ರಾಮನಗರ : ದೇಶಾದ್ಯಂತ ಪಿಎಫ್ಐ ಸಂಘಟನೆ ಬ್ಯಾನ್ ಮಾಡಲಾಗಿದೆ ಈ ಬಗ್ಗೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ , ಪಿಎಫ್ಐ ಬ್ಯಾನ್ ಮಾಡೋದ್ರಿಂದ ” ಸಮಾಜಘಾತಕ ಕೆಲಸಗಳು ನಿಲ್ಲುತ್ತವೆ ಅನ್ನೋದು ಸುಳ್ಳು” ಎಂದು ಕಿಡಿ ಕಾರಿದ್ದಾರೆ.
ಯಾರೇ ತಪ್ಪು ಮಾಡಿದ್ರೂ ಉಗ್ರವಾದ ಕ್ರಮ ಕೈಗೊಳ್ಳಬೇಕು. ಸಂಘಟನೆಗಳನ್ನು 5 ವರ್ಷ ಬ್ಯಾನ್ ಮಾಡಿದ್ದೇವೆ ಎನ್ನಬಹುದು. ಸಮಾಜಘಾತಕ ಶಕ್ತಿಗಳ ಹಿನ್ನೆಲೆ ಏನಿದೆ. ಕಾನೂನು ಬಾಹಿರ ಚಟುವಟಿಕೆ ಜನರ ಮುಂದಿಡಬೇಕು. ಸರ್ಕಾರ ಹೀಗೆ ಮಾಡದಿದ್ರೆ ಜನರಿಗೆ ಅಪನಂಬಿಕೆ ಬರುತ್ತೆ ಎಂದು ಕಿಡಿಕಾರಿದ್ದಾರೆ
ಇನ್ನೂ ಮಾಧ್ಯಮಗಳೊಂದಿಗೆ ಆರ್ಎಸ್ಎಸ್ ಬ್ಯಾನ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ. ಹತ್ತು ಹಲವಾರು ಸಂಸ್ಥೆ ಕಟ್ಟಿ ಬಡವರಿಗೆ ಸಹಾಯ ಮಾಡುತ್ತಿದೆ. ಆರ್ ಎಸ್ ಎಸ್ ಬ್ಯಾನ್ ಮಾಡಬೇಕನ್ನೋದು ಅರ್ಥಹೀನ ಎಂದರು.
ಬೆಕ್ಕಿನ ಕಣ್ಣಲ್ಲಿ ಇಲಿ ಅನ್ನೋ ರೀತಿ, ಆರ್ ಎಸ್ ಎಸ್ ಮೇಲೆ ಕಣ್ಣು ಎಂದು ಸಿದ್ದರಾಮಯ್ಯ ಸಿಎಂ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಪಿಎಫ್ ಐ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ. ಸಿದ್ದರಾಮಯ್ಯ ನಡೆಗೆ ಇದೇ ಸಾಕ್ಷಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.