ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ( Justice HP Sandesh ) ಅವರಿಗೆ ವರ್ಗಾವಣೆ ಬೆದರಿಕೆ ಪ್ರಕರಣ ಸಂಬಂಧ, ಈ ಬಗ್ಗೆ ಎಸ್ಐಟಿ ತನಿಖೆಗೆ ಆದೇಶಿಸುವಂತೆ ಇಂದು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ನ ( Karnataka High Court ) ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರನ್ನು ವರ್ಗಾವಣೆ ಮಾಡಿಸೋದಾಗಿ ಸಹ ನ್ಯಾಯಮೂರ್ತಿಯೊಬ್ಬರಿಗೆ ವ್ಯಕ್ತಿಯೊಬ್ಬ ಹೇಳಿದ್ದರು ಎಂಬುದಾಗಿ ಸ್ವತಹ ಅವರೇ ಬಿಚ್ಚಿಟ್ಟಿದ್ದರು. ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಕೂಡ ಗರಂ ಆಗಿತ್ತು.
ಇದೀಗ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಹೈಕೋರ್ಟ್ ಗೆ ವಕೀಲ ಎನ್ ರಮೇಶ್ ನಾಯ್ಕ್ ಎಂಬುವರು ಪಿಐಎಲ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಹೈಕೋರ್ಟ್ ಗೆ ಸಲ್ಲಿಸಿರುವಂತ ಅರ್ಜಿಯಲ್ಲಿ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿಗೆ ಭದ್ರತೆಯನ್ನು ನೀಡಬೇಕು. ಈ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ, ಎಸ್ಐಟಿ ಮೂಲಕ ತನಿಖೆಗೆ ಆದೇಶಿಸಬೇಕು ಎಂಬುದಾಗಿ ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.
BREAKING NEWS: ಎಡಿಜಿಪಿ ಅಮೃತ್ ಪಾಲ್ ಗೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ