ಉತ್ತರಾಖಂಡ : ನಿನ್ನೆ (ಮಂಗಳವಾರ) ಉತ್ತರಾಖಂಡ್ನ ಪ್ರಸಿದ್ಧ ಕೇದಾರನಾಥ ಧಾಮದ ಬಳಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ನಲ್ಲಿದ್ದ ಏಳು ಜನರು ಸಾವನ್ನಪ್ಪಿದ್ದಾರೆ. ಯಾತ್ರಾರ್ಥಿಗಳನ್ನು ಹೊತ್ತ ಹೆಲಿಕಾಪ್ಟರ್ ಕೇದಾರನಾಥದಿಂದ ಫಾಟಾ ಹೆಲಿಪ್ಯಾಡ್ಗೆ ಹಾರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.
ಘಟನೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಅನಿಲ್ ಸಿಂಗ್(57) ಅವರು ಕೂಡ ಸಾವನ್ನಪ್ಪಿದ್ದಾರೆ. ಇವರು ಸಾವಿಗೀಡಾಗುವ ಒಂದು ದಿನದ ಮೊದಲು ತನ್ನ ಪತ್ನಿಗೆ ಫೋನ್ ಕರೆ ಮಾಡಿ ಮಾತನಾಡಿದ್ದರು. ಈ ವೇಳೆ ʻನನ್ನ ಮಗಳನ್ನು ನೋಡಿಕೊಳ್ಳಿ. ಅವಳಿಗೆ ಆರೋಗ್ಯ ಸರಿ ಇಲ್ಲʼ ಎಂದು ಸೋಮವಾರ ತನ್ನ ಪತ್ನಿಯೊಂದಿಗೆ ಮಾತನಾಡಿದ ಅನಿಲ್ ಸಿಂಗ್ ಅವರ ಕೊನೆಯ ಮಾತುಗಳಾಗಿವೆ.
ಮೃತ ಸಿಂಗ್ ಅವರು ಮಹಾನಗರದ ಅಂಧೇರಿ ಉಪನಗರದಲ್ಲಿ ಐಷಾರಾಮಿ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಶಿರೀನ್ ಆನಂದಿತಾ ಮತ್ತು ಮಗಳು ಫಿರೋಜಾ ಸಿಂಗ್ ಅವರನ್ನು ಅಗಲಿದ್ದಾರೆ.
BIGG NEWS : `KPSC’ ಯಿಂದ ವಿವಿಧ ಇಲಾಖೆಗಳ 730 ಹುದ್ದೆಗಳ ಫಲಿತಾಂಶ ಪ್ರಕಟ