ಹಾಸನ: ಕರ್ನಾಟಕ ರಾಜ್ಯದ ಕಾಕಂಬಿಯನ್ನ ಹೊರ ರಾಜ್ಯಕ್ಕೂ ಕೊಡಲು ಸ್ಥಳೀಯ ಕಂಪನಿಯನ್ನು ಹೊರಗಿಟ್ಟು ಗೋವಾ ಬಂದರಿನ ಮೂಲಕ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
BREAKING NEWS: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ದುಷ್ಕರ್ಮಿಗಳಿಂದ ತಲವಾರ್ ದಾಳಿಗೆ ಯತ್ನ
ಆದ್ರೆ, ರಾಜ್ಯ ಮತ್ತು ಹೊರ ರಾಜ್ಯಕ್ಕೂ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ಇಲ್ಲಿಯವರೆಗೂ ನನ್ನ ಕಚೇರಿಯಿಂದ ಆ ರೀತಿ ಅಕ್ರಮವಾಗಿಲ್ಲ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟನೆ ನೀಡಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ನಾನು ಇದುವರೆಗೂ ಯಾರ ಮೇಲೂ ಒತ್ತಡ ಹಾಕಿಲ್ಲ. ಕಾನೂನು ಬಿಟ್ಟು ಯಾವುದೇ ಕೆಲಸವನ್ನ ಮಾಡಿಲ್ಲ.
BREAKING NEWS: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ದುಷ್ಕರ್ಮಿಗಳಿಂದ ತಲವಾರ್ ದಾಳಿಗೆ ಯತ್ನ
ನನ್ನ ಮೇಲೆ ಬಂದಿರೋ ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್ ಬ್ಯಾಕ್ ಆರೋಪ ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆಗೆ ಕಾನೂನಿನಲ್ಲಿ ಏನು ಅವಕಾಶವಿದೆ ಅದನ್ನು ಮಾತ್ರ ಮಾಡಬಹುದು. ಈ ಬಗ್ಗೆ ಅಧಿಕಾರಿಗಳ ಮೇಲೆ ಯಾವ ಒತ್ತಡ ಹಾಕಿಲ್ಲ. ಕಾನೂನನ್ನು ಬಿಟ್ಟು ಯಾರು ಏನು ಮಾಡಲು ಆಗುವುದಿಲ್ಲ ಎಂದರು.