ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಕಣದಲ್ಲಿ ಇಂದು ಅತ್ಯಂತ ಭಾವುಕ ದೃಶ್ಯವೊಂದು ಕಂಡುಬಂದಿದೆ. ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಭೀಕರ ಘಟನೆಗೆ ನ್ಯಾಯ ಕೋರಿ ಹೋರಾಡುತ್ತಿರುವ ಸಂತ್ರಸ್ತ ವೈದ್ಯೆಯ ತಾಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೇದಿಕೆ ಹಂಚಿಕೊಂಡರು. ಚುನಾವಣಾ ರ್ಯಾಲಿಯ ನಡುವೆ ನಡೆದ ಈ ಭೇಟಿಯು ಎಲ್ಲರ ಗಮನ ಸೆಳೆದಿದೆ.
ವೇದಿಕೆಯ ಮೇಲೆ ಸಂತ್ರಸ್ತೆಯ ತಾಯಿಯನ್ನು ಕಂಡು ಪ್ರಧಾನಿ ಮೋದಿ ಅವರು ಅತ್ಯಂತ ಭಾವುಕರಾದರು. ಮಗಳ ಸಾವಿನ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಆ ತಾಯಿಯ ಅಳಲನ್ನು ಪ್ರಧಾನಿ ಶಾಂತವಾಗಿ ಆಲಿಸಿದರು.
“ನಿಮ್ಮ ಮಗಳಿಗೆ ನ್ಯಾಯ ಸಿಗುವವರೆಗೂ ಈ ಹೋರಾಟ ನಿಲ್ಲದು. ಪ್ರತಿಯೊಬ್ಬ ಬಂಗಾಳದ ಮಗಳ ಸುರಕ್ಷತೆ ನಮ್ಮ ಮೊದಲ ಆದ್ಯತೆ,” ಎಂದು ಹೇಳುವ ಮೂಲಕ ಪ್ರಧಾನಿ ಆ ತಾಯಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ಕಿಡಿಕಾರಿದ ಮೋದಿ, “ಅಪರಾಧಿಗಳನ್ನು ರಕ್ಷಿಸುವ ಸರ್ಕಾರಕ್ಕೆ ರಾಜ್ಯದ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ. ಬಂಗಾಳದಲ್ಲಿ ‘ಅಮ್ಮ, ಮಣ್ಣು ಮತ್ತು ಮನುಷ್ಯ’ ಎಂಬ ಘೋಷಣೆ ಇಂದು ಕೇವಲ ಸುಳ್ಳಿನ ಕಂತೆಯಾಗಿದೆ,” ಎಂದು ಗುಡುಗಿದರು.
A deeply moving and heartbreaking moment…
A mother, who lost her only daughter to a horrific crime, broke down as PM Shri @narendramodi ji comforted her with a gentle gesture.
Dear Bengal, pls vote for her in large numbers 🙏#RGKar pic.twitter.com/eulsxwRsBj
— Pamela Goswami (@pamelagoswami9) April 24, 2026








