ಬೆಂಗಳೂರು: 3 ವರ್ಷದಲ್ಲಿ 30 ಹಗರಣ!ಹಗರಣ ಬಾಲ ಬೆಳೆಯುತ್ತಲೇ ಇದೆ! ಕಾಂಗ್ರೆಸ್ ತಾಕತ್ತು ದಮ್ಮು ಹಾನಗಲ್ ಉಪ ಚುನಾವಣೆಯಲ್ಲಿ ಜನರೇ ಬೊಮ್ಮಾಯಿಗೆ ( CM Bommai ) ತೋರಿಸಿದ್ದಾರೆ ಎಂಬುದಾಗಿ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ( Congress spokesperson Ramesh Babu ) ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ( Twitter ) ಮಾಡಿರುವಂತ ಅವರು, ಕಾಂಗ್ರೆಸ್ ತಾಕತ್ತು ದಮ್ಮು ಹಾನಗಲ್ ಉಪ ಚುನಾವಣೆಯಲ್ಲಿ ಜನರೇ ಬೊಮ್ಮಾಯಿಗೆ ತೋರಿಸಿದ್ದಾರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಪದವಿ ಹರಾಜಿಗಿದೆ ಎನ್ನುವ ಯತ್ನಾಳ್ ಆರೋಪದ ಪಲಾನುಭವಿ ನೀವೇನಾ? ಬಿಟ್ ಕಾಯಿನ್ ಆರೋಪದಿಂದ 40 ಪರ್ಸೆಂಟ್ ಆರೋಪದವರೆಗೆ ಭ್ರಷ್ಟೋತ್ಸವದ ರೂವಾರಿ ನೀವೇ ಬೊಮ್ಮಾಯಿ ಅವರೇ ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ಈ ಟ್ವಿಟ್ ನೊಂದಿಗೆ ಅವರು ರಾಜ್ಯ ಬಿಜೆಪಿ ಸರ್ಕಾರದ ದೊಡ್ಡ ಹಗರಣಗಳ ಪಟ್ಟಿಯನ್ನೇ ನೀಡಿದ್ದು, ಅಂದಾಜು ಸಮಿತಿ ಸದಸ್ಯರ ಮೇಲೆ ಗುಂಡಾಗಿರಿ ಪ್ರಕರಣ ನಡೆಸಿದೆ. ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಬಿಜೆಪಿ ಸರ್ಕಾರದ ವೇಳೆಯಲ್ಲಿಯೇ ನಡೆದಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಹಗರಣ ಬಯಲಿಗೆ ಬಂದಿದೆ. ಸಾರಿಗೆ ಇಲಾಖೆಯ ಅಕ್ರಮ, ಬೇಡ ಜಂಗಮ ಹೆಸರಿನಲ್ಲಿ ರೇಣುಕಾಚಾರ್ಯ ಸುಳ್ಳು ಜಾತಿ ಪ್ರಮಾಣಪತ್ರ ಸೇರಿದಂತೆ 30 ಹಗರಣಗಳ ಪಟ್ಟಿಯನ್ನೇ ನೀಡಿದ್ದಾರೆ.
3ವರ್ಷದಲ್ಲಿ 30 ಹಗರಣ!ಹಗರಣ ಬಾಲ ಬೆಳೆಯುತ್ತಲೇ ಇದೆ!
ಕಾಂಗ್ರೆಸ್ ತಾಕತ್ತು ದಮ್ಮು ಹಾನಗಲ್ ಉಪ ಚುನಾವಣೆಯಲ್ಲಿ ಜನರೇ ಬೊಮ್ಮಾಯಿಗೆ ತೋರಿಸಿದ್ದಾರೆ
ಬಿಜೆಪಿಯಲ್ಲಿ ಮುಖ್ಯಮಂತ್ರಿ ಪದವಿ ಹರಾಜಿಗಿದೆ ಎನ್ನುವ ಯತ್ನಾಳ್ ಆರೋಪದ ಪಲಾನುಭವಿ ನೀವೇನಾ? ಬಿಟ್ ಕಾಯಿನ್ ಆರೋಪದಿಂದ 40 ಪರ್ಸೆಂಟ್ ಆರೋಪದವರೆಗೆ ಭ್ರಷ್ಟೋತ್ಸವದ ರೂವಾರಿ ನೀವೇ ಬೊಮ್ಮಾಯಿಅವರೇ pic.twitter.com/ck7lIXkghQ— Ramesh Babu (@RameshBabuKPCC) September 10, 2022