸಮರ್ಪಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮೋದಿಯವರು, ‘ನಾಗ್ಪುರ ಮೆಟ್ರೋ ಹಂತ- II’ ನ ಶಿಲಾನ್ಯಾಸವನ್ನು ಸಹ ಮಾಡಲಿದ್ದಾರೆ. ಈ ಕುರಿತಂತೆ ಪಿಎಂ ಕಚೇರಿ ಮಾಹಿತಿ ನೀಡಿದೆ.
ನಾಗ್ಪುರದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ (ಎನ್ಐಒ) ಮತ್ತು ನಾಗ್ ನದಿ ಮಾಲಿನ್ಯ ನಿವಾರಣೆ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಾದ ಬಳಿಕ ಪ್ರಧಾನಮಂತ್ರಿಯವರು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (ಸಿಐಪಿಇಟಿ), ಚಂದ್ರಾಪುರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಡಿಸೈನ್ ಕಲಿಕೆ: ವಿಶ್ವ ವಿನ್ಯಾಸ ಪರಿಷತ್ ಉತ್ಸುಕ – ಸಚಿವ ಅಶ್ವತ್ಥನಾರಾಯಣ
Uniform Civil Code: ಏಕರೂಪ ನಾಗರಿಕ ಸಂಹಿತೆ ಎಂದರೇನು? ಇದರ ಅನುಷ್ಠಾನದ ಪರಿಣಾಮಗಳೇನು? ಇಲ್ಲಿದೆ ಅಗತ್ಯ ಮಾಹಿತಿ
BIGG NEW : ಏರ್ ಇಂಡಿಯಾ ವಿಮಾನದ ಕಾರ್ಗೋ ಹೋಲ್ಡ್ ನಲ್ಲಿ ಹಾವು ಪತ್ತೆ : ತನಿಖೆಗೆ ಆದೇಶ