ಶಿವಮೊಗ್ಗ: ರಾಜ್ಯದಲ್ಲಿ ಮದುವೆ ( Marriage ) ಆಗುವುದಕ್ಕೆ ವಧುವಿನ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವಂತೆ, ಯುವಕನೊಬ್ಬ ತನಗೆ ಮದುವೆಯಾಗಲು ಹುಡುಗಿ ಇದ್ದರೆ ತಿಳಿಸಿ ಎಂಬುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾನೆ. ಈ ಪತ್ರ ವೈರಲ್ ( Viral Latter ) ಕೂಡ ಆಗಿದೋ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ( Shimogga District Superintendent of Police ) ಯುವಕನೊಬ್ಬ ಬರೆದಿರುವಂತ ಪತ್ರವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ( Social Media ) ವೈರಲ್ ಆಗಿದೆ. ಆ ಪತ್ರದಲ್ಲಿ ಭದ್ರಾವತಿಯ ಪ್ರವೀಣ್ ಎಂಬ ಯುವಕ ವಿವಾಹ ಮಾಡಿಕೊಳ್ಳುವ ಸಲುವಾಗಿ ವಧು ಇದ್ದಲ್ಲಿ ತಿಳಿಸುವಂತೆ ಎಸ್ಪಿಗೆ ಮನವಿ ಮಾಡಿದ್ದಾರೆ.
BREAKING NEWS : ಹೈಕೋರ್ಟ್ ಮೆಟ್ಟಿಲೇರಿದ ‘B.L ಸಂತೋಷ್’ ; ‘SIT’ ನೋಟಿಸ್ ವಿರುದ್ಧ ಅರ್ಜಿ
ಹೀಗಿದೆ ಪತ್ರದ ಸಾರಾಂಶ
ನಾನು ಭದ್ರಾವತಿ ನಗರದಲ್ಲಿ ಜನಿಸಿದ್ದೇನೆ. ನಾನು ಯಾದವ ಗೊಲ್ಲ ಜಾತಿಗೆ ಸೇರಿದವನಾಗಿರುತ್ತೇನೆ. ನನ್ನ ತಂದೆ ಕಡೆಯವರು ಆಂಧ್ರಪ್ರದೇಶ ರಾಜ್ಯದ ಮಡಕಶಿರ ಟೌನ್ ಶ್ರೀಸತ್ಯಸಾಯಿ ಜಿಲ್ಲೆಯವರಾಗಿದ್ದಾರೆ.
ನಮ್ಮ ತಂದೆಯವರು ತೋಟಗಾರಿಕಾ ಇಲಾಖೆಯ ನಿವೃತ್ತ ಡೈಪ್ಯೂಟಿ ಡೈರೆಕ್ಟರ್ ಆಗಿರುತ್ತಾರೆ. ಅವರು ಮರಣ ಹೊಂದಿರುತ್ತಾರೆ. ನನ್ ನತಾಯಿವರು ಇದ್ದು, ನನ್ನ ಅಣ್ಣ ಇದ್ದು, ಅವರು ಮದುವೆಯಾಗಿರುತ್ತಾರೆ. ಈ ಹಿಂದೆ ನಾನು ಸಾಫ್ಟ್ ವೇರ್ ಕಂಪನಿಯಲ್ಲಿ ಅಧ್ಯಾಪಕನಾಗಿ ಮತ್ತು ಬೆಂಗಳೂರಿನ ಎಂ.ಸಿಐ ಚಿಟ್ಸ್ ಕಂಪನಿಯಲ್ಲಿ ಕೆಲಸ ಮಾಡಿರುತ್ತೇನೆ.
ಈಗ ಭದ್ರಾವತಿಯಲ್ಲಿರುವ ನಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುತ್ತೇನೆ. ವಧು ಅನ್ವೇಷಣೆಯಲ್ಲಿ ಯಾವುದು ಸರಿಯಾಗದ ಕಾರಣ, ತಮ್ಮ ಅಧೀನದಲ್ಲಿ ಯಾರಾದರೂ ಒಂದು ವಧು ಕಂಡು ಬಂದಲ್ಲಿ, ನನಗೆ ತಿಳಿಸುವುದರ ಮೂಲಕ ನಾನು ವಿವಾಹ ಮಾಡಿಕೊಳ್ಳಲು ಸಹಾಯ ಮಾಡಬೇಕಾಗಿ ಕೇಳಿಕೊಳ್ಳುತ್ತೇನೆ.
ನನ್ನ ಪರಿಚಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೇ ವಿ.ಕದರೇಶ್, ಪುರಸಭೆ ಸದಸ್ಯರು ಮತ್ತು ಚಂದ್ರ ನಾಯಕ್ ಗ್ರಾಮಪಂಚಾಯ್ತಿ ಸದಸ್ಯರು ಕೇಳಬಹುದು. ಈ ಅರ್ಜಿಯೊಂದಿಗೆ ಪರಿಶೀಲನೆಗಾಗಿ ನನ್ನ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರುತ್ತೇನೆ ಎಂದಿದ್ದಾನೆ.
BREAKING NEWS: ‘ಕಾಂತಾರ ಚಿತ್ರತಂಡ’ಕ್ಕೆ ಬಿಗ್ ರಿಲೀಫ್: ‘ವರಾಹ ರೂಪಂ’ ಹಾಡು ಬಳಕೆಗೆ ‘ಕೇರಳ ಕೋರ್ಟ್’ ಅನುಮತಿ