ನವದೆಹಲಿ ; ಆರೋಗ್ಯ ಮತ್ತು ಆಯುರ್ವೇದದ ದೇವರಾದ ಧನ್ವಂತರಿಯ ಜನ್ಮದಿನದಂದು (ಧನ್ತೇರಸ್) 12,850 ಕೋಟಿ ರೂ.ಗೂ ಹೆಚ್ಚು ಮೊತ್ತದ ವೈದ್ಯಕೀಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ, 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆಗೆ ಚಾಲನೆ ನೀಡಿದರು. ಈ ವೇಳೆ ರಾಜಕೀಯ ಕಾರಣಗಳಿಂದಾಗಿ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನ ಜಾರಿಗೊಳಿಸದ ದೆಹಲಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳನ್ನ ಪ್ರಧಾನಿ ಮೋದಿ ಗುರಿಯಾಗಿಸಿದರು. ಈ ಯೋಜನೆಯಡಿಯಲ್ಲಿ ಈ ಎರಡು ರಾಜ್ಯಗಳ ಹಿರಿಯರು ವಾರ್ಷಿಕ 5 ಲಕ್ಷ ರೂ.ವರೆಗಿನ ಉಚಿತ ಚಿಕಿತ್ಸೆಯ ಪ್ರಯೋಜನವನ್ನ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ನನಗೆ ಬೇಸರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿರುವ 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯರ ಸೇವೆ ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ಹೇಳಿದರು. ನಿಮ್ಮ ನೋವು ಮತ್ತು ಸಂಕಟದ ಬಗ್ಗೆ ನನಗೆ ತಿಳಿಯುತ್ತದೆ. ಆದ್ರೆ, ನಾನು ನಿಮಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ತಮ್ಮ ರಾಜಕೀಯ ಹಿತಾಸಕ್ತಿಗಳಿಂದ ಈ ಯೋಜನೆಯನ್ನ ಜಾರಿಗೆ ತರುತ್ತಿಲ್ಲ ಎಂದರು. ಅಂದ್ಹಾಗೆ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ. ಅತಿಶಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.
ಈ ಯೋಜನೆಯಡಿಯಲ್ಲಿ, 70 ವರ್ಷಕ್ಕಿಂತ ಮೇಲ್ಪಟ್ಟ ಜನರು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗೆ ಸಂಯೋಜಿತವಾಗಿರುವ ಆಸ್ಪತ್ರೆಗಳಲ್ಲಿ ವಾರ್ಷಿಕವಾಗಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಾರೆ ಮತ್ತು ಅವರಿಗೆ ‘ಆಯುಷ್ಮಾನ್ ವಯ ವಂದನಾ’ ಕಾರ್ಡ್ ನೀಡಲಾಗುತ್ತದೆ. ಅವರು ತಮ್ಮ ಭಾಷಣದಲ್ಲಿ, ‘ದೇಶದ ನಾಗರಿಕರು ಆರೋಗ್ಯವಂತರಾಗಿದ್ದರೆ, ಆ ದೇಶದ ಪ್ರಗತಿಯೂ ವೇಗವಾಗಿರುತ್ತದೆ. ಈ ಚಿಂತನೆಯನ್ನ ಗಮನದಲ್ಲಿಟ್ಟುಕೊಂಡು, ತನ್ನ ನಾಗರಿಕರ ಆರೋಗ್ಯಕ್ಕೆ ಆದ್ಯತೆ ನೀಡಿ, ಕೇಂದ್ರ ಸರ್ಕಾರವು ಆರೋಗ್ಯ ನೀತಿಯ ಐದು ಸ್ತಂಭಗಳ ಮೇಲೆ ನಿರ್ಧರಿಸಿದೆ ಎಂದರು.
ಗಮನಿಸಿ : ಧಂತೇರಸ್ ದಿನ ‘ಚಿನ್ನ’ ಖರೀದಿಸುವಾಗ ವಂಚನೆಗೆ ಒಳಗಾಗದಿರಲು ಈ ಪ್ರಮುಖ ‘ಸಲಹೆ’ ಅನುಸರಿಸಿ!
BREAKING : ರಾಜಸ್ಥಾನದಲ್ಲಿ ಭೀಕರ ಅಪಘಾತ ; ಕಲ್ವರ್ಟ್’ಗೆ ಬಸ್ ಡಿಕ್ಕಿ, 12 ಮಂದಿ ಸಾವು, ಹಲವರಿಗೆ ಗಾಯ
ನಾವು ಗೆಲುವಿನ ಅಂತರ ನೋಡುತ್ತಿಲ್ಲ, ಗೆಲುವು ಮಾತ್ರ ನೋಡುತ್ತಿದ್ದೇವೆ : ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ