ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸೈಕಲ್ ನಲ್ಲಿ ರಸ್ತೆ ದಾಡುತ್ತಿದ್ದ ವೇಳೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೆನಡಾದಲ್ಲಿ ನಡೆದಿದೆ.
ಮತ್ತೆ ಸಿಎಂ ಆಸೆ ವ್ಯಕ್ತ ಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಮೃತ ವಿದ್ಯಾರ್ಥಿಯನ್ನು ಕಾರ್ತಿಕ್ ಸೈನಿ ಎಂದು ಗುರುತಿಸಲಾಗಿದೆ. 2021ರ ಆಗಸ್ಟ್ನಲ್ಲಿ ಭಾರತದಿಂದ ಕೆನಡಾಕ್ಕೆ ತೆರಳಿದ್ದರು. ಕಾರ್ತಿಕ್ ಅವರ ಕುಟುಂಬವು ಹರಿಯಾಣದ ಕರ್ನಾಲ್ನಲ್ಲಿ ನೆಲೆಸಿದೆ ಎಂದು ತಿಳಿದು ಬಂದಿದೆ.
ಕಾರ್ತಿಕ್ ಕೆನಡಾದ ಶೆರಿಡನ್ ಕಾಲೇಜಿನಲ್ಲಿ ದಾಖಲಾಗಿದ್ದಾನೆ. ಕಾರ್ತಿಕ್ ಅವರ ದುರಂತ ಸಾವು ಸಮುದಾಯದ ನಡುವೆ ಅತೀವ ದುಃಖವನ್ನು ಉಂಟುಮಾಡಿದೆ, ಅವರ ಕುಟುಂಬ, ಸ್ನೇಹಿತರು, ಸಹಪಾಠಿಗಳು ಮತ್ತು ಶಿಕ್ಷಕರಿಗೆ ಆಳವಾದ ಸಹಾನುಭೂತಿಯನ್ನು ವ್ಯಕ್ತಪಡಿಸಿದೆ ಎಂದು ಕಾಲೇಜು ಮಂಡಳಿ ಇಮೇಲ್ ಮೂಲಕ ತಿಳಿಸಿದೆ.
ಕಾರ್ತಿಕ್ ಅತ್ಯಂತ ಸಭ್ಯ ಸ್ವಭಾವದವನಾಗಿದ್ದನು ಎಂದು ಎಂದು ಸೋದರಸಂಬಂಧಿ ದಿ ಸ್ಟಾರ್ಗೆ ತಿಳಿಸಿದ್ದು, ಮಗನ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಹಿಂದಿರುಗಿಸಬೇಕೆಂದು ಕುಟುಂಬ ಮನವಿ ಮಾಡಿದೆ.
ಬಸ್ ನಿಲ್ದಾಣದ ಗುಂಬಜ್ ತೆರವು ಮಾಡಿಸುತ್ತೇನೆ ಅಂದಿದ್ದ, ಮಾಡಿಸಿದ್ದೇನೆ – ಸಂಸದ ಪ್ರತಾಪ್ ಸಿಂಹ