ಉತ್ತರಕರ್ನಾಟಕ: ಇತ್ತೀಚಿಗೆ ವರುಣನ ಅಬ್ಬರಕ್ಕೆ ಜನರೆಲ್ಲ ತತ್ತರಿಸಿ ಹೋಗಿದ್ದರು. ಇದೀಗ ಮಳೆರಾಯ ಸ್ವಲ್ಪ ಕಡಿಮೆಯಾಗಿದ್ದು, ಚಳಿಯ ಅಬ್ಬರ ಜೋರಾಗಿದೆ.
BREAKING NEWS : ಜೀವ ಬೆದರಿಕೆ ಆರೋಪ : ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ `FIR’ ದಾಖಲು
ಮಳೆಯನ್ನು ಹೆಚ್ಚಿಗೆ ಕಂಡಿರದ ಪ್ರದೇಶಗಳಲ್ಲಿ ಇಡೀ ವಾತಾವರಣವೇ ಏರುಪೇರಾಗಿ ಹೋಗಿತ್ತು. ಅದರಿಂದ ಈಗಷ್ಟೇ ಆ ಜಿಲ್ಲೆಗಳಲ್ಲಿ ಚೇತರಿಸಿಕೊಳ್ಳುತ್ತಿರುವ ಜನರಿಗೆ ಚಳಿ ಹಿಡಿಸಲು ಚಳಿರಾಯ ತುದಿಗಾಲಿನಲ್ಲಿ ನಿಂತಿದ್ದಾನೆ.
ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿನ ಹೆಚ್ಚು ತಾಪಮಾನ ಇರುವ ಜಿಲ್ಲೆಗಳ ಜನರ ಪಾಡಂತೂ ಹೇಳತೀರದು. ಆ ಜಿಲ್ಲೆಗಳಲ್ಲಿ ಈಗ ಚಳಿಯೂ ಸಹ ಮಳೆಯಂತೆಯೇ ಅಬ್ಬರಿಸಲಿದೆ ಎನ್ನುವ ಆಘಾತಕಾರಿ ಅಂಶವನ್ನು ಹವಾಮಾನ ತಜ್ಞರು ಹೇಳಿದ್ದಾರೆ.
BREAKING NEWS : ಜೀವ ಬೆದರಿಕೆ ಆರೋಪ : ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ `FIR’ ದಾಖಲು
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಇಡೀ ಉತ್ತರ ಕರ್ನಾಟಕ ವ್ಯಾಪ್ತಿ ಹೊಂದಿರುವ ಕೃಷಿ ಹವಾಮಾನ ಮುನ್ಸೂಚನಾ ಕೇಂದ್ರವಿದ್ದು, ಈ ಕೇಂದ್ರದ ಈಗಾಗಲೇ ಚಳಿಯ ಲೆಕ್ಕಾಚಾರ ಹಾಕಿದೆ. ಮಳೆಯಂತೆಯೇ ಈ ಸಲ ಚಳಿಯೂ ಕಾಡಲಿದೆ ಎಂದು ಹವಾಮಾನ ತಜ್ಞ ಡಾ. ಆರ್. ಎಚ್. ಪಾಟೀಲ ಅವರು ಮುನ್ಸೂಚನೆ ನೀಡಿದ್ದಾರೆ.
ಸಾಮಾನ್ಯವಾಗಿ ಚಳಿ ಹೆಚ್ಚಾಗುವುದು ಡಿಸೆಂಬರ್ ಮೂರನೇ ವಾರದ ಬಳಿಕ. ಆದರೆ ಈ ಬಾರಿ ಚಳಿ ನವೆಂಬರ್ ಆರಂಭದಲ್ಲಿಯೇ ಶುರುವಾಗಿದೆ. ನವೆಂಬರ್ 24ರಿಂದ ಚಳಿ ಜನರನ್ನು ಹೆಚ್ಚು ನಡುಗಿಸಲಿದೆ. ಅದರ ಮುನ್ಸೂಚನೆ ಎಂಬಂತೆ ಈಗಾಗಲೇ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆಯಾದರೂ ಜನ ಚಳಿಯಿಂದಾಗಿ ಹೊರಗೆ ಬರುತ್ತಿಲ್ಲ.