ಬೆಂಗಳೂರು: 2023ರ ಚುನಾವಣೆಯಲ್ಲಿ ( Karnataka Assembly Election 2023 ) ಕಾಂಗ್ರೆಸ್ ಅಧಿಕಾರಕ್ಕೆ ( Congress Party ) ಬರೋದಕ್ಕೆ ಬಿಡೋದಿಲ್ಲ ಅಂತ ಹೇಳೋದಕ್ಕೆ ಬಿಎಸ್ ಯಡಿಯೂರಪ್ಪ ( BS Yediyurappa ) ಯಾರು.? ಅವರೇನು ಜನರನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದಾರಾ.? ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿರ್ಧರಿಸೋದು ಜನರು. ಬಿಎಸ್ ವೈ ಅಲ್ಲ ಎಂಬುದಾಗಿ ರಾಜಾಹುಲಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಕೌಂಟರ್ ಕೊಟ್ಟಿದ್ದಾರೆ.
SHOCKING NEWS: ದುಬೈನಿಂದ ಕೊಚ್ಚಿಗೆ ಹೊರಟಿದ್ದ ವಿಮಾನದಲ್ಲಿ ಪ್ರಜ್ಞಾಹೀನಳಾಗಿ ಬಿದ್ದ ಮಹಿಳೆ ಸಾವು
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ಭಯ ಬಿಜೆಪಿ ನಾಯಕರಿಗೆ ಉಂಟಾಗಿದೆ. ಆ ಭಯದಿಂದಲೇ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಇಲ್ಲ ಅಂದ್ರೇ ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಾ ಇದ್ದರು. ಅವರಿಗೆ ಸಿದ್ಧರಾಮೋತ್ಸವದ ನಂತ್ರ ಸೋಲಿನ ಭಯ ಹುಟ್ಟಿಕೊಂಡಿದೆ ಎಂಬುದಾಗಿ ಹೇಳಿದರು.
ಇನ್ನೂ ದೊಡ್ಡಬಳ್ಳಾಪುರದ ಜನಸ್ಪದಂದನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯವರು ಇರೋವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡೋದಿಲ್ಲ ಎಂಬ ಮಾತಿಗೆ ಉತ್ತರಿಸಿದಂತ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರೋದನ್ನು ನಿರ್ಧರಿಸೋದು ಬಿಎಸ್ ಯಡಿಯೂರಪ್ಪ ಅಲ್ಲ. ಈ ರಾಜ್ಯದ ಜನರಾಗಿದ್ದಾರೆ ಎಂದರು.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಜೀವ ಬೆದರಿಕೆ ಹಾಕಿದ ಹತ್ಯೆ ಆರೋಪಿಯ ಸಹೋದರ ಅರೆಸ್ಟ್
ಯಡಿಯೂರಪ್ಪ ವೋಟ್ ಗಳನ್ನು ತಮ್ಮ ಜೇಬಿನಲ್ಲಿಯೇ ಇಟ್ಟುಕೊಂಡಿರೋ ತರ ಮಾತನಾಡುತ್ತಿದ್ದಾರೆ. ಅದು ಸಾಧ್ಯವಿಲ್ಲ. ಈಗಾಗಲೇ ಜನರು ಭ್ರಷ್ಟ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ನಿಶ್ಚಿತ ಎಂಬುದಾಗಿ ಹೇಳಿದರು.