ಚೆನ್ನೈ : ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈನಲ್ಲಿರುವ ಅಣ್ಣಾ ವಿಶ್ವವಿದ್ಯಾಲಯದ 42 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪ್ರಧಾನಿಯನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಸುಮಾರು 69 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
Delighted to join the 42nd convocation ceremony of Anna University in Chennai. https://t.co/FYxoDnfxi3
— Narendra Modi (@narendramodi) July 29, 2022
ಬಳಿಕ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮಾತನಾಡಿ, ನೀವು ಉದ್ಯೋಗ ಪಡೆಯುವುದು ಮಾತ್ರವಲ್ಲದೆ ಇತರರಿಗೂ ಕೆಲಸ ನೀಡಬೇಕು. ಇಂಜಿನಿಯರ್ಗಳು ಉದ್ಯಮಿಗಳಾಗಬೇಕು. ಉನ್ನತ ಶಿಕ್ಷಣದಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಶೇ.56.5 ರಷ್ಟು ಮಹಿಳೆಯರು ಇಂದು ಘಟಿಕೋತ್ಸವದಲ್ಲಿದ್ದಾರೆ. ಪ್ರವೇಶ ಪರೀಕ್ಷೆಯನ್ನು ದಿವಂಗತ ಮುಖ್ಯಮಂತ್ರಿ ಕರುಣಾನಿಧಿ ರದ್ದುಗೊಳಿಸಿದರು. ಇದರಿಂದಾಗಿ ತಮಿಳುನಾಡಿನ ಕಾಲೇಜುಗಳಲ್ಲಿ ವರ್ಷಕ್ಕೆ 25 ಸಾವಿರದಿಂದ 77 ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ ಎಂದರು.
#WATCH | PM Modi visits multiple classrooms to meet graduating students who couldn’t be present at the main venue of the Anna University convocation ceremony due to space constraints#Chennai pic.twitter.com/XC8fa9vYbY
— ANI (@ANI) July 29, 2022
ಅಣ್ಣಾ ವಿಶ್ವವಿದ್ಯಾನಿಲಯವನ್ನು ಸೆಪ್ಟೆಂಬರ್ 4, 1978 ರಂದು ಸ್ಥಾಪಿಸಲಾಯಿತು. ಇದಕ್ಕೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರ ಹೆಸರನ್ನು ಇಡಲಾಗಿದೆ. ಇದು 13 ಸಾಂವಿಧಾನಿಕ ಕಾಲೇಜುಗಳು, 494 ಸಂಯೋಜಿತ ಕಾಲೇಜುಗಳು ತಮಿಳುನಾಡಿನಲ್ಲಿ ಹರಡಿದೆ ಮತ್ತು ತಿರುನಲ್ವೇಲಿ, ಮಧುರೈ ಮತ್ತು ಕೊಯಮತ್ತೂರಿನಲ್ಲಿ ಪ್ರಾದೇಶಿಕ ಕ್ಯಾಂಪಸ್ಗಳನ್ನು ಹೊಂದಿದೆ.