ನಮೀಬಿಯಾ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಿಗ್ಗೆ ನಮೀಬಿಯಾದ ರಾಜಧಾನಿ ವಿಂಡ್ಹೋಕ್ಗೆ ಆಗಮಿಸಿದರು.
ನಮೀಬಿಯಾ ಅಧ್ಯಕ್ಷ ನೆಟುಂಬೊ ನಂದಿ-ಎನ್ಡೈಟ್ವಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ನಮೀಬಿಯಾಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ.
ಹೊಷೇಯಾ ಕುಟಾಕೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
“ತಮ್ಮ ಭೇಟಿಯ ಕೊನೆಯ ಹಂತದಲ್ಲಿ, ನಮೀಬಿಯಾ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಡಾ.ನೆಟುಂಬೊ ನಂದಿ-ಎನ್ಡೈಟ್ವಾ ಅವರ ಆಹ್ವಾನದ ಮೇರೆಗೆ, ಪ್ರಧಾನಿಯವರು ಜುಲೈ 09, 2025 ರಂದು ನಮೀಬಿಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಇದು ನಮೀಬಿಯಾಕ್ಕೆ ಪ್ರಧಾನಿಯವರ ಮೊದಲ ಭೇಟಿಯಾಗಿದೆ ಮತ್ತು ಭಾರತದಿಂದ ನಮೀಬಿಯಾಕ್ಕೆ ಮೂರನೇ ಪ್ರಧಾನಿ ಭೇಟಿಯಾಗಿದೆ.
“ಭೇಟಿಯ ಸಮಯದಲ್ಲಿ, ಪ್ರಧಾನಿ ಅಧ್ಯಕ್ಷ ನಂದಿ-ಎನ್ಡೈಟ್ವಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಧಾನಮಂತ್ರಿಯವರು ನಮೀಬಿಯಾದ ಸ್ಥಾಪಕ ಪಿತಾಮಹ ಮತ್ತು ಮೊದಲ ಅಧ್ಯಕ್ಷ ದಿವಂಗತ ಡಾ. ಸ್ಯಾಮ್ ನುಜೊಮಾ ಅವರಿಗೂ ಗೌರವ ನಮನ ಸಲ್ಲಿಸಲಿದ್ದಾರೆ. ಅವರು ನಮೀಬಿಯಾ ಸಂಸತ್ತಿನಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ” ಎಂದು ಎಂಇಎ ತಿಳಿಸಿದೆ.