ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನತೆಯ ನಡುವೆ ತರಾವರಿ ವೀಡಿಯೋಗಳು ಹರಿದಾಡುತ್ತಿದ್ದಾವೆ. ದಯವಿಟ್ಟು ಇಂತಹ ಪ್ರೊಪಗಾಂಡ ಪೋಸ್ಟ್ ಗಳನ್ನು ನಂಬಿ ಮೋಸ ಹೋಗಬೇಡಿ ಅಂತ ರಾಜ್ಯ ಸರ್ಕಾರ ಎಚ್ಚರಿಸಿದೆ.
ಈ ಬಗ್ಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ವಿಡಿಯೋ ಗೇಮ್ ದೃಶ್ಯಗಳ ಹಾವಳಿ ಇಂತಹ ಹಲವಾರು ಯುದ್ಧದ ವಿಡಿಯೋ ಗೇಮ್ ದೃಶ್ಯಗಳನ್ನು ಭಾರತ-ಪಾಕಿಸ್ತಾನ ಸಂಘರ್ಷದ ನೈಜ ದೃಶ್ಯಗಳೆಂದು ಬಿಂಬಿಸಲಾಗುತ್ತಿದೆ. ದಯವಿಟ್ಟು ಇಂತಹ ಪ್ರೊಪಗಾಂಡ ಪೋಸ್ಟ್‌ಗಳನ್ನು ನಂಬಿ ಮೋಸ ಹೋಗದಿರಿ ಎಂಬುದಾಗಿ ತಿಳಿಸಿದೆ.
ಎಚ್ಚರವಾಗಿರಿ! ನೈಜ ಮಾಹಿತಿ ಪಡೆಯಿರಿ! ವೀಡಿಯೋ, ಪೋಟೋಗಳಿಗೆ ಸಂಬಂಧಿಸಿದಂತೆ ಫ್ಯಾಕ್ಟ್ ಚೆಕ್ ಮಾಡೋದಕ್ಕೂ ವಿನಂತಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ವಿಡಿಯೋ ಗೇಮ್ ದೃಶ್ಯಗಳ ಹಾವಳಿ❗❗
ಇಂತಹ ಹಲವಾರು ಯುದ್ಧದ ವಿಡಿಯೋ ಗೇಮ್ ದೃಶ್ಯಗಳನ್ನು ಭಾರತ-ಪಾಕಿಸ್ತಾನ ಸಂಘರ್ಷದ ನೈಜ ದೃಶ್ಯಗಳೆಂದು ಬಿಂಬಿಸಲಾಗುತ್ತಿದೆ. ದಯವಿಟ್ಟು ಇಂತಹ ಪ್ರೊಪಗಾಂಡ ಪೋಸ್ಟ್‌ಗಳನ್ನು ನಂಬಿ ಮೋಸ ಹೋಗದಿರಿ.
📢 ಎಚ್ಚರವಾಗಿರಿ! ನೈಜ ಮಾಹಿತಿ ಪಡೆಯಿರಿ!#PIBFactCheck… pic.twitter.com/nRtkBzwV9m
— DIPR Karnataka (@KarnatakaVarthe) May 12, 2025
ರಾಜ್ಯ ಆರೋಗ್ಯ ಇಲಾಖೆಯ ‘NHM ನೌಕರ’ರಿಗೆ 2 ತಿಂಗಳಿಂದ ವೇತನವಿಲ್ಲ: ಪಾವತಿಗೆ ಸರ್ಕಾರಕ್ಕೆ ‘ಸಂಘ ಮನವಿ’