ಅಹಮದಾಬಾದ್ : ಮೊದಲ ಹಂತದ ಮತದಾನ ಗುರುವಾರ (ಡಿಸೆಂಬರ್ 1) ಕೊನೆಗೊಂಡಿದ್ದು, ಅಹಮದಾಬಾದ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಆರಂಭವಾಗಿದೆ. ಪ್ರಧಾನಿ ಮೋದಿಯವರ ಈ 54 ಕಿಮೀ ಉದ್ದದ ರೋಡ್ಶೋ ಸಂಜೆಯವರೆಗೂ ಮುಂದುವರಿಯುತ್ತದೆ ಮತ್ತು 14 ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗುತ್ತದೆ. ಇದು ಪ್ರಧಾನಿ ಮೋದಿಯವರ ಇದುವರೆಗಿನ ಅತಿದೊಡ್ಡ ಚುನಾವಣಾ ರೋಡ್ಶೋ ಆಗಿದ್ದು, ‘ಪುಷ್ಪಾಂಜಲಿ ಯಾತ್ರೆ’ ಎಂದು ಹೆಸರಿಡಲಾಗಿದೆ. ಈ ರೋಡ್ಶೋನಲ್ಲಿ ಪ್ರಧಾನಿ ಮೋದಿ ಅವರು ಅಹಮದಾಬಾದ್ನಲ್ಲಿ 13 ಮತ್ತು ಗಾಂಧಿನಗರದ 1 ಸ್ಥಾನವನ್ನು ಕವರ್ ಮಾಡಲಿದ್ದಾರೆ.
ಪ್ರಧಾನಿಯವರ ಈ ರೋಡ್ ಶೋ ಹಾದುಹೋಗುವ ಸ್ಥಾನಗಳ ಪೈಕಿ 2017ರಲ್ಲಿ ಬಿಜೆಪಿ 11 ಸ್ಥಾನಗಳನ್ನ ಗೆದ್ದಿತ್ತು. ಆದ್ರೆ, ಕಾಂಗ್ರೆಸ್ 3 ಸ್ಥಾನ ಗೆದ್ದಿತ್ತು. ಪ್ರಧಾನಿಯವರು ನವೆಂಬರ್ 6 ರಂದು ಗುಜರಾತ್ ವಿಧಾನಸಭಾ ಚುನಾವಣೆ-2022ರ ಚುನಾವಣಾ ಪ್ರಚಾರವನ್ನ ಪ್ರಾರಂಭಿಸಿದರು. ಪ್ರಧಾನಿಯವರು ಇದುವರೆಗೆ 33 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ರ್ಯಾಲಿಗಳನ್ನ ನಡೆಸಿದ್ದಾರೆ. ಈ ಸಮಯದಲ್ಲಿ, ಪ್ರಧಾನಿ ಮೋದಿ 28 ರ್ಯಾಲಿಗಳು ಮತ್ತು 2 ರೋಡ್ ಶೋಗಳನ್ನು ಮಾಡಿದ್ದಾರೆ. ಇಂದು ಪ್ರಧಾನಿಯವರ ಮೂರನೇ ರೋಡ್ ಶೋ ಇದಾಗಿದೆ.
ಗುರುವಾರ ರೋಡ್ ಶೋಗೂ ಮುನ್ನ ಪ್ರಧಾನಿ ಮೋದಿ ಹಲವೆಡೆ ಸಾರ್ವಜನಿಕ ಸಭೆಗಳನ್ನ ಉದ್ದೇಶಿಸಿ ಮಾತನಾಡಿದರು. ಮೊದಲಿಗೆ ಕಲೋಲ್ನಲ್ಲಿ ಪ್ರಧಾನಿ ರ್ಯಾಲಿ ನಡೆಸಿದರು. ಇಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, 2014 ರ ಮೊದಲು ಭಾರತವು ಮೊಬೈಲ್ ಜಗತ್ತಿನಲ್ಲಿ ಇಷ್ಟು ದೊಡ್ಡ ಕ್ರಾಂತಿಯನ್ನು ಮಾಡಬಹುದೆಂದು ಯಾರೂ ಭಾವಿಸಿರಲಿಲ್ಲ ಎಂದು ಹೇಳಿದರು. 2014ರಲ್ಲಿ ನೀವು ನನ್ನನ್ನು ದೆಹಲಿಗೆ ಕಳುಹಿಸಿದಾಗ ಮೊಬೈಲ್ ತಯಾರಿಸುವ ಎರಡು ಕಾರ್ಖಾನೆಗಳಿದ್ದರೆ ಇಂದು 200ಕ್ಕೂ ಹೆಚ್ಚು ಇವೆ.
ಬೆಳಗಾವಿಯಲ್ಲಿ ಮರಾಠಿ ಪುಂಡರಿಂದ ಯುಕನ ಮೇಲೆ ಹಲ್ಲೆ: ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು ಗೊತ್ತಾ.?
BIGG NEWS : ‘ಕನ್ನಡ ಬಾವುಟ’ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ : ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ