Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಕ್ತಿನಗರ ಜನರಿಗೂ ಸಿಕ್ತು ‘ಶಕ್ತಿ’ಯ ಖುಷಿ : ಭಗೀರಥ ಪ್ರಯತ್ನದ ನಂತರ ಬಂದ ಸರ್ಕಾರಿ ಬಸ್ ಕಂಡು ಜನ ಫುಲ್ ಖುಷ್!
KARNATAKA

ಶಕ್ತಿನಗರ ಜನರಿಗೂ ಸಿಕ್ತು ‘ಶಕ್ತಿ’ಯ ಖುಷಿ : ಭಗೀರಥ ಪ್ರಯತ್ನದ ನಂತರ ಬಂದ ಸರ್ಕಾರಿ ಬಸ್ ಕಂಡು ಜನ ಫುಲ್ ಖುಷ್!

By kannadanewsnow57

ಮಂಗಳೂರು: ಬಂದರು ನಗರಿ ಮಂಗಳೂರಿನ ಶಕ್ತಿನಗರದ ಜನರಲ್ಲಿ ಎಂದಿಲ್ಲದ ಹರ್ಷ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಗ್ಯಾರೆಂಟಿ ಯೋಜನೆ ರಾಜ್ಯದ ಎಲ್ಲೆಡೆ ಮಹಿಳೆಯರ ಪಾಲಿಗೆ ಆಶಾಕಿರಣವಾದರೆ, ಖಾಸಗಿ ಬಸ್’ಗಳ ಪ್ರಾಬಲ್ಯವಿರುವ ದಕ್ಷಿಣ ಕನ್ನಡದ ಬಹುತೇಕ ಊರುಗಳ ಮಹಿಳೆಯರಿಗೆ ನಿಲುಕದ ಕುಸುಮದಂತಿದೆ. ಇಂತಹಾ ಸ್ಥಿತಿಯನ್ನು ಮನಗಂಡ ಸಾಮಾಜಿಕ ಹೋರಾಟಗಾರರೂ ಆದ ಮಂಗಳೂರಿನ ಹಿರಿಯ ವಕೀಲ ಮನೋರಾಜ್ ರಾಜೀವ್ ಅವರ ಕಾಳಜಿಯಿಂದ ಮಂಗಳೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸರ್ಕಾರಿ ಬಸ್ ಸಂಚರಿಸುವಂತಾಗಿದೆ.

ಮಂಗಳೂರಿನ ಶಕ್ತಿನಗರ ಅನನ್ಯ ಸಂಭ್ರಮಕ್ಕೆ ಸಾಕ್ಷಿಯಾಯಿತು. ಶಕ್ತಿನಗರ ಪದವು ವಾರ್ಡ್ ಸುತ್ತಮುತ್ತಲ ಜನರು ತಮ್ಮೂರಿಗೆ ಸರ್ಕಾರಿ ಬಸ್ ಬರಬೇಕು, ಶಕ್ತಿ ಯೋಜನೆಯ ಅನುಕೂಲ ತಮಗೂ ಸಿಗಬೇಕೆಂದು ಬಹುಕಾಲದಿಂದ ಒತ್ತಾಯಿಸುತ್ತಲೇ ಇದ್ದರು. ಜನಪ್ರತಿನಿಧಿಗಳು ಸ್ಪಂಧಿಸದಿದ್ದಾಗ ಮಾಜಿ ಸರ್ಕಾರಿ ವಕೀಲರೂ ಆದ ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ಘಟಕದ ಅಧ್ಯಕ್ಷರಾದ ಮನೋರಾಜ್ ರಾಜೀವ ಅವರು ಮಾಡಿದ ಕೆಲಸ ಎಂಪಿ-ಎಮ್ಮೆಲ್ಲೆಗಳನ್ನೂ ನಾಚಿಸುವಂತಿದೆ. ಶಕ್ತಿನಗರಕ್ಕೆ ಬಸ್ ಬಾರಿಸಬೇಕೆಂಬ ಈ ವಕೀಲರ ಭಗೀರಥ ಪ್ರಯತ್ನಕ್ಕೆ ಸ್ಥಳೀಯ ಜನರು ಅಭಿನಂಧಿಸಿದ್ದಾರೆ.

ಮಾಜಿ ಸರ್ಕಾರಿ ವಕೀಲ ಮನೋರಾಜ್ ರಾಜೀವ

ಶಕ್ತಿ ನಗರ ಸಮೀಪದ ಬಡಾವಣೆಗಳಿಗೆ ಕೆಎಸ್ಸಾರ್ಟಿಸಿ ಬಸ್ ಆರಂಭಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಲೇ ಇದ್ದರು. ಆದರೆ ಸಾರಿಗೆ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂಧಿಸಲಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳ ಆಲಸ್ಯದಿಂದಾಗಿ ಸಾರಿಗೆ ನಿಗಮದ ಅಧಿಕಾರಿಗಳೂ ಅಸಹಾಯಕರಾಗಿದ್ದರು. ಆ ಸಂದರ್ಭದಲ್ಲಿ ಹಠಕ್ಕೆ ಬಿದ್ದ ವಕೀಲ ಮನೋರಾಜ್ ಅವರು ಜಿಲ್ಲಾಡಳಿತಕ್ಕೆ ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿದರಲ್ಲದೆ, ಜನಪ್ರತಿನಿಧಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಸ್ ಬರಿಸಲೇಬೇಕೆಂದು ಹಠಕ್ಕೆ ಬಿದ್ದರು. ಇದನ್ನು ಅರಿತ ಶಾಸಕರಾದ ಐವಾನ್ ಡಿಸೋಜಾ, ಮಂಜುನಾಥ್ ಭಂಡಾರಿ ಕೂಡಾ ವಕೀಲರ ಕ್ರಮಕ್ಕೆ ಸಾಥ್ ನೀಡಿದರು. ಈ ಭಗೀರಥ ಪ್ರಯತ್ನದ ಫಲವಾಗಿ ಡಿಸೆಂಬರ್ 6ರಂದು ಕರ್ನಾಟಕ ಸಾರಿಗೆ ಬಸ್ ಸಂಚಾರ ಆರಂಭಿಸಿದೆ. ಅಷ್ಟೇ ಅಲ್ಲ, ಈ ಹಿಂದೆ ರದ್ದಾಗಿದ್ದ ಅದೇ ರೂಟ್’ನ ಹಳೆಯ ಬಸ್ ಪರ್ಮಿಟ್’ಗೂ ಜೀವ ಬಂದಿರುವುದು ವಿಶೇಷ.

ಹೊಸ ರೂಟ್’ಗೆ ಬಸ್ ಸಂಚಾರ ಆರಂಭ ಹಿನ್ನೆಲೆ ಶಕ್ತಿನಗರದಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ. ಎಲ್ಲೆಲ್ಲೂ ಬ್ಯಾನರ್ ಬ್ಯಾಂಟಿಂಗ್ ರಾರಾಜಿಸುತ್ತಿತ್ತು. ಊರ ಜನರ ಉಪಸ್ಥಿತಿಯಲ್ಲಿ, ಶಾಸಕರಾದ ಐವಾನ್ ಡಿಸೋಜಾ, ಮಂಜುನಾಥ್ ಭಂಡಾರಿ ಮುಂದಾಳುತ್ವದಲ್ಲಿ ಬಸ್ ಯಾನಕ್ಕೆ ಚಾಲನೆ ನೀಡಲಾಯಿತು. ಐವಾನ್ ಡಿಸೋಜಾರವರು ತೆಂಗಿನಕಾಯಿ ಹೊಡೆದು ಪ್ರಾರ್ಥಿಸಿದ ಕೈಂಕರ್ಯವೂ ಗಮನಕೇಂದ್ರೀಕರಿಸಿತು.

ಪದವು ಗ್ರಾಮದ ಪ್ರೀತಿನಗರ, ಸಂಜಯನಗರ, ಮುಗೋಡಿ, ನೇಜಿಗುರಿ, ಮಂಜಡ್ಕ, ಬೊಲ್ಯ ಪರಿಸರದ ನಿವಾಸಿಗಳ ಬಹುದಿನದ ಬೇಡಿಕೆ ಈಡೇರಿದ ಹರ್ಷದಲ್ಲಿ ಊರ ಜನ ಮಿಂದೆದ್ದರು. ಬಸ್ ಸಂಚಾರ ಆರಂಭ ಕುರಿತಂತೆ ಸಂತಸ ಹಂಚಿಕೊಂಡ ಹಿರಿಯ ವಕೀಲ ಮನೋರಾಜ್, ಊರ ಜನರ ಆಗ್ರಹಕ್ಕೆ ಸ್ಪಂಧಿಸಿದ ಐವನ್ ಡಿಸೋಜಾ, ಬಿ.ಕೆ. ಹರಿಪ್ರಸಾದ್, ಮಂಜುನಾಥ ಭಂಡಾರಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ, ಜಿಲ್ಲಾ ಸದಸ್ಯ ಅಲೆಸ್ಟನ್ ಡಿಕುನ್ಹಾ, ಶಾಂತಲಾ ಗಟ್ಟಿ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

People of Shaktinagar are happy with 'Shakti': People are happy to see the government bus that came after Bhagirath's efforts! ಶಕ್ತಿನಗರ ಜನರಿಗೂ ಸಿಕ್ತು 'ಶಕ್ತಿ'ಯ ಖುಷಿ : ಭಗೀರಥ ಪ್ರಯತ್ನದ ನಂತರ ಬಂದ ಸರ್ಕಾರಿ ಬಸ್ ಕಂಡು ಜನ ಫುಲ್ ಖುಷ್!
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

1 Min Read

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

2 Mins Read

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

1 Min Read
Recent News

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

ಕಾಕ್ರೋಚ್‌ ಜನತಾ ಪಾರ್ಟಿ ಎಕ್ಸ್‌ ಖಾತೆಗೆ ಭಾರತದಲ್ಲಿ ನಿರ್ಬಂಧ: ಯಾರಿದು ಅಭಿಜಿತ್ ದಿಪ್ಕೆ? ಇಲ್ಲಿದೆ ಮಾಹಿತಿ | Cockroach Janata Party

State News
KARNATAKA

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

By kannadanewsnow57 KARNATAKA 1 Min Read

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ…

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

ಸಾಗರದ ASP ಡಾ.ಬೆನಕ ಪ್ರಸಾದ್ ವರ್ಗಾವಣೆ: ಶಿವಮೊಗ್ಗ (ಎ) ಉಪವಿಭಾಗದ ನೂತನ ಎಎಸ್ಪಿಯಾಗಿ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.